ಭಾರತದಲ್ಲಿ ಬಜೆಟ್ ಮಂಡನೆಗೆ 164 ವರ್ಷಗಳ ಇತಿಹಾಸ
ಬ್ರಿಟಿಷ್ ಕಾಲಘಟ್ಟದಿಂದಲೇ ಇತ್ತು ಬಜೆಟ್ ಮಂಡನೆಯ ಕಲ್ಪನೆ
ಸ್ವತಂತ್ರ ಭಾರತದ ಮೊದಲು ಬಜೆಟ್ ಮಂಡಿಸಿದವರು ಯಾರು?
ಭಾರತದಲ್ಲಿ ಮೊದಲ ಬಾರಿಗೆ ಬಜೆಟ್ ಮಂಡಿಸಿದ್ದು ಯಾವಾಗ? ಆ ಸಮಯದಲ್ಲಿದ್ದ ಹಣಕಾಸು ಸಚಿವ ಯಾರಾಗಿದ್ದರು? ಭಾರತದಲ್ಲಿ ಬಜೆಟ್ ಮಂಡನೆಯ ಇತಿಹಾಸದ ಬಗ್ಗೆ ಇಲ್ಲಿದೆ ಮಾಹಿತಿ. ಈಸ್ಟ್ ಇಂಡಿಯಾ ಕಂಪನಿಯ ಬಳಿಕ ಬ್ರಿಟಿಷ್ ಕಾಲಘಟ್ಟದಲ್ಲಿ ಅಂದರೆ 1859ರಲ್ಲಿ ಭಾರತದ ಹಣಕಾಸು ಸಚಿವ ಜೇಮ್ಸ್ ವಿಲ್ಸನ್ ಮೊದಲ ಬಾರಿಗೆ ಬಜೆಟ್ ಎಂಬ ಕಲ್ಪನೆಯನ್ನು ತರುವ ಮೂಲಕ ಭಾರತದಲ್ಲಿ ಅದನ್ನು ಪ್ರಸ್ತುತ ಪಡಿಸಿದರು.