ಕೆಂಪಂಗಿ ಸೈನ್ಯದ ಅಭಿಮಾನಿಗಳ ಆತ್ಮವಿಶ್ವಾಸಕ್ಕೆ ಕಾರಣವೇನು?
ಟ್ರೋಫಿ ವನವಾಸಕ್ಕೆ ಬ್ರೇಕ್ ಬೀಳುತ್ತಾ ಎನ್ನುವುದು ಫ್ಯಾನ್ಸ್ ಕಾತರ
42 ಎಸೆತ ಸ್ಫೋಟಕ 101 ರನ್ ಸಿಡಿಸಿದ ಆಫ್ರಿಕಾದ ವಿಲ್ ಜಾಕ್ಸ್
ಐಪಿಎಲ್ ಹಂಗಾಮಕ್ಕೆ ಇನ್ನೂ 3 ತಿಂಗಳ ಬಾಕಿ ಇದೆ. ಈ ಸಲ ಏನೇ ಆದ್ರೂ ಸೈ ಆರ್ಸಿಬಿ ಟ್ರೋಫಿ ಎತ್ತಿ ಹಿಡಿಯುತ್ತೆ. ಹೇಟರ್ಸ್ ಬಾಯಿ ಮುಚ್ಚಿಸ್ತೀವಿ ಅಂತ ಆರ್ಸಿಬಿ ಫ್ಯಾನ್ಸ್ ಫುಲ್ ಕಾನ್ಫಿಡೆಂಟ್ನಲ್ಲಿದ್ದಾರೆ. ಅಷ್ಟಕ್ಕೂ ಕೆಂಪಂಗಿ ಸೈನ್ಯದ ಅಭಿಮಾನಿಗಳ ಆತ್ಮವಿಶ್ವಾಸಕ್ಕೆ ಕಾರಣವಾದ್ರು ಏನು?.
ಇಂಡಿಯನ್ ಪ್ರೀಮಿಯರ್ ಲೀಗ್. ಕ್ರಿಕೆಟ್ನ ಅಸಲಿ ಮಹಾಜಾತ್ರೆ ಬಂದೇ ಬಿಡ್ತು. ಮಿಲಿಯರ್ ಡಾಲರ್ ಟೂರ್ನಿಗೆ 3 ತಿಂಗಳಷ್ಟೇ ಬಾಕಿ ಇದೆ. ಆದ್ರೆ ಆರ್ಸಿಬಿ ಅಭಿಮಾನಿಗಳನ್ನ ಈಗಿನಿಂದಲೇ ಹಿಡಿಯೋಕೆ ಆಗ್ತಿಲ್ಲ. ಈ ಸಲ ಕಪ್ ಗೆದ್ದೇ ಗೆಲ್ತೀವಿ. ಟ್ರೋಫಿ ವನವಾಸಕ್ಕೆ ಬ್ರೇಕ್ ಬೀಳ್ತಿ ಅನ್ನೋ ಅತೀವ ಆತ್ಮವಿಶ್ವಾಸದಲ್ಲಿದ್ದಾರೆ. ಅದಕ್ಕೆ ಕಾರಣವೂ ಇದೆ. ಅದೇನಂದ್ರೆ ಆರ್ಸಿಬಿ ಪ್ಲೇಯರ್ಸ್ ಪ್ರಚಂಡ ಫಾರ್ಮ್ನಲ್ಲಿದ್ದಾರೆ. ಆಯಾ ದೇಶ ಹಾಗೂ ಫ್ಯಾಂಟಸಿ ಲೀಗ್ಗಳಲ್ಲಿ ರನ್ ಹೊಳೆಯನ್ನೇ ಹರಿಸ್ತಿದ್ದಾರೆ.
ಸೌತ್ ಆಫ್ರಿಕಾ ಟ್ವೆಂಟಿ ಲೀಗ್ನಲ್ಲಿ ವಿಲ್ ಜಾಕ್ಸ್ ವೀರಾವೇಶ..!
ಆರ್ಸಿಬಿ ಬ್ಯಾಟಿಂಗ್ ಆಲ್ರೌಂಡರ್ ವಿಲ್ ಜಾಕ್ಸ್ ಸೌತ್ ಆಫ್ರಿಕಾ 20 ಲೀಗ್ನಲ್ಲಿ ರನ್ ಸುನಾಮಿ ಎಬ್ಬಿಸಿದ್ದಾರೆ. ಡರ್ಬನ್ಸ್ ಸೂಪರ್ ಜೇಂಟ್ಸ್ ವಿರುದ್ಧ 42 ಎಸೆತಗಳಲ್ಲಿ ಸ್ಫೋಟಕ 101 ರನ್ ಗಳಿಸಿದ್ದಾರೆ. ಹಿಂದಿನ ಪಂದ್ಯದಲ್ಲೂ ಬಿರುಸಿನ ಅರ್ಧಶತಕ ಗಳಿಸಿದ್ರು. ಇದೇ ಆರ್ಭಟವನ್ನ ಜಾಕ್ಸ್ ಐಪಿಎಲ್ನಲ್ಲಿ ಮುಂದುವರಿಸುವ ಇರಾದೆಯಲ್ಲಿದ್ದಾರೆ.
ಸಾಲಿಡ್ ಫಾರ್ಮ್ನಲ್ಲಿ ರಜತ್ ಪಟಿದಾರ್..!
ಇನ್ನು ಆರ್ಸಿಬಿ ತಂಡದ ಯಂಗ್ಗನ್ ರಜತ್ ಪಟಿದಾರ್ ರನ್ ಕೊಳ್ಳೆ ಹೊಡೆಯುತ್ತಿದ್ದಾರೆ. ಭಾರತ ಪರ ಆಡುತ್ತಿರುವ ರಜತ್ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಅನಧಿಕೃತ ಟೆಸ್ಟ್ನಲ್ಲಿ ಸೆಂಚುರಿ ಸಿಡಿಸಿ ಸೈ ಅನ್ನಿಸಿಕೊಂಡಿದ್ದಾರೆ. ಅಲ್ಲದೇ ಇತ್ತೀಚೆಗೆ ಮುಗಿದ ಲಿಸ್ಟ್ ಎ ಪಂದ್ಯಗಳಲ್ಲಿ ರನ್ ಸರಮಾಲೆಯನ್ನೆ ಕಟ್ಟಿದ್ರು.
ಸುಯಶ್ ಪ್ರಭುದೇಸಾಯಿ ರನ್ ಪರಾಕ್ರಮ..!
26 ರ ಸುಯಶ್ ಪ್ರಭುದೇಸಾಯಿ ಆರ್ಸಿಬಿ ಪರ ಘರ್ಜಿಸಿರೋದು ನಿಮಗೆಲ್ಲರಿಗೂ ಗೊತ್ತೇ ಇದೆ. ಈಗ ಇದೇ ಗೋವಾ ಪುತ್ತರ್ ಕಲರ್ಫುಲ್ ಟೂರ್ನಿಗೂ ಮುನ್ನ ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ರನ್ ಭರಾಟೆ ನಡೆಸಿದ್ದಾರೆ. ಛತ್ತೀಸ್ಗಢ್ ವಿರುದ್ಧ 197 ರನ್ ಸಿಡಿಸಿದ್ದು, ಐಪಿಎಲ್ನಲ್ಲಿ ರನ್ ಕೊಳ್ಳೆ ಹೊಡೆಯೋ ಭರವಸೆ ಮೂಡಿಸಿದ್ದಾರೆ.
ಚುಟುಕು ದಂಗಲ್ನಲ್ಲಿ ರೀಸಿ ಟಾಪ್ಲಿ ಕಮಾಲ್
ಬರೀ ಬ್ಯಾಟ್ಸ್ಮನ್ಗಳು ಅಷ್ಟೇ ಅಲ್ಲ, ಆರ್ಸಿಬಿ ಬೌಲರ್ಸ್ ಕೂಡ ಬಾಲ್ ಹಿಡಿದು ಸಖತ್ ಮೋಡಿ ಮಾಡ್ತಿದ್ದಾರೆ. ಆ ಪೈಕಿ ರೀಸಿ ಟಾಪ್ಲಿ ಟಾಪ್ ಕ್ಲಾಸ್ ಆಟವಾಡ್ತಿದ್ದಾರೆ. ಸೌತ್ ಆಫ್ರಿಕಾ ಟ್ವೆಂಟಿ ಲೀಗ್ನಲ್ಲಿ ಟಾಪ್ಲಿ ಆಡಿದ 3 ಪಂದ್ಯಗಳಲ್ಲೆ 7 ವಿಕೆಟ್ ಭೇಟೆಯಾಡಿದ್ದಾರೆ. 2 ಬಾರಿ ತಲಾ ಮೂರು 3 ವಿಕೆಟ್ ಪಡೆದಿದ್ದಾರೆ.
ಲಾಕಿ ಫರ್ಗ್ಯೂಸನ್ ಆರ್ಭಟಕ್ಕೆ ಬ್ರೇಕ್ ಹಾಕೋರೆ ಇಲ್ಲ.!
ಶರವೇಗಿ ಲಾಕಿ ಫರ್ಗ್ಯೂಸನ್ ದಾಳಿಗಿಳಿದ್ರೆ ಸಾಕು ಬ್ಯಾಟ್ಸ್ಮನ್ ಗಾಬರಿ ಬೀಳ್ತಾರೆ. ಇಂತಹ ಟೆರರ್ ಬೌಲರ್ ಪಾಕಿಸ್ತಾನ ವಿರುದ್ಧ ಬೆಂಕಿ ಉಗುಳಿದ್ದಾರೆ. ಎರಡು ಪಂದ್ಯದಿಂದ 3 ವಿಕೆಟ್ ಕಬಳಿಸಿ ಶೈನ್ ಆಗಿದ್ದಾರೆ. ಅಲ್ಲದೇ ಸೂಪರ್ ಸ್ಮ್ಯಾಶ್ ಲೀಗ್ನಲ್ಲಿ ಸೂಪರ್ ಫರ್ಮಾಮೆನ್ಸ್ ನೀಡಿದ್ರು.
ಸದ್ಯ ಇವರ ಸಾಲಿಡ್ ಫಾರ್ಮ್ ನಿಂದ ಆರ್ಸಿಬಿ ಮ್ಯಾನೇಜ್ಮೆಂಟ್ ಫುಲ್ ಖುಷ್ ಆಗಿರೋದಂತೂ ಸುಳ್ಳಲ್ಲ. ಇದೇ ಆರ್ಭಟವನ್ನ ಐಪಿಎಲ್ ಅಖಾಡದಲ್ಲಿ ತೋರಿ, ಸುದೀರ್ಘ ವರ್ಷಗಳ ಕಪ್ ವನವಾಸಕ್ಕೆ ಮುಕ್ತಿ ಹಾಡುವಂತಾಗಲಿ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ