ಒಂದೇ ಒಂದು ಅಂತರಾಷ್ಟ್ರೀಯ ಪಂದ್ಯವನ್ನ ಆಡದ ಅನುಭವವಿಲ್ಲ
ಮೊಯಿನ್, ಆದಿಲ್ ರಶೀದ್ರ ಸ್ಥಾನ ತುಂಬುವರೇ ಯಂಗ್ ಸ್ಟಾರ್.!
ಅಂತರಾಷ್ಟ್ರೀಯ ಪಂದ್ಯವನ್ನಾಡಿದ ಅನುಭವವೇ ಇಲ್ಲದ ಯುವಕ
ಇಂಡೋ -ಇಂಗ್ಲೆಂಡ್ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಎಲ್ಲರಲ್ಲೂ ಅಚ್ಚರಿ, ಆಶ್ಚರ್ಯ, ಕುತೂಹಲದ ಪ್ರಶ್ನೆಯೇ ತುಂಬಿವೆ. ಕ್ರಿಕೆಟ್ ಎಕ್ಸ್ಪರ್ಟ್ಗಳು, ಮಾಜಿ ಕ್ರಿಕೆಟರ್ಸ್, ಅಭಿಮಾನಿಗಳು ಎಲ್ಲರೂ ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ. ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಕೂಡ ಸ್ಪಲ್ಪ ಟೆನ್ಶನ್ಗೊಳಗಾಗಿದೆ. ಇದಕ್ಕೆಲ್ಲ ಕಾರಣ 20 ವರ್ಷದ ಯುವ ಸ್ಪಿನ್ನರ್. ಯಾರು ಆ ಸ್ಪಿನ್ನರ್, ಏನಿದು ಕಥೆ?.
ಕಳೆದ ವರ್ಷ ಸೌತ್ ಆಫ್ರಿಕಾದ ಕೇಪ್ಟೌನ್ನಲ್ಲಿ ಟೆಸ್ಟ್ ಗೆದ್ದು ಇತಿಹಾಸ ರಚಿಸಿದ ಟೀಮ್ ಇಂಡಿಯಾ, ಹೊಸ ವರ್ಷದ ಮೊದಲ ಟೆಸ್ಟ್ಗೆ ಸಜ್ಜಾಗ್ತಿದೆ. ತವರಿನಂಗಳದಲ್ಲಿ ನಡೆಯೋ ಟೆಸ್ಟ್ ಸರಣಿಯಲ್ಲಿ ಆಂಗ್ಲರ ಎದುರು ದಿಗ್ವಿಜಯ ಸಾಧಿಸೋ ಛಲ ತಂಡದಲ್ಲಿದೆ. ಆಟಗಾರರು ಕೂಡ ಹೊಸ ಹುರುಪಿನಲ್ಲಿ ತಯಾರಾಗಿದ್ದಾರೆ. ಆದ್ರೆ, ಟೀಮ್ ಮ್ಯಾನೇಜ್ಮೆಂಟ್ ಎದುರಾಳಿ ತಂಡವನ್ನ ನೋಡಿ ಸ್ವಲ್ಪ ಗೊಂದಲಕ್ಕೆ ಒಳಗಾಗಿದೆ.
ಭಾರತದ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದು ಬೀಗಲು ಇಂಗ್ಲೆಂಡ್ ತಂಡ ಈ ಬಾರಿ ಮಾಸ್ಟರ್ ಪ್ಲಾನ್ ರೂಪಿಸಿದೆ. ತಂಡದ ಆಯ್ಕೆಯಲ್ಲೇ ಆಂಗ್ಲ ಪಡೆ ಹೊಸ ತಂತ್ರ ಹೆಣೆದಿದೆ. ಹೇಳಿ ಕೇಳಿ ಭಾರತದ ಪಿಚ್ಗಳು ಸ್ಪಿನ್ಗೆ ಹೆಚ್ಚು ಸಹಕಾರಿ. ಹೀಗಾಗಿ ಸ್ಪಿನ್ ಪಿಚ್ ಲಾಭವನ್ನ ಪಡೆಯಲು ಇಂಗ್ಲೆಂಡ್ ಹೊಸ ದಾಳ ಉರುಳಿಸಿದೆ.
ತಂಡದಲ್ಲಿ 20 ವರ್ಷದ ಸ್ಪಿನ್ನರ್, ಎಲ್ಲರಿಗೂ ಅಚ್ಚರಿ.!
ಬೆನ್ ಸ್ಟೋಕ್ಸ್ ನೇತೃತ್ವದ 16 ಆಟಗಾರರ ತಂಡವನ್ನ ಭಾರತದ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಮಾಡಲಾಗಿದೆ. ಈ 16 ಮಂದಿಯ ಪೈಕಿ ಒಬ್ಬನ ಆಯ್ಕೆ ಎಲ್ಲರು ಬಾಯಿ ಮೇಲೆ ಬೆರಳಿಟ್ಟುಕೊಂಡು ಯೋಚಿಸುವಂತೆ ಮಾಡಿದೆ. ಯಾಕಂದ್ರೆ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯಂತಹ ವಿಶ್ವ ಶ್ರೇಷ್ಠ ಆಟಗಾರರನ್ನ ಹೊಂದಿರೋ ಟೀಮ್ ಇಂಡಿಯಾವನ್ನ ಎದುರಿಸಲು ಕೇವಲ 20ರ ಅನಾನುಭವಿಗೆ ಆಂಗ್ಲ ಪಡೆ ಮಣೆ ಹಾಕಿದೆ.
ಇಂಗ್ಲೆಂಡ್ ತಂಡದ ಮಣೆ ಹಾಕಿರುವ ಯುವ ಸ್ಪಿನ್ನರ್ ಹೆಸರು ಶೋಯೆಬ್ ಬಶೀರ್ ಅಂತ. ಇಂಟರೆಸ್ಟಿಂಗ್ ವಿಚಾರ ಏನಪ್ಪಾ ಅಂದ್ರೆ, ಈ ಯಂಗ್ ಟ್ಯಾಲೆಂಟ್ಗೆ ಒಂದೇ ಒಂದು ಅಂತರಾಷ್ಟ್ರೀಯ ಪಂದ್ಯವನ್ನ ಆಡಿದ ಅನುಭವವೇ ಇಲ್ಲ. ಆದ್ರೂ, ಇಂಗ್ಲೆಂಡ್ ತಂಡದಲ್ಲಿ ಚಾನ್ಸ್ ಸಿಕ್ಕಿರೋದ್ರ ಹಿಂದಿನ ಸೀಕ್ರೆಟ್, ಸ್ಪಿನ್ ಫ್ರೆಂಡ್ಲಿ ಕಂಡೀಷನ್ಸ್. ಸ್ಪಿನ್ನರ್ಗಳಿಗೆ ಹೆಚ್ಚು ನೆರವಾಗೋ ಪಿಚ್ನಲ್ಲಿ ಈ ಫಿಂಗರ್ ಸ್ಪಿನ್ನರ್ ತಂಡದ ಬಲ ಹೆಚ್ಚಿಸ್ತಾರೆ ಅನ್ನೋದು ಆಯ್ಕೆ ಹಿಂದಿನ ಲೆಕ್ಕಾಚಾರ.
ಶಾಕಿಂಗ್ ಎಂಟ್ರಿ ಕೊಟ್ಟ ಈ ಶೋಯೆಬ್ ಬಶೀರ್ ಯಾರು.?
ಇಂಗ್ಲೆಂಡ್ ತಂಡಕ್ಕೆ ಆಯ್ಕೆಯಾದ ಮೇಲೆ ನಿಮಗೂ ಈ ಪ್ರಶ್ನೆ ಕಾಡಿರುತ್ತೆ. ಈ ಶೋಯೇಬ್ ಬಶೀರ್ ಕುಟುಂಬದ ಮೂಲ ಪಾಕಿಸ್ತಾನ. ಆದ್ರೆ, ಈ ಯಂಗ್ ಟ್ಯಾಲೆಂಟ್ ಹುಟ್ಟಿದ್ದು ಬೆಳೆದಿದ್ದು ಇಂಗ್ಲೆಂಡ್ನಲ್ಲಿ. ಸರ್ರೆಯಲ್ಲಿ ಹುಟ್ಟಿದ ಈತನಿಗೆ ಅಲ್ಲಿನ ಕೌಂಟಿ ತಂಡದಲ್ಲಿ ಚಾನ್ಸ್ ಸಿಗಲಿಲ್ಲ. ಅಂತಿಮವಾಗಿ ಸಾಮರ್ಸೆಟ್ ತಂಡದಲ್ಲಿ ಅವಕಾಶದ ಬಾಗಿಲು ತೆರೆಯಿತು. ಅಲ್ಲಿ ನೀಡಿದ ಪರ್ಫಾಮೆನ್ಸ್ ಇಂಗ್ಲೆಂಡ್ ಪರ ಚಾನ್ಸ್ ಸಿಗುವಂತೆ ಮಾಡಿದೆ.
ಯಾರು ಈ ಶೋಯೆಬ್ ಬಶೀರ್.?
ಇದು ಗೇಮ್ಪ್ಲಾನಾ..? ಮೈಂಡ್ ಗೇಮಾ..?
ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಶೋಯೆಬ್ ಬಶೀರ್, ಒಬ್ಬ ಸಾಮಾನ್ಯ ಆಫ್ ಸ್ಪಿನ್ನರ್. ಟ್ರ್ಯಾಕ್ ರೆಕಾರ್ಡ್ ಕೂಡ ಅದ್ಭುತ ಅನ್ನುವಂತೇನು ಇಲ್ಲ. ಹಾಗಿದ್ರೂ, ಇಂಗ್ಲೆಂಡ್ ತಂಡದಲ್ಲಿ ಪ್ರಮುಖ ಪ್ರವಾಸದ ತಂಡದಲ್ಲಿ ಸ್ಥಾನ ಸಿಕ್ಕಿದೆ. ಇದನ್ನ ಗೇಮ್ಪ್ಲಾನ್ ಅನ್ನೋದಕ್ಕಿಂತ ಮೈಂಡ್ಗೇಮ್ ಎಂದೇ ಹೇಳಬಹುದು. ಅದ್ರ ಜೊತೆಗೆ ದಿಗ್ಗಜ ಸ್ಪಿನ್ನರ್ಗಳಾದ ಮೊಯಿನ್ ಅಲಿ, ಆದಿಲ್ ರಶೀದ್ರ ಸ್ಥಾನ ತುಂಬಲು ಈತನನ್ನ ಇಂಗ್ಲೆಂಡ್ ಸೆಲೆಕ್ಟ್ ಮಾಡಿದೆ ಅನ್ನೋ ಟಾಕ್ ಕೂಡ ಇದೆ. ಪಾಕ್ ಮೂಲದವರಾದ ಇವ್ರು, ಇಂಗ್ಲೆಂಡ್ನಲ್ಲಿ ಸಕ್ಸಸ್ ಕಂಡ್ರು. ಅವರಂತೆ ಈ ಯಂಗ್ಸ್ಪಿನ್ನರ್ಗೆ ಯಶಸ್ಸು ದಕ್ಕುತ್ತಾ ಕಾದು ನೋಡೋಣ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ