ಬಾಲಿವುಡ್ ನಟಿ ಪೂನಂ ಪಾಂಡೆ ಸಾವು
ಗರ್ಭಕಂಠದ ಕ್ಯಾನ್ಸರ್ ಕೊನೆಯುಸಿರೆಳೆದ ಮಾಡೆಲ್
32ನೇ ವಯಸ್ಸಿಗೆ ಕೊನೆಯುಸಿರೆಳೆದ ‘ನಶಾ’ ನಟಿ
ಬಾಲಿವುಡ್ ನಟಿ, ಮಾಡೆಲ್ ಪೂನಂ ಪಾಂಡೆ 32ನೇ ವಯಸ್ಸಿಗೆ ನಿಧನರಾಗಿದ್ದಾರೆ. ಗರ್ಭಕಂಠದ ಕ್ಯಾನ್ಸರ್ನಿಂದ ಬಳಲುತ್ತಿದ್ದ ನಟಿ ಸಾವನ್ನಪ್ಪಿರುವ ಸುದ್ದಿಯನ್ನು ಆಕೆಯ ಮ್ಯಾನೇಜರ್ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟೀವ್ ಆಗಿದ್ದ ಪೂನಂ ಪಾಂಡೆ ಆಗಾಗ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದರು. ಇನ್ಸ್ಟಾಗ್ರಾಂನಲ್ಲಿ ಕಳೆದ ಮೂರು ದಿನಗಳ ಹಿಂದೆ ವಿಡಿಯೋ ಹಂಚಿಕೊಂಡಿರುವ ನಟಿ ಅದರಲ್ಲಿ ಬಿಳಿ ಮತ್ತು ಕಪ್ಪು ಬಣ್ಣದ ಬಟ್ಟೆ ಧರಿಸಿದ್ದರು. ಆ ವಿಡಿಯೋಗೆ ‘ಬಿಳಿ ಮತ್ತು ಕಪ್ಪು: ನನ್ನ ಒಳಗೆ ಮತ್ತು ಯವ್ವನದ ಜೀವನವನ್ನು ಸಮತೋಲನಗೊಳಿಸುತ್ತದೆ’ ಎಂದು ಬರೆದಿದ್ದರು. ಆದರೀಗ ನಟಿಯ ಸಾವು ಇದ್ದಕ್ಕಿದ್ದಂತೆಯೇ ಎಲ್ಲರಿಗೆ ಶಾಕ್ ನೀಡಿದೆ.
ಪೂನಂ ಪಾಂಡೆ ಜನನ
ಪೂನಂ ಪಾಂಡೆ 11 ಮಾರ್ಚ್ 1991ರಂದು ಕಾನ್ಸುರದಲ್ಲಿ ಜನಿಸಿದರು. ಶೋಭಾನಾಥ್ ಪಾಂಡೆ ಮತ್ತು ವಿದ್ಯಾ ಪಾಂಡೆಯ ಮಗಳಾಗಿ ಜನಿಸಿದ ಈಕೆ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ಮೃತ ಪೂನಂ ಪಾಂಡೆ ಶ್ರದ್ಧಾ ಪಾಂಡೆ ಮತ್ತು ನಿಲೇಶ್ ಪಾಂಡೆ ಎಂಬ ಸಹೋದರ, ಸಹೋದರಿಯನ್ನು ಬಿಟ್ಟು ಅಗಲಿದ್ದಾರೆ.
ಬಾಲಿವುಡ್ ಬಣ್ಣದ ಲೋಕದಲ್ಲಿ ಪೂನಂ ಪಾಂಡೆ
ಪೂನಂ 2013ರಲ್ಲಿ ಬಾಲಿವುಡ್ ಸಿನಿಮಾ ರಂಗಕ್ಕೆ ಕಾಲಿಟ್ಟರು. ನಶಾ ಸಿನಿಮಾದಲ್ಲಿ ಬಣ್ಣ ಹಚ್ಚು ಮೂಲಕ ಮೊದಲ ಬಾರಿಗೆ ನಟಿಸಿದರು. ಇದಲ್ಲಿ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ಶಿಕ್ಷಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
View this post on Instagram
ಪೂನಂ ವೈವಾಹಿಕ ಜೀವನ
ಸೆಪ್ಟೆಂಬರ್ 1, 2020ರಲ್ಲಿ ಪೂನಂ ಪಾಂಡೆ ತನ್ನ ಗೆಳೆಯ ಸ್ಯಾಮ್ ಬಾಂಬೆ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕೋವಿಡ್ ಕಾಲದಲ್ಲಿ ಇಬ್ಬರು ಮದುವೆಯಾದರು. ಆದರೆ ಸೆಪ್ಟೆಂಬರ್ 11 ರಂದು ಸ್ಯಾಮ್ ವಿರುದ್ಧ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದಲ್ಲದೆ, ದೂರು ನೀಡಿದರು. ಆದರೀಗ ನಟಿ 32ನೇ ವರ್ಷಕ್ಕೆ ಕೊನೆಯುಸಿರೆಳೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ