ರಾಮ ಮಂದಿರ ಉದ್ಘಾಟನೆಯಂದು ಹುಟ್ಟಿದ ಕಂದಮ್ಮ
ಮೊಮ್ಮಗನಿಗೆ ‘ರಾಮ್ ರಹೀಮ್’ ಎಂದು ಹೆಸರಿಟ್ಟ ಅಜ್ಜಿ
ಹಿಂದೂ-ಮುಸ್ಲಿಂ ಐಕ್ಯತೆಯ ಸಂದೇಶವನ್ನು ಸಾರಿದ ದಂಪತಿ
ಉತ್ತರ ಪ್ರದೇಶ: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೊಂಡಿದೆ. ರಾಮಲಲ್ಲಾನ ಪ್ರತಿಷ್ಠಾಪನೆ ನಡೆದಿದೆ. ಅದರಂತೆಯೇ ನಿನ್ನೆ ಜನಿಸಿದ ಮಕ್ಕಳಿಗೆ ಪೋಷಕರು ‘ರಾಮ’ ಎಂದು ಹೆಸರಿಟ್ಟಿರುವ ಹಲವು ಘಟನೆಗಳು ಬೆಳಕಿಗೆ ಬಂದಿದೆ. ಆದರಲ್ಲೊಂದು ಅಚ್ಚರಿ ಎಂದರೆ ಮುಸ್ಲಿಂ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಆ ಮಗುವಿಗೆ ‘ರಾಮ್ ರಹೀಮ್’ ಎಂದು ಹೆಸರಿಟ್ಟಿದ್ದಾರೆ.
ಫರ್ಜಾನಾ ಎಂಬ ಉತ್ತರ ಪ್ರದೇಶದ ಫಿರೋಜಾಬಾದ್ ಮಹಿಳೆ ಸೋಮವಾರದಂದು ಜಿಲ್ಲಾ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮುಸ್ಲಿಂ ದಂಪತಿ ಹಿಂದೂ-ಮುಸ್ಲಿಂ ಐಕ್ಯತೆಯ ಸಂದೇಶವನ್ನು ಸಾರುವ ಸಲುವಾಗಿ ಮಗುವಿನ ‘ರಾಮ್ ರಹೀಮ್’ ಎಂದು ಹೆಸರನಿಟ್ಟಿದ್ದಾರೆ.
ಡಾ. ನವೀನ್ ಜೈನ್ ಈ ಬಗ್ಗೆ ಮಾತನಾಡಿದ್ದು, ‘ತಾಯಿ ಮತ್ತು ಮಗು ಇಬ್ಬರೂ ಚೆನ್ನಾಗಿದ್ದಾರೆ’ ಎಂದು ಹೇಳಿದ್ದಾರೆ. ಮಗುವಿನ ಅಜ್ಜಿ ಹುಸ್ನಾ ಬಾನು ಮಗುವಿಗೆ ‘ರಾಮ್ ರಹೀಮ್’ ಎಂದು ಹೆಸರನಿಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ