ಕಾರ್ತಿಕ್ ಮಹೇಶ್ ಅವರ ಕೈಯತ್ತಿ ವಿನ್ನರ್ ಪಟ್ಟ ಕೊಟ್ಟ ಕಿಚ್ಚ ಸುದೀಪ್
ಬಿಗ್ಬಾಸ್ ವೇದಿಕೆ ಮೇಲೆ ವಿನ್ನರ್ ಆಗಿ ನಿಂತುಕೊಂಡ ಕಾರ್ತಿಕ್
ಬಿಗ್ಬಾಸ್ ಸೀಸನ್ 10ರ ರನ್ನರ್ ಆಗಿ ಹೊರ ಬಂದ ಡ್ರೋನ್ ಪ್ರತಾಪ್
ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10ರ ವಿನ್ನರ್ ಪಟ್ಟವನ್ನು ಕಾರ್ತಿಕ್ ಮಹೇಶ್ ಮುಡಿಗೇರಿಸಿಕೊಂಡಿದ್ದಾರೆ. ಈ ವಿನ್ನರ್ ಪಟ್ಟಕ್ಕಾಗಿ ಸಾಕಷ್ಟು ಸ್ಪರ್ಧಿಗಳು ಹೋರಾಟ ನಡೆಸಿದ್ದರು. ಅದರಲ್ಲೂ ಸಂಗೀತಾ ಶೃಂಗೇರಿ, ವಿನಯ್ ಗೌಡ ಮತ್ತು ಡ್ರೋನ್ ಪ್ರತಾಪ್ ಅವರು ಬಿಗ್ಬಾಸ್ ಸೀಸನ್ ವಿನ್ನರ್ ಪಟ್ಟಕ್ಕಾಗಿ ಸಾಕಷ್ಟು ಟಾಸ್ಕ್ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.
ಸದ್ಯ ಬಿಗ್ಬಾಸ್ ಸೀಸನ್ 10ರ ವಿನ್ನರ್ ಆಗಿ ಕಾರ್ತಿಕ್ ಮಹೇಶ್ ಹೊರಹೊಮ್ಮಿದ್ದಾರೆ. ರನ್ನರ್ ಪಟ್ಟವನ್ನು ಡ್ರೋನ್ ಪ್ರತಾಪ್ ಅವರು ಪಡೆದುಕೊಂಡಿದ್ದಾರೆ. ಸದ್ಯ ಈ ಇಬ್ಬರಲ್ಲಿ ಬಿಗ್ಬಾಸ್ ವಿನ್ನರ್ ಪಟ್ಟಕ್ಕಾಗಿ ದೊಡ್ಡ ಫೈಟ್ ನಡೆದಿತ್ತು. ಕೊನೆಗೂ ಕನ್ನಡದ ಅತೀ ದೊಡ್ಡ ಶೋ ಬಿಗ್ಬಾಸ್ ಸೀಸನ್ 10ರ ವಿನ್ನರ್ ಯಾರು ಎಂದು ಘೋಷಣೆಯಾಗಿದೆ.
ಬಿಗ್ಬಾಸ್ ಮನೆಗೆ ಕಾರ್ತಿಕ್ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದರು. ಬಿಗ್ಬಾಸ್ ಕೊಟ್ಟ ಎಲ್ಲಾ ಟಾಸ್ಕ್ಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರು. ಜೊತೆಗೆ ಬಿಗ್ಬಾಸ್ ಮನೆಯ ಎಲ್ಲ ಸ್ಪರ್ಧಿಗಳ ಜೊತೆ ಒಳ್ಳೆಯ ಬಾಂಧವ್ಯವನ್ನು ಇಟ್ಟುಕೊಂಡಿದ್ದರು. ಬಿಗ್ಬಾಸ್ ಶುರುವಾದಾಗಿನಿಂದ ಕೊನೆಯ ತನಕ ಚೆನ್ನಾಗಿ ಆಟವನ್ನು ಆಡಿ ವಿನ್ನರ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ