newsfirstkannada.com

×

CM ಸೊರೇನ್ ನಾಪತ್ತೆ! 36 ಲಕ್ಷ, BMW ಕಾರು ಸೀಜ್ ಮಾಡಿದ ED; ಏನಾಗ್ತಿದೆ ಜಾರ್ಖಂಡ್​ನಲ್ಲಿ?

Share :

Published January 30, 2024 at 1:51pm

    ಜಾರ್ಖಂಡ್​ನಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಆಗುತ್ತಾ?

    ಸಿಎಂ ಹೇಮಂತ್ ಸೊರೇನ್ ಮೇಲಿನ ಆರೋಪ ಏನು?

    ಸಿಎಂ ಕೊನೆಯದಾಗಿ ಕಾಣಿಸಿಕೊಂಡಿದ್ದು ಯಾವಾಗ..?

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್​​ಗೆ ಸಂಕಷ್ಟಗಳು ಮತ್ತಷ್ಟು ಹೆಚ್ಚಾಗುತ್ತಿವೆ. ಅಕ್ರಮ ಗಣಿಗಾರಿಕೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲು ಜಾರಿ ನಿರ್ದೇಶನಾಲಯ ಸತತ 8ನೇ ಬಾರಿಗೆ ನೋಟಿಸ್ ಜಾರಿ ಮಾಡಿತ್ತು. ಸಾಲು ಸಾಲು ಸಮನ್ಸ್​ ನೀಡಿದ್ದರೂ ಡೋಂಟ್ ಕೇರ್ ಎಂದ ಹಿನ್ನೆಲೆಯಲ್ಲಿ ಸೋಮವಾರ ಸೊರೇನ್ ನಿವಾಸದ ಮೇಲೆ ED ದಾಳಿ ಮಾಡಿತ್ತು. ಬರೋಬ್ಬರಿ 13 ಗಂಟೆಗಳ ಕಾಲ ಶೋಧಕಾರ್ಯ ನಡೆಸಿದೆ.

ಈ ವೇಳೆ ಸೊರೇನ್​​ಗೆ ಸೇರಿದ ಬಿಎಂಡಬ್ಲ್ಯು ಕಾರು, 36 ಲಕ್ಷ ರೂಪಾಯಿ ನಗದು ಮತ್ತು ಮಹತ್ವದ ದಾಖಲೆಗಳನ್ನು ಸೀಜ್ ಮಾಡಿದೆ. ಇಷ್ಟೆಲ್ಲ ನಡೆದರೂ ಮುಖ್ಯಮಂತ್ರಿ ಸೊರೇನ್​​ ಮಾತ್ರ ಕಣ್ಣಿಗೆ ಬಿದ್ದಿಲ್ಲ ಅನ್ನೋದು ದೊಡ್ಡ ಚರ್ಚೆಯ ವಿಷಯ. ವರದಿಗಳ ಪ್ರಕಾರ, ವಿಶೇಷ ಚಾರ್ಟರ್ಡ್ ವಿಮಾನದ ಮೂಲಕ ದೆಹಲಿಗೆ ಹೋಗಿದ್ದ ಸೊರೇನ್, ಭಾನುವಾರ ರಾತ್ರಿಯೇ ದೆಹಲಿ ನಿವಾಸದಿಂದ ವಾಪಸ್ ಆಗಿದ್ದಾರೆ ಎಂದು ಹೇಳಲಾಗಿದೆ. ಆದರೆ, ಅವರು ಎಲ್ಲಿದ್ದಾರೆ ಅನ್ನೋದು ಮಾತ್ರ ಇನ್ನೂ ನಿಗೂಢ!

ಏನಾಗ್ತಿದೆ ಜಾರ್ಖಂಡ್​ನಲ್ಲಿ..?
ಸೊರೇನ್ ನಾಪತ್ತೆ ಆಗಿದ್ದಾರೆ.. ತನಿಖಾ ಸಂಸ್ಥೆಗೆ ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂದು ಇ.ಡಿ ಮೂಲಗಳು ಹೇಳಿವೆ. ಇ.ಡಿ ಆರೋಪವನ್ನು ನಿರಾಕರಿಸಿರುವ ಸೊರೇನ್ ನೇತೃತ್ವದ ಪಕ್ಷ ಜಾರ್ಖಂಡ್ ಮುಕ್ತಿ ಮೋರ್ಚಾ ‘ ಇದೊಂದು ವ್ಯವಸ್ಥಿತ ಪಿತೂರಿ’ ಎಂದಿದೆ. ಮುಂದುವರಿದು ಸ್ಪಷ್ಟನೆ ನೀಡಿರುವ ಜೆಎಂಎಂ ಪಕ್ಷ, ಮುಖ್ಯಮಂತ್ರಿ ಸೊರೇನ್ ಅವರು ತನಿಖಾಧಿಕಾರಿಗಳ ಸಂಪರ್ಕದಲ್ಲಿದ್ದಾರೆ. ನಾಳೆ ಮಧ್ಯಾಹ್ನ 1 ಗಂಟೆಗೆ ಹೇಳಿಕೆ ನೀಡುವುದಾಗಿ ಇ.ಡಿ ಅಧಿಕಾರಿಗಳಿ ತಿಳಿಸಿದ್ದಾರೆ. ಹೀಗಿದ್ದೂ, ಗೊಂದಲ ಸೃಷ್ಟಿಸುವ ಕೆಲಸ ಆಗ್ತಿದೆ ಎಂದು ಕಿಡಿಕಾರಿದೆ.

ನಿನ್ನೆ ಏನಾಗಿದೆ..?
ನಿನ್ನೆ ಬೆಳಗ್ಗೆ ಹೇಮಂತ್ ಸೊರೇನ್ ನಿವಾಸದ ಮೇಲೆ ದೆಹಲಿ ಪೊಲೀಸ್ ಸಿಬ್ಬಂದಿ ಸಹಾಯದೊಂದಿಗೆ ಇ.ಡಿ ದಾಳಿ ಮಾಡಿದೆ. ದಕ್ಷಿಣ ದೆಹಲಿಯ 5/1 ಶಾಂತಿ ನಿಕೇತನ ಭವನಕ್ಕೆ ಬೆಳಗ್ಗೆ 9 ಗಂಟೆಗೆ ಇ.ಡಿ ಅಧಿಕಾರಿಗಳು ತಲುಪಿದ್ದರು. ಇಡೀ ದಿನ ಸೊರೇನ್ ನಿವಾಸದಲ್ಲೇ ಬೀಡು ಬಿಟ್ಟಿದ್ದ ತಂಡ, ರಾತ್ರಿ 10.30ಕ್ಕೆ ಮನೆಯಿಂದ ಹೊರ ಬಂದಿದೆ.

ಸಿಎಂ ಕೊನೆಯದಾಗಿ ಕಾಣಿಸಿಕೊಂಡಿದ್ದು ಯಾವಾಗ..?
ಹೇಮಂತ್ ಸೊರೇನ್ ಜನವರಿ 27 ರಂದು ರಾಂಚಿಯಿಂದ ದೆಹಲಿಗೆ ತೆರಳಿದ್ದರು. ವೈಯಕ್ತಿಕ ಕೆಲಸದ ನಿಮಿತ್ತ ದೆಹಲಿಗೆ ಹೋಗಿದ್ದಾರೆ ಎಂದು ಸೊರೇನ್ ಪಕ್ಷ ಹೇಳಿದೆ. ಜಾರಿ ನಿರ್ದೇಶನಾಲಯದ ತನಿಖೆಗೆ ಹೆದರಿ ತಲೆ ಮರೆಸಿಕೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಜೊತೆಗೆ ಹರಿಯಾಣ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರನ್ನು ಬಿಜೆಪಿ ಸಂಪರ್ಕಿಸಿದೆ. ಮುಖ್ಯಮಂತ್ರಿಗಳು ನಾಪತ್ತೆ ಆಗಿರುವ ಹಿನ್ನೆಲೆಯಲ್ಲಿ ಮುಂದಿನ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.

ಸಿಎಂ ಸೊರೇನ್ ಪತ್ರ ವೈರಲ್..!
ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಮುಖ್ಯಮಂತ್ರಿಗಳು ಬರೆದಿರುವ ಪತ್ರವೊಂದು ವೈರಲ್ ಮಾಡಲಾಗಿದೆ. ಆಪಾದಿತ ಭೂ ವಂಚನೆ ಪ್ರಕರಣದಲ್ಲಿ ಜನವರಿ 20 ರಂದು ರಾಂಚಿಯಲ್ಲಿರುವ ನಿವಾಸದಲ್ಲಿ ಜಾರಿ ನಿರ್ದೇಶನಾಲಯ ಸೊರೇನ್​ರನ್ನು ವಿಚಾರಣೆಗೆ ಒಳಪಡಿಸಿದೆ. ಜನವರಿ 29 ಅಥವಾ 31 ರಂದು ವಿಚಾರಣೆಗೆ ಬರುವಂತೆ ಸಮನ್ಸ್ ನೀಡಿದೆ. ನೀವು ಯಾವ ದಿನ ವಿಚಾರಣೆಗೆ ಬರುತ್ತೀರಿ ಎಂದು ನೋಟಿಸ್​ನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಸೊರೇನ್​ ಅವರು ತನಿಖಾ ಸಂಸ್ಥೆಗೆ ಪತ್ರದ ಮೂಲಕ ಮಾಹಿತಿ ನೀಡಿದ್ದಾರೆ. ಇ.ಡಿ ಕಳುಹಿಸಿರುವ ಸಮನ್ಸ್​ನಲ್ಲಿ ನಿರ್ದಿಷ್ಟ ದಿನಾಂಕವನ್ನು ತಿಳಿಸಿಲ್ಲ. ರಾಜ್ಯ ಸರ್ಕಾರದ ಸೇವೆಗೆ ಅಡ್ಡಿಪಡಿಸುವ ಉದ್ದೇಶದಿಂದ ‘ರಾಜಕೀಯ ಅಜೆಂಡಾ’ ನಡೆಯುತ್ತಿದೆ ಎಂದು ಸೊರೇನ್ ಆರೋಪಿಸಿದ್ದಾರೆ. ಜನವರಿ 31 ಅಥವಾ ಅದಕ್ಕಿಂತ ಮೊದಲು ನನ್ನ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಹೊರಟಿರೋದು ದುರುದ್ದೇಶ ಎಂದು ಕಿಡಿಕಾರಿದ್ದಾರೆ.

ಟೈಂ ಬಂದಾಗ ಕ್ರಮ-ರಾಜ್ಯಪಾಲರು
ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಮೇಲೆ ಕಣ್ಣಿಡಲಾಗಿದೆ. ಸಂವಿಧಾನದ ರಕ್ಷಕನಾಗಿ ನಾನು ಇಡೀ ಪರಿಸ್ಥಿತಿಯನ್ನು ಗಮನಿಸುತ್ತಿದ್ದೇನೆ. ಇದು ರಾಜ್ಯಪಾಲರ ಕರ್ತವ್ಯ. ಅಗತ್ಯ ಬಂದಾಗ ನನ್ನ ಕೆಲಸವನ್ನು ಮಾಡುತ್ತೇನೆ ಎಂದು ರಾಜ್ಯಪಾಲರು ಎಚ್ಚರಿಕೆ ನೀಡಿದ್ದಾರೆ. ರಾಜ್ಯಪಾಲರು ಈ ಹೇಳಿಕೆ ಬೆನ್ನಲ್ಲೇ ರಾಂಚಿಯಲ್ಲಿರುವ ಸಿಎಂ ನಿವಾಸ, ರಾಜಭವನ ಮತ್ತು ಕೇಂದ್ರ ಸರ್ಕಾರಿ ಕಚೇರಿಗಳಿಗೆ ಹೆಚ್ಚು ಭದ್ರತೆಯನ್ನು ಒದಗಿಸಲಾಗಿದೆ.

ರಾಜಕೀಯ ಪ್ರೇರಿತ -ಸೊರೇನ್ ಪಕ್ಷ
ಜೆಎಂಎಂ ಪ್ರಧಾನ ಕಾರ್ಯದರ್ಶಿ, ವಕ್ತಾರ ಸುಪ್ರಿಯೋ ಭಟ್ಟಾಚಾರ್ಯ ರಾಜ್ಯದಲ್ಲಿನ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿ, ಮುಖ್ಯಮಂತ್ರಿ ವೈಯಕ್ತಿಕ ಕೆಲಸಗಳಿಗಾಗಿ ದೆಹಲಿಗೆ ಹೋಗಿದ್ದರು. ಶೀಘ್ರದಲ್ಲೇ ಹಿಂತಿರುಗುತ್ತಾರೆ. ಇ.ಡಿ ಕ್ರಮವು ಅನಗತ್ಯ, ಸಂವಿಧಾನ ಬಾಹೀರ. ಇದು ರಾಜಕೀಯ ಪ್ರೇರಿತವಾಗಿದೆ. ಬಿಜೆಪಿ ನಾಯಕರ ಪಿತೂರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಲೇವಡಿ
ಬಿಜೆಪಿಯ ಜಾರ್ಖಂಡ್ ಘಟಕದ ಅಧ್ಯಕ್ಷ ಬಾಬುಲಾಲ್ ಮರಾಂಡಿ ಪ್ರತಿಕ್ರಿಯಿಸಿ.. ತಡರಾತ್ರಿ ಇದ್ದಕ್ಕಿಂದ್ದಂತೆ ಮುಖ್ಯಮಂತ್ರಿ ನಾಪತ್ತೆ ಆಗಿದ್ದಾರೆ. ಅವರಿಗೆ ಭದ್ರತೆ ನೀಡುತ್ತಿದ್ದ ವಿಶೇಷ ಅಧಿಕಾರಿ ಕೂಡ ನಾಪತ್ತೆ ಆಗಿದ್ದಾರೆ. ಇಬ್ಬರ ಮೊಬೈಲ್ ಸ್ವಿಚ್ ಆಫ್ ಆಗಿವೆ. ಇ.ಡಿ ಮತ್ತು ದೆಹಲಿ ಪೊಲೀಸರು ಅವರಿಗಾಗಿ ಹುಡುಕಾಡುತ್ತಿದ್ದಾರೆ. ಮುಖ್ಯಮಂತ್ರಿಯ ಭದ್ರತೆಯ ಬಗ್ಗೆ ಇಂತಹ ಘೋರ ನಿರ್ಲಕ್ಷ್ಯ ಮತ್ತೊಂದಿಲ್ಲ ಎಂದು ಗುಡುಗಿದ್ದಾರೆ.

ಗೊಂದಲ ಸೃಷ್ಟಿ.. ರಾಷ್ಟ್ರಪತಿ ಆಳ್ವಿಕೆ..
ಜಾರ್ಖಂಡ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಠಾಕೂರ್ ಪ್ರತಿಕ್ರಿಯಿಸಿ.. ಸೊರೇನ್ ಎಲ್ಲಿದ್ದಾರೆ ಎಂದು ಗೊಂದಲ ಸೃಷ್ಟಿಸಲಾಗುತ್ತಿದೆ. ಇದು ವ್ಯವಸ್ಥಿತ ಸಂಚು. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗುತ್ತದೆ ಎಂದು ವದಂತಿ ಹಬ್ಬಿಸಲಾಗುತ್ತಿದೆ. ಅದೆಲ್ಲ ಊಹಾಪೋಹ ಎಂದಿದ್ದಾರೆ.

ಏನಿದು ಪ್ರಕರಣ..?
ಸಾಹೇಬ್‌ಗಂಜ್ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಆರೋಪದ ಬಗ್ಗೆಯೂ ಸಿಎಂ ವಿರುದ್ಧ ತನಿಖೆ ನಡೆಯುತ್ತಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಸ್ತುವಾರಿ ವಹಿಸಿರುವ ಮುಖ್ಯಮಂತ್ರಿ ಅವರು 2021ರಲ್ಲಿ ಗಣಿ ಗುತ್ತಿಗೆ ನೀಡುವ ಮೂಲಕ ಚುನಾವಣಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೂಡ ಇದೆ. ಈ ಪ್ರಕರಣದಲ್ಲಿ 2011ರ ಬ್ಯಾಚ್‌ನ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ಛಾವಿ ರಂಜನ್ ಸೇರಿದಂತೆ 14 ಜನರನ್ನು ಇಡಿ ಬಂಧಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

CM ಸೊರೇನ್ ನಾಪತ್ತೆ! 36 ಲಕ್ಷ, BMW ಕಾರು ಸೀಜ್ ಮಾಡಿದ ED; ಏನಾಗ್ತಿದೆ ಜಾರ್ಖಂಡ್​ನಲ್ಲಿ?

https://newsfirstlive.com/wp-content/uploads/2024/01/HEMANT-SOREN.jpg

Load More