ವಿರಾಟ್ ಕೊಹ್ಲಿ ಕ್ರೀಡಾ ಜಗತ್ತು ಕಂಡ ಶ್ರೇಷ್ಠ ಕ್ರಿಕೆಟಿಗ!
ಕೊಹ್ಲಿ 49ನೇ ಶತಕದ ಬಗ್ಗೆ ಕೇಳಿದ್ದಕ್ಕೆ ಉರ್ಕೊಂಡಿದ್ದ ಕ್ರಿಕೆಟರ್
ಕೊನೆಗೂ ವಿರಾಟ್ ಕೊಹ್ಲಿ ಗೆ ಕ್ಷಮೆ ಕೇಳಿದ ಕುಸಲ್ ಮೆಂಡೀಸ್
ಅಂದು 2023 ನವೆಂಬರ್ 5ನೇ ತಾರೀಕು, ನಮ್ಮ ಕಿಂಗ್ ಕೊಹ್ಲಿ ಬರ್ತ್ಡೇ! ಕೋಲ್ಕತ್ತಾದ ಈಡನ್ ಗಾರ್ಡನ್ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದಿದ್ದಕ್ಕಿಂತ ವಿರಾಟ ಕೊಹ್ಲಿಯ ವೀರಾವೇಷವೇ ಸೆನ್ಸೇಷನ್ ಸೃಷ್ಟಿಸಿತ್ತು. ಎಲ್ಲರೂ ಅಸಾಧ್ಯ ಎಂದಿದ್ದ ದಾಖಲೆಯನ್ನು 35ನೇ ವಸಂತಕ್ಕೆ ಕಾಲಿಟ್ಟ ದಿನವೇ ಕಿಂಗ್ ಕೊಹ್ಲಿ, ಸರಿಗಟ್ಟಿದ ರೀತಿ ಹಾಗಿತ್ತು. ಕ್ರಿಕೆಟ್ ಕಾಶಿಯಲ್ಲಿ ಕಿಂಗ್ ಕೊಹ್ಲಿ ಕಟ್ಟಿದ್ದು ಅಂತಾ ಕ್ಲಾಸಿಕ್ ಇನ್ನಿಂಗ್ಸ್.
ರಾಜಗಾಂಭೀರ್ಯದಲ್ಲಿ ಕಣಕ್ಕಿಳಿದ ಕಿಂಗ್ ಕೊಹ್ಲಿಯ ಎಂಟ್ರಿಯೇ ಹರಿಣಗಳ ಪಡೆಯಲ್ಲಿ ನಡುಕ ಹುಟ್ಟಿಸಿತ್ತು. ಆರಂಭದಲ್ಲೇ ಆರ್ಭಟಿಸಲು ಶುರುವಿಟ್ಟುಕೊಳ್ತಿದ್ದಂತೆ, ಫ್ಯಾನ್ಸ್ ವಲಯದಲ್ಲಿ ಸೆಂಚುರಿ ಇನ್ನಿಂಗ್ಸ್ ಪಕ್ಕಾ ಆಗಿತ್ತು. ಅಷ್ಟು ಪರ್ಫೆಕ್ಟ್ ಆಗಿ ಇನ್ನಿಂಗ್ಸ್ ಸ್ಟಾರ್ಟ್ ಮಾಡಿದ್ರು ವಿರಾಟ್.
ಸೌತ್ ಆಫ್ರಿಕಾದ ದಮನಕಾರಿ ಬೌಲಿಂಗ್ ದಾಳಿಯನ್ನ ದಿಟ್ಟವಾಗಿ ಎದುರಿಸಿದ ಕೊಹ್ಲಿ 205 ನಿಮಿಷಗಳ ಕಾಲ ಕ್ರೀಸ್ ಕಚ್ಚಿ ನಿಂತಿದ್ರು. 121 ಎಸೆತವನ್ನ ಸಮರ್ಥವಾಗಿ ಎದುರಿಸಿ, 10 ಬೌಂಡರಿ ಸಹಿತ 101 ರನ್ ಚಚ್ಚಿ ಅಜೇಯರಾಗುಳಿದ್ರು.
ಇನ್ನು, ಕೊಹ್ಲಿ 49ನೇ ಶತಕ ಸಿಡಿಸೋ ಮೂಲಕ ಸಚಿನ್ ತೆಂಡೂಲ್ಕರ್ ದಾಖಲೆ ಸರಿಗಟ್ಟಿದ್ರು. ಈ ಬಗ್ಗೆ ಶ್ರೀಲಂಕಾದ ಕ್ಯಾಪ್ಟನ್ ಕುಸಲ್ ಮೆಂಡೀಸ್ಗೆ, ಕೊಹ್ಲಿ ವಿಶ್ವದಾಖಲೆ ಶತಕದ ಬಗ್ಗೆ ನೀವೇನು ಹೇಳಲು ಬಯಸುತ್ತೀರಿ? ಎಂದು ಜರ್ನಲಿಸ್ಟ್ ಒಬ್ಬರು ಪ್ರಶ್ನೆ ಕೇಳಿದ್ರು. ಇದಕ್ಕೆ ನಾನೇಕೆ ವಿಶ್ ಮಾಡಬೇಕು? ಎಂದು ಕುಸಲ್ ಮೆಂಡೀಸ್ ರೀಪ್ಲೆ ಮಾಡಿದ್ರು. ಅದಕ್ಕೀಗ ಕುಸಲ್ ಮೆಂಡೀಸ್ ಮತ್ತೆ ಕ್ಷಮೆ ಕೇಳಿದ್ದಾರೆ.
ಕೊಹ್ಲಿಗೆ ಕ್ಷಮೆ ಕೇಳಿದ ಕುಸಲ್ ಮೆಂಡೀಸ್!
ವಿರಾಟ್ ಕೊಹ್ಲಿ ಜಗತ್ತು ಕಂಡ ಶ್ರೇಷ್ಠ ಕ್ರಿಕೆಟರ್. ಅಂದು ನಾನು ಹಾಗೇ ಮಾತಾಡಬಾರದಿತ್ತು. ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ 50 ಶತಕ ಸಿಡಿಸಿ ಸಚಿನ್ ದಾಖಲೆ ಮುರಿದಿದ್ದಾರೆ. ಅವರನ್ನು ನೋಡುತ್ತಾ ಬೆಳೆದಿದ್ದೇನೆ. ಕೊಹ್ಲಿ ನನಗೆ ಎಂದಿಗೂ ಸ್ಫೂರ್ತಿ, ನನ್ನಿಂದ ಯಾರಿಗಾದ್ರೂ ಹರ್ಟ್ ಆಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಖಾಸಗಿ ಯೂಟ್ಯೂಬ್ ಚಾನೆಲ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ