ಬೂಮ್ರಾ ಖಡಕ್ ಎಚ್ಚರಿಕೆಗೆ ಇಂಗ್ಲೆಂಡ್ ಢರ್ ಗಯಾ
ಆಂಗ್ಲರಿಗೆ ಬೂಮ್ರಾ ಕೊಟ್ಟ ವಾರ್ನಿಂಗ್ ಏನು..?
ಇಂಗ್ಲೆಂಡ್ಗೆ ಡೆಡ್ಲಿ ಬೌಲರ್ ಗುನ್ನಾ, ಬೂಮ್ರಾ ಮಿಸೆಲ್ ಗನ್
ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಗೂ ಮುನ್ನ ಆಟಗಾರರ ವಾಗ್ಯುದ್ಧ ಜೋರಾಗಿದೆ. ಓಲಿ ರಾಬಿನ್ಸನ್ ಕಿಂಗ್ ಕೊಹ್ಲಿಗೆ ವಾರ್ನಿಂಗ್ ಕೊಟ್ಟು ಸಾಕಷ್ಟು ಸುದ್ದಿಯಾಗಿದ್ರು. ಇದೀಗ ಇಂಡಿಯನ್ ಸ್ಟಾರ್ ವೇಗಿ ಜಸ್ಪ್ರೀತ್ ಬೂಮ್ರಾ, ಇಡೀ ಇಂಗ್ಲೆಂಡ್ಗೆ ಸಖತ್ ಕೌಂಟರ್ ಕೊಟ್ಟಿದ್ದಾರೆ. ಬೂಮ್ರಾ ಬೆಂಕಿ ಮಾತು ಕೇಳಿ ಕ್ರಿಕೆಟ್ ಜನಕರು ಥಂಡಾ ಹೊಡೆದಿದ್ದಾರೆ.
ಮೋಸ್ಟ್ ಎಕ್ಸೈಟಿಂಗ್ ಇಂಡೋ-ಇಂಗ್ಲೆಂಡ್ ಟೆಸ್ಟ್ ಸರಣಿ ಕಳೆದ ಎಲ್ಲಾ ಸರಣಿಗಿಂತ ಹೆಚ್ಚು ಚರ್ಚೆಯಲ್ಲಿದೆ. ಅದಕ್ಕೆ ಕಾರಣ ಟಾಕ್ ವಾರ್. ಟೆಸ್ಟ್ ಸರಣಿಗೆ ಚಾಲನೆ ಸಿಗಲಿದ್ದು, ಅದಕ್ಕೂ ಮುನ್ನ ಉಭಯ ದೇಶಗಳ ಆಟಗಾರರ ಮಧ್ಯೆ ಮಾತಿನ ಸಮರ ಏರ್ಪಟ್ಟಿದೆ. ಅಖಾಡಕ್ಕೆ ಧಮುಕುವ ಮುನ್ನವೇ ಟೀಮ್ ಇಂಡಿಯಾ ಸ್ಟಾರ್ ವೇಗಿ ಜಸ್ಪ್ರೀತ್ ಬೂಮ್ರಾ, ಇಂಗ್ಲೆಂಡ್ ಶೇಕ್ ಆಗುವ ರೀತಿಯಲ್ಲಿ ವಾರ್ನಿಂಗ್ ಕೊಟ್ಟಿದ್ದಾರೆ.
‘ನಮ್ಮನ್ನ ಕೆಣಕಬೇಡಿ’
ಜಸ್ಪ್ರೀತ್ ಬೂಮ್ರಾ ಬೌಲಿಂಗ್ ಬೆಂಕಿ ನಿಜ. ಅವರ ಬೆಂಕಿ-ಬಿರುಗಾಳಿ ಬೌಲಿಂಗ್ಗೆ ಎದುರಾಳಿ ಪಡೆ ಪತರುಗುಟ್ಟುತ್ತೆ. ಆ ಮಟ್ಟಿಗೆ ಟೆರರ್ ಬೌಲಿಂಗ್. ಇಂತಹ ಮಿಸೆಲ್ ಗನ್ ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ನರಸಿಂಹನ ಉಗ್ರರೂಪ ತಾಳಿದ್ದು, ಹರಿತ ಮಾತುಗಳಿಂದ ಆಂಗ್ಲರಿಗೆ ಇರಿದಿದ್ದಾರೆ. ನಮ್ಮನ್ನ ಕೆಣಕಬೇಡಿ, ಕೆಣಕಿದ್ರೆ ನಿಮಗೆ ಉಳಿಗಾಲವಿಲ್ಲ ಅಂತ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಒತ್ತಡಕ್ಕೆ ಸಿಲುಕಿಸೋದೆ ನನ್ನ ಗುರಿ
ನನಗೂ ಸಿಟ್ಟು ಬರುತ್ತೆ. ಯಾಕಂದ್ರೆ ನಾನು ಒಬ್ಬ ಬೌಲರ್. ಹೀಗಾಗಿ ನಾನು ಸಿಟ್ಟು ಮಾಡಿಕೊಳ್ಳುತ್ತೇನೆ. ಆದರೆ ಇದು ನನಗೆ ಇಷ್ಟವಿಲ್ಲ. ಇಲ್ಲಿ ನಾನು ಯಾರನ್ನೂ ರಂಜಿಸಲಲ್ಲ. ವಿಕೆಟ್ ಪಡೆಯೋದು ನನ್ನ ಉದ್ದೇಶ, ಆ ಮೂಲಕ ನಿಮ್ಮನ್ನ ಒತ್ತಡಕ್ಕೆ ಸಿಲುಕಿಸಲು ಪ್ರಯತ್ನಿಸುವೆ. ಹಾಗಂತ ನಾನು ತಾಳ್ಮೆ ಕಳೆದುಕೊಳ್ಳಲು ಬಯಸಲ್ಲ –ಜಸ್ಪ್ರೀತ್ ಬೂಮ್ರಾ, ಟೀಮ್ ಇಂಡಿಯಾ ಕ್ರಿಕೆಟಿಗ
ಭಾರತದಲ್ಲಿ ಬೂಮ್ರಾ ಮಿಸೆಲ್ ಗನ್
ಭಾರತದಲ್ಲಿ ಸರಣಿ ನಡೆಯುತ್ತಿರೋದ್ರಿಂದ ಮಿಸೆಲ್ ಗನ್ ಬೂಮ್ರಾ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ತವರಿನಲ್ಲಿ ಆಡಿದ್ದು ಕೆಲವೇ ಪಂದ್ಯವಾದ್ರು ಧೂಳೆಬ್ಬಿಸಿದ್ದಾರೆ. 4 ಪಂದ್ಯವಾಡಿ 14 ವಿಕೆಟ್ ಕಬಳಿಸಿದ್ದು, ಇದೇ ಇಂಗ್ಲೆಂಡ್ ನಿದ್ದೆಗೆಡಿಸಿದೆ. ಹೇಳಿ ಕೇಳಿ ಬೂಮ್ರಾ ಸದ್ಯ ಸಾಲಿಡ್ ಫಾರ್ಮ್ನಲ್ಲಿದ್ದಾರೆ. ಜೊತೆಗೆ ಹೋಮ್ ಅಡ್ವಾಂಟೇಜ್ ಬೇರೆ. ಹೀಗಾಗಿ ಪವರ್ಫುಲ್ ಮಿಸೆನ್ ಗನ್ ದಾಳಿಗೆ ಇಂಗ್ಲೆಂಡ್ ಉಡೀಸ್ ಆಗೋದು ಗ್ಯಾರಂಟಿ.
ಇಂಗ್ಲೆಂಡ್ಗೆ ಡೆಡ್ಲಿ ಬೌಲರ್ ಗುನ್ನಾ..!
ಇಡೀ ಇಂಗ್ಲೆಂಡ್ ಟೀಮ್ ಫೋಕಸ್ ಜಸ್ಪ್ರೀತ್ ಬೂಮ್ರಾ ಮೇಲೆ ನೆಟ್ಟಿದೆ. ಯಾಕಂದ್ರೆ, ಪ್ರತಿ ಸರಣಿಯಲ್ಲೂ ಆಂಗ್ಲರಿಗೆ ಬೂಮ್ರಾನೇ ವಿಲನ್. ವಿಧ್ವಂಸಕ ದಾಳಿ ನಡೆಸಿ ನಿದ್ರೆಗಣ್ಣಲ್ಲು ಕನವರಿಸುವಂತೆ ಮಾಡಿದ್ದಾರೆ.
ಇಂಗ್ಲೆಂಡ್ ವಿರುದ್ಧ ಬೂಮ್ರಾ
ಜಸ್ಪ್ರೀತ್ ಬೂಮ್ರಾ ಇಂಗ್ಲೆಂಡ್ ವಿರುದ್ಧ 18 ಟೆಸ್ಟ್ ಇನ್ನಿಂಗ್ಸ್ ಆಡಿದ್ದು, 41 ವಿಕೆಟ್ ಪಡೆದಿದ್ದಾರೆ. 64 ರನ್ಗೆ 5 ವಿಕೆಟ್ ಪಡೆದಿರೋದು ಬೆಸ್ಟ್ ಬೌಲಿಂಗ್ ಸಾಧನೆ ಆಗಿದೆ.
ಸೈಲೆಂಟಾಗಿದ್ರೆ ಓಕೆ, ಇಲ್ಲದಿದ್ರೆ ಮಾರಿಹಬ್ಬ
ಕಳೆದ ಪ್ರವಾಸದಲ್ಲಿ ಬೂಮ್ರಾ-ಜೇಮ್ಸ್ ಆಂಡರ್ಸನ್ ನಡ್ವೆ ಟಾಕ್ ವಾರ್ ಏರ್ಪಟ್ಟಿತ್ತು. ಸದ್ಯ ಬೂಮ್ರಾ ಅದನ್ನ ಮೆಲುಕು ಹಾಕುವ ಮೂಲಕ ಇಂಗ್ಲೆಂಡ್ಗೆ ಸೈಲೆಂಟಾಗಿರಿ, ಇಲ್ಲದಿದ್ರೆ ನಿಮಗೆ ಮಾರಿಹಬ್ಬ ಕಾದಿದೆ ಅಂತ ಎಚ್ಚರಿಕೆ ನೀಡಿದ್ದಾರೆ.
‘ಆ ಘಟನೆ ಇಡೀ ತಂಡವನ್ನ ಪ್ರಚೋದಿಸಿತು’
ನಾನು ದಣಿನಿದ್ದೆ, ಅದು ಕೊನೆ ವಿಕೆಟ್ ಎಂದು ಭಾವಿಸಿದ್ದೆ, ಬಾಲ್ ಅನ್ನ ತಳ್ಳಲು ಪ್ರಯತ್ನಿಸಿದೆ. ಅವನ ಬಳಿ ಹೋಗಿ, ನೀನು ಚೆನ್ನಾಗಿದ್ದೀಯಾ? ಎಂದು ಕೇಳಿದೆ. ಅದಕ್ಕೆ ಉತ್ತಮ ಪ್ರತಿಕ್ರಿಯೆ ಸಿಗಲಿಲ್ಲ. ಇದರಿಂದ ಹಳೆಯ ನೆನಪಿಗೆ ಹೋದೆ. ನಾನು ಉತ್ತಮ ವ್ಯಕ್ತಿಯಾಗಲು ಪ್ರಯತ್ನಿಸುತ್ತಿದ್ದೇನೆ. ಆದರೆ ಇದನ್ನ ಸರಿಯಾಗಿ ತೆಗೆದುಕೊಳ್ಳಲಿಲ್ಲ. ಆ ಘಟನೆ ಇಡೀ ತಂಡವನ್ನ ಪ್ರಚೋದಿಸಿತು–ಜಸ್ಪ್ರೀತ್ ಬೂಮ್ರಾ, ಟೀಮ್ ಇಂಡಿಯಾ ಕ್ರಿಕೆಟಿಗ
ಒಟ್ಟಿನಲ್ಲಿ, ಜಸ್ಪ್ರೀತ್ ಬೂಮ್ರಾ ಇಂಗ್ಲೆಂಡ್ಗೆ ವಾರ್ನಿಂಗ್ ನೀಡುವ ಮೂಲಕ ಆಪ್ ಫೀಲ್ಡ್ನಲ್ಲಿ ಟೆಸ್ಟ್ ವಾರ್ನ ಕಿಚ್ಚು ಹಚ್ಚಿದ್ದಾರೆ. ಆನ್ಫೀಲ್ಡ್ನಲ್ಲೂ ಬೂಮ್ರಾ ಬೆಂಕಿ-ಬಿರುಗಾಳಿಯ ಅವತಾರ ಎತ್ತಿದ್ರೆ ಇಂಗ್ಲೆಂಡ್ ಮಕಾಡೆ ಮಲಗೋದು ಪಕ್ಕಾ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್