ವಿರಾಟ್ ಹೇಳಿದ ಆ ಭವಿಷ್ಯ ಆದ್ರು ಏನು?
2005ರಲ್ಲೇ ನಾನೇ ಭಾರತೀಯ ಕ್ರಿಕೆಟ್ನ ಆಳ್ತೀನಿ ಎಂದಿದ್ದ ಕೊಹ್ಲಿ
ಭಾರತೀಯ ಕ್ರಿಕೆಟ್ನ ಮುಂದಿನ ಬಿಗ್ ಥಿಂಗ್ ಎಂದು ಹೇಳಿದ್ದ ವಿರಾಟ್
ಬೇರೆಯವರ ಬಗ್ಗೆ ಭವಿಷ್ಯ ಹೇಳೋದನ್ನ ಕೇಳಿದ್ದೀವಿ. ಆದ್ರೆ ಕಿಂಗ್ ಕೊಹ್ಲಿ 19 ವರ್ಷದ ಹಿಂದೆ ತನ್ನ ಬಗ್ಗೆ ಒಂದು ದೊಡ್ಡ ಭವಿಷ್ಯ ನುಡಿದಿದ್ರು. ಅದು ನಿಜವಾಗಿದೆ ಕೂಡ. ಅಷ್ಟಕ್ಕೂ ವಿರಾಟ್ ಹೇಳಿದ ಆ ಭವಿಷ್ಯ ಆದ್ರು ಏನು? ಅದೇ ಇವತ್ತಿನ ಸಖತ್ ಸ್ಟೋರಿ. ಓದಿ
ವಿರಾಟ್ ಕೊಹ್ಲಿ. ವಿಶ್ವ ಕ್ರಿಕೆಟ್ನ ಸಾಮ್ರಾಟ. ಛಲದಂಕ ಮಲ್ಲ. ಮಾಡ್ರನ್ ಡೇ ಕ್ರಿಕೆಟ್ನ ಶ್ರೇಷ್ಠ ಆಟಗಾರನಾಗಿ ಮೆರೆಯುತ್ತಿರುವ ವಿರಾಟ್ ಕೊಹ್ಲಿ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಆದರೆ, ಇದೇ ವಿರಾಟ್ ಕೊಹ್ಲಿ, 2005ರಲ್ಲೇ ನಾನೇ ಭಾರತೀಯ ಕ್ರಿಕೆಟ್ನ ಆಳ್ತೀನಿ ಅಂದ್ರೆ, ಯಾರಾದ್ರು ನಂಬ್ತರಾ.? ಖಂಡಿತಾ ಇಲ್ಲ. ಆದ್ರೆ, ವಿರಾಟ್ ಕೊಹ್ಲಿಗೆ ಆ ಒಂದು ವಿಶ್ವಾಸವಿತ್ತು. ಆತ್ಮ ವಿಶ್ವಾಸದಿಂದ ಭಾರತೀಯ ಕ್ರಿಕೆಟ್ನ ಆಳುವ ದೊರೆ ನಾನೇ ಎಂದು ಡಿಕ್ಲೇರ್ ಮಾಡಿಕೊಂಡಿದ್ರು.
2005ರ ಆಸ್ಟ್ರೇಲಿಯಾ ಮಹಿಳಾ ತಂಡದ ಭಾರತ ಪ್ರವಾಸ. ಆಗ ಆಸಿಸ್ ತಂಡದೊಂದಿಗೆ ಈಗಿನ ಸೂಪರ್ ಸ್ಟಾರ್ ಮಹಿಳಾ ಕ್ರಿಕೆಟರ್ಗಳಾದ ಎಲ್ಲಿಸ್ ಪೆರ್ರಿ ಹಾಗೂ ಅಲಿಸಾ ಹೀಲಿ ಆಗಮಿಸಿದ್ದರು. ಈ ಟೂರ್ ವೇಳೆ ಇವರಿಬ್ಬರನ್ನ ಅಂತರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆಯನ್ನೇ ಮಾಡದ ವಿರಾಟ್ ಕೊಹ್ಲಿ ಇವರನ್ನ ಭೇಟಿಯಾಗಿದ್ರು. ಎಲ್ಲಿಸ್ ಪೆರ್ರಿ ಹಾಗೂ ಅಲಿಸಾ ಹೀಲಿ ಬಳಿ ತೆರಳಿದ್ದ ಕೊಹ್ಲಿ, ಹಾಯ್ ಹಾಲೋ, ನಾನೇ ಭಾರತೀಯ ಕ್ರಿಕೆಟ್ನ ಮುಂದಿನ ಬಿಗ್ ಥಿಂಗ್ ಎಂದು ಹೇಳಿದ್ರಂತೆ. ಇದನ್ನ ಕೇಳಿದ ಪೆರ್ರಿ ಹಾಗೂ ಅಲಿಸಾ ಹೀಲಿ ನಕ್ಕಿದ್ರಂತೆ. ಆದ್ರೆ, ಈಗ ಕೊಹ್ಲಿ ಭಾರತೀಯ ಕ್ರಿಕೆಟ್ನ ದೊರೆಯೇ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ