ಪ್ರಬಲ ಸ್ಪರ್ಧಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಡ್ರೋನ್ ಪ್ರತಾಪ್
ಅತಿ ಕಡಿಮೆ ವೋಟ್ಸ್ಗಳಿಂದ ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದ ಪ್ರತಾಪ್
ಮುಗ್ಧ ನಗುವಿನ ಮೂಲಕ ವೀಕ್ಷಕರನ್ನು ಮತ್ತೊಮ್ಮೆ ರಂಜಿಸಲಿದ್ದಾರೆ ಡ್ರೋನ್
ಸದ್ಯ ಎಲ್ಲಿ ನೋಡಿದರೂ ಡ್ರೋನ್, ಎಲ್ಲರ ಬಾಯಲ್ಲೂ ಡ್ರೋನ್ ಪ್ರತಾಪ್ ಬಗ್ಗೆಯೇ ಮಾತುಕತೆ. ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಆಟಕ್ಕೆ ರನ್ನರ್ ಅಪ್ ಪಟ್ಟ ದೊರೆತಿದೆ. ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10ಕ್ಕೆ ಅತಿ ಕಡಿಮೆ ವೋಟ್ಸ್ಗಳಿಂದ ಅಸಮರ್ಥರಾಗಿ ಎಂಟ್ರಿ ಕೊಟ್ಟಿದ್ರು ಡ್ರೋನ್ ಪ್ರತಾಪ್.
ಬಿಗ್ಬಾಸ್ ಸೀಸನ್ 10 ಎಂದ ತಕ್ಷಣ ಮೊದಲಿಗೆ ನೆನಪಾಗೋದೇ ಡ್ರೋನ್ ಪ್ರತಾಪ್. ಅವರ ವ್ಯಕ್ತಿತ್ವದ ಬಗ್ಗೆ ಇದ್ದ ಅನುಮಾನಗಳು ಅವರನ್ನು ಕುತೂಹಲದ ಕಣ್ಣಿನಿಂದ ನೋಡೋ ಹಾಗೇ ಮಾಡಿದ್ದು. ಡ್ರೋನ್ ಪ್ರತಾಪ್ ಅವರ ಬದುಕಿನ ರೀತಿಯೇ ಬದಲಾಗಿ ಬಿಟ್ಟಿದೆ. ಮಹಾ ಪವಾಡ ಅಂತಾರಲ್ಲ ಆ ರೀತಿ. ನಿಂದನೆ ಈಗ ವಂದನೆ ಆಗಿದೆ. ಅಪ್ಪ ಅಮ್ಮನ ಮಡಿಲು ಸೇರಿದ್ದಾರೆ. ಬದುಕಿನ ಭರವಸೆ ಕಳೆದುಕೊಂಡಿದ್ದ ಪ್ರತಾಪ್ಗೆ ಹೊಸ ಬೆಳಕು ಮೂಡಿಸಿದ್ದು ಬಿಗ್ಬಾಸ್ ಎಂದರೆ ತಪ್ಪಾಗಲಾರದು.
ನಾಲ್ಕೈದು ವರ್ಷಗಳಿಂದ ಪ್ರತಾಪ್ ಅವರ ಬಗ್ಗೆ ಕೇಳಿ ಬರುತ್ತಿದ್ದ ಆರೋಪಗಳಿಗೆ ಜನ ರೊಚ್ಚಿಗೆದ್ದಿದ್ರು. ತಪ್ಪುಗಳನ್ನ ಒಪ್ಪಿಕೊಳ್ಳೋಕಾಗದೇ ಜನರನ್ನು ಎದುರಿಸಲು ಆಗದೇ ಒದ್ದಾಡುತ್ತಿದ್ದ ಪ್ರತಾಪ್ಗೆ ಬಿಗ್ ಬಾಸ್ ವರವಾಯ್ತು. ಅವರ ಬಗ್ಗೆ ಇದ್ದ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತು. ಸದ್ಯ ಪ್ರತಾಪ್ ಅವರಿಗೆ ಕೋಟಿ ಕೋಟಿ ಅಭಿಮಾನಿಗಳಿದ್ದಾರೆ. ವಿಶೇಷವಾಗಿ ಹೆಣ್ಮಕ್ಕಳು ಪ್ರತಾಪ್ ಅವರನ್ನ ಮನೆ ಮಗನಂತೆ ಸ್ವೀಕಾರ ಮಾಡಿದ್ದಾರೆ. ಇದಲ್ವಾ ಪವಾಡ ಅಂದ್ರೆ. ಮೂರೇ ಮೂರು ತಿಂಗಳಲ್ಲಿ ಪ್ರತಾಪ್ ಕ್ರೇಜ್ ಅಷ್ಟಿಷ್ಟಲ್ಲ. ಪ್ರತಾಪ್ಗೆ ಅಭಿನಯದ ಅವಕಾಶಗಳು ಒಲಿದು ಬರುತ್ತಿದ್ದು, ಸದ್ಯ ಗಿಚ್ಚಿ ಗಿಲಿಗಿಲಿ ಸೀಸನ್ 3ಯಲ್ಲಿ ಪ್ರತಾಪ್ ಅವರು ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 3 ಜಡ್ಜ್ ಆಗಿರುವ ನಟಿ ತಾರಾ ಅವರ ಜೊತೆ ಕೂಡ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇನ್ನೂ ಡ್ರೋನ್ ಪ್ರತಾಪ್ ಅವರ ಮುಗ್ಧ ನಗುವಿನ ಮೂಲಕ ವೀಕ್ಷಕರನ್ನು ಮತ್ತೊಮ್ಮೆ ರಂಜಿಸಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ