ಕಾರ್ತಿಕ್ ಮಹೇಶ್ ಬದುಕಲ್ಲಿ ಅಮ್ಮ ಹಾಗೂ ತಂಗಿನೇ ದೊಡ್ಡ ಪ್ರಪಂಚ
ಕಾರ್ತಿಕ್ ಮಹೇಶ್ರ ಅದೃಷ್ಟದ ಬಾಗಿಲು ತೆರೆದಿದ್ದು ಬಿಗ್ಬಾಸ್ ಮನೆ
ಸ್ಪರ್ಧಿಗಳ ಬದುಕನ್ನೇ ಅದಲು ಬದಲು ಮಾಡಿದ ಈ ಬಿಗ್ಬಾಸ್ ಶೋ
ಒಂದು ಶೋ ಹಿಂದೆ ಎಷ್ಟೋ ಕುಟುಂಬಗಳು ತುತ್ತು ಅನ್ನ ಕಂಡುಕೊಳ್ಳುತ್ತೆ. ಯಾವುದೇ ಶೋ ಆದ್ರೂ ವೀಕ್ಷಕರಿಗೆ ಮನರಂಜನೆ ಹಬ್ಬ ನೀಡಿದ್ರೆ ಆ ಶೋನಲ್ಲಿ ಸ್ಪರ್ಧಿಸಿದ ಸ್ಪರ್ಧಿಗಳಿಂದ ಹಿಡಿದು ತೆರೆ ಹಿಂದೆ ಕೆಲಸ ಮಾಡೋ ತಂತ್ರಜ್ಞ ವರ್ಗಕ್ಕೆ ಹೊಸ ಭರವಸೆ ಮೂಡಿಸುತ್ತೆ. ಸದ್ಯ ಬಿಗ್ಬಾಸ್ನಿಂದ ಟ್ರೋಫಿ ಗೆದ್ದೋರು ಒಬ್ಬರೇ ಆದ್ರು ಎಷ್ಟೋ ಸ್ಪರ್ಧಿಗಳ ಲೈಫ್ ತಿರುವು ಪಡೆದುಕೊಂಡಿದೆ. ಇದೀಗ ಅವರ ಬದುಕು ಬದಲಾಗಿದೆ.
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ ವಿನ್ನರ್ ಆಗಿರೋ ಕಾರ್ತಿಕ್ ಮಹೇಶ್ ಹೊರ ಹೊಮ್ಮಿದ್ದಾರೆ. ಕಾರ್ತಿಕ್ ಮಹೇಶ್ 9 ವರ್ಷಗಳಿಂದ ಸಿನಿಮಾ, ಸೀರಿಯಲ್ ಇಂಡಸ್ಟ್ರಿಯಲ್ಲಿ ಸೈಕಲ್ ಹೊಡೆಯುತ್ತಿದ್ದ ಪ್ರತಿಭಾವಂತ ನಟ. ಪ್ರತಿಭೆ ಇದ್ದರೆ ಸಾಕಾಗೋದಿಲ್ಲ. ಹಿಂದೆ ಬೆನ್ನು ತಟ್ಟೋ ಕೈ ಕೂಡ ಬೇಕು ಅನ್ನೋದು ಕಾರ್ತಿಕ್ ಬದುಕಿನ ದಾರಿ ತಿಳಿದರೆ ಅರ್ಥ ಆಗುತ್ತೆ. ಜೇಬಲ್ಲಿ ಒಂದು ರೂಪಾಯಿ ದುಡ್ಡಿಲ್ಲದೇ ಅವಕಾಶಕ್ಕಾಗಿ ಹುಡುಕಾಟ ನಡೆಸಿದ ಹುಡುಗನಿಗೆ ಅದೃಷ್ಟದ ಬಾಗಿಲು ತೆರೆದಿದ್ದು ಬಿಗ್ ಬಾಸ್ ಮನೆ.
ಬದುಕಿನ ಆಧಾರಸ್ತಂಭವಾಗಿದ್ದ ಅಪ್ಪನನ್ನ ಕಳೆದುಕೊಂಡಿದ್ದ ಕಾರ್ತಿಕ್ ಬದುಕಲ್ಲಿ ಅಮ್ಮ ಹಾಗೂ ತಂಗಿನೇ ಪ್ರಪಂಚ. ಬಿಗ್ಬಾಸ್ ಮನೆಯಿಂದ ಕೋಟಿ ಕೋಟಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಖಾಲಿ ಜೇಬು ತುಂಬಿದೆ. ಅಮ್ಮನಿಗೆ ಮನೆ ಕಟ್ಟೋ ಭರವಸೆ ಮೂಡಿದೆ. ಓಡಾಡೋಕೆ ಹೊಸ ಕಾರು, ಬೈಕ್ ಸಿಕ್ಕಿದೆ. ಬೇರೆ ಬೇರೆ ಮೂಲಗಳಿಂದ ಲಕ್ಷ್ಮೀ ಒಲಿದು ಬರುತ್ತಿದ್ದಾಳೆ. ಕಾರ್ತಿಕ್ ಅವರ ಬದುಕಿನ ಭಾಗ್ಯದ ಬಾಗಿಲು ತೆರೆದಿದೆ ಬಿಗ್ಬಾಸ್.
ಇದನ್ನು ಓದಿ: BBK10: ಬಿಗ್ಬಾಸ್ ಬಳಿಕ ಮತ್ತೊಂದು ರಿಯಾಲಿಟಿ ಶೋಗೆ ರೆಡಿಯಾದ ಡ್ರೋನ್ ಪ್ರತಾಪ್; ಯಾವುದು?
ಬಿಗ್ಬಾಸ್ ಮನೆಗೆ ಕಾರ್ತಿಕ್ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದರು. ಬಿಗ್ಬಾಸ್ ಕೊಟ್ಟ ಎಲ್ಲಾ ಟಾಸ್ಕ್ಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರು. ಜೊತೆಗೆ ಬಿಗ್ಬಾಸ್ ಮನೆಯ ಎಲ್ಲ ಸ್ಪರ್ಧಿಗಳ ಜೊತೆ ಒಳ್ಳೆಯ ಬಾಂಧವ್ಯವನ್ನು ಇಟ್ಟುಕೊಂಡಿದ್ದರು. ಬಿಗ್ಬಾಸ್ ಶುರುವಾದಾಗಿನಿಂದ ಕೊನೆಯ ತನಕ ಚೆನ್ನಾಗಿ ಆಟವನ್ನು ಆಡಿ ವಿನ್ನರ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ