25 ಓವರ್ಗಳ ನಂತರ ವಿಕೆಟ್ ಮೇಲೆ ವಿಕೆಟ್ ಕಬಳಿಸಿದ ಬೂಮ್ರಾ
ನ್ಯೂ ಬಾಲ್ನಲ್ಲಿ ಚಾಂಪಿಯನ್ ಬೌಲರ್ ಬೂಮ್ರಾ ಫುಲ್ ಸೈಲೆಂಟ್
2ನೇ ಟೆಸ್ಟ್ ಮ್ಯಾಚ್ನಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಯಾರಿಗೆ ಲಭಿಸಿತು?
ಹೈದ್ರಾಬಾದ್ ಸಮರ ಗೆದ್ದ ಆಂಗ್ಲರು ವೈಜಾಗ್ನಲ್ಲಿ ಮಣ್ಣು ಮುಕ್ಕಿದ್ದಾರೆ. ಆಂಗ್ಲರಿಗೆ ಸೋಲಿನ ರುಚಿ ತೋರಿಸಿದ್ದು ಒನ್ ಆ್ಯಂಡ್ ಓನ್ಲಿ ಜಸ್ಪ್ರೀತ್ ಬೂಮ್ರಾ. ವೈಜಾಗ್ ರನ್ಭೂಮಿಯಲ್ಲಿ ಬೂಮ್ರಾ ಬಿರುಗಾಳಿಯನ್ನೇ ಎಬ್ಬಿಸಿ ವಿಕೆಟ್ ಬೇಟೆಯಾಡಿದ್ರು. ಹಳೆ ಬಾಲ್ನಲ್ಲಿ ಬೆಂಕಿ ಉಗುಳಿ, ಕ್ರಿಕೆಟ್ ಜನಕರೇ ಬೆವರಿ ಹೋಗುವಂತೆ ಮಾಡಿಬಿಟ್ರು.
ಜಸ್ಪ್ರೀತ್ ಬೂಮ್ರಾ ನಮಗೆ ಚಾಂಪಿಯನ್ ಆಟಗಾರ. ಸುದೀರ್ಘ ಕಾಲದಿಂದ ತಂಡಕ್ಕೆ ನೆರವಾಗ್ತಿದ್ದಾರೆ. ಇಂತಹ ಪಂದ್ಯಗಳನ್ನ ಗೆಲ್ಲಬೇಕಾದ್ರೆ ಉತ್ತಮ ಪ್ರದರ್ಶನ ಅತ್ಯವಶ್ಯ. ಕಂಡಿಷನ್ ಸುಲಭವಾಗಿರ್ಲಿಲ್ಲ. ಬೌಲರ್ಗಳನ್ನ ಹುರಿದುಂಬಿಸಿದೆ. ಅವರು ತಮ್ಮ ಕಾರ್ಯವನ್ನ ಯಶಸ್ವಿ ನಿಭಾಯಿಸಿದ್ರು.
ರೋಹಿತ್ ಶರ್ಮಾ, ಭಾರತ ತಂಡದ ಕ್ಯಾಪ್ಟನ್
ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಹೇಳಿದ್ದು ಹಂಡ್ರೆಂಡ್ ಪರ್ಸೆಂಟ್ ಕರೆಕ್ಟ್. ಅತಿಶಯೋಕ್ತಿ ಮಾತುಗಳೇನು ಅಲ್ಲ. ಜಸ್ಪ್ರೀತ್ ಬೂಮ್ರಾ ನಿಜಕ್ಕೂ ಚಾಂಪಿಯನ್ ಪ್ಲೇಯರ್. ಇಂಗ್ಲೆಂಡ್ ಎದುರಿನ ಔಟ್ಸ್ಟ್ಯಾಂಡಿಂಗ್ ಪರ್ಫಾಮೆನ್ಸ್ ಅದಕ್ಕೆ ಉತ್ತಮ ನಿದರ್ಶನ. ವೈಜಾಗ್ನಲ್ಲಿ ಈ ಬೆಂಕಿ ಬೌಲರ್ ಇಂಗ್ಲೆಂಡ್ಗೆ ಅಕ್ಷರಶಃ ನರಕವನ್ನೇ ತೋರಿಸಿ ಬಿಟ್ರು.
ಒನ್ ಮ್ಯಾನ್ ಆರ್ಮಿ ಇಡೀ ಇಂಗ್ಲೆಂಡ್ ತಂಡಕ್ಕೆ ನೀರು ಕುಡಿಸಿದ. ವರ್ಲ್ಡ್ ಕ್ಲಾಸ್ ಬ್ಯಾಟರ್ಸ್, ಡೇಂಜರಸ್ ಹಾಗೂ ಗೇಮ್ ಚೇಂಜರ್ಗಳ ದಂಡೇ ಇಂಗ್ಲೆಂಡ್ ತಂಡದಲ್ಲಿತ್ತು. ಆದರೆ ಬೂಮ್ ಬಾಲ್ ಅಸ್ತ್ರದ ಮುಂದೆ ಇಂಗ್ಲೆಂಡ್ ಬ್ಯಾಟರ್ಸ್ ನೆಲಕಚ್ಚಿ ಹೋಯ್ತು. ಅದ್ಯಾವ ಮಟ್ಟಿಗೆ ಅಂದ್ರೆ 106 ರನ್ಗಳ ದೊಡ್ಡ ಅಂತರದಿಂದ ಪರಾಭಾವಗೊಳ್ತು.
ಹಳೆ ಬಾಲ್ನಲ್ಲಿ ಜಸ್ಪ್ರೀತ್ ಬೂಮ್ರಾ ಫುಲ್ ವೈಲೆಂಟ್
ನ್ಯೂ ಬಾಲ್ನಲ್ಲಿ ಬೌಲರ್ಸ್ ಹೆಚ್ಚು ವಿಕೆಟ್ ಬೇಟೆಯಾಡುತ್ತಾರೆ. ಚೆಂಡು ಹೆಚ್ಚು ಹೊಳಪು ಇರೋದ್ರಿಂದ ಹೆಚ್ಚು ಸ್ವಿಂಗ್ ಆಗಿ ವಿಕೆಟ್ ಉರುಳುವ ಸಾಧ್ಯತೆ ಹೆಚ್ಚಿರುತ್ತೆ. ಆದರೆ ಫೈರಿ ಬೌಲರ್ ಬೂಮ್ರಾ ವಿಚಾರದಲ್ಲಿ ಮಾತ್ರ ಇದು ಉಲ್ಟಾ. ಪ್ರಸಕ್ತ ಇಂಗ್ಲೆಂಡ್ ಸರಣಿಯಲ್ಲಿ ಬೂಮ್ರಾ ಹೊಸ ಬಾಲ್ನಲ್ಲಿ ಅಬ್ಬರಿಸಿದ್ದಕ್ಕಿಂತ ಸೈಲೆಂಟಾಗಿದ್ದೆ ಹೆಚ್ಚು. ಅಂದ್ರೆ 25 ಓವರ್ಗಳ ಮೊದಲು ನ್ಯೂ ಬಾಲ್ನಲ್ಲಿ ಡೀಸೆಂಟ್ ಆಟವಾಡಿದ್ರು.
ಇಂಗ್ಲೆಂಡ್ ವಿರುದ್ದ ನ್ಯೂ ಬಾಲ್ನಲ್ಲಿ ಬೂಮ್ರಾ
ಇಂಗ್ಲೆಂಡ್ ಎದುರಿನ ಸರಣಿಯಲ್ಲಿ ಜಸ್ಪ್ರೀತ್ ಬೂಮ್ರಾ ನ್ಯೂ ಬಾಲ್ನಲ್ಲಿ 26 ಓವರ್ಸ್ ಬೌಲಿಂಗ್ ಮಾಡಿದ್ರು. 40.5 ರ ಎವರೇಜ್ನಲ್ಲಿ ಬರೀ 2 ವಿಕೆಟ್ ಪಡೆದ್ರು. 78 ಬಾಲ್ಗೆ ಒಂದರಂತೆ ವಿಕೆಟ್ ಕಬಳಿಸಿದ್ರು. ಆದರೆ ಹಳೆ ಬಾಲ್ ವಿಚಾರಕ್ಕೆ ಬಂದ್ರೆ ಬೂಮ್ರಾ ನಿಜಕ್ಕೂ ಬೆಂಕಿ ಉಗುಳಿದ್ದಾರೆ. ಮೋಸ್ಟ್ ಡೇಂಜರಸ್ ಅನ್ನಿಸಿಕೊಂಡಿದ್ದಾರೆ. ಹೈದ್ರಾಬಾದ್ ಹಾಗೂ ವೈಜಾಗ್ ಟೆಸ್ಟ್ನಲ್ಲಿ ಬೂಮ್ರಾ ಆಂಗ್ಲರಿಗೆ ಹೆಚ್ಚು ಕಾಟ ಕೊಟ್ಟಿದ್ದು ಹಳೇ ಬಾಲ್ನಲ್ಲಿ. ಬೌಲ್ ರಿವರ್ಸ್ ಆದಂತೆಲ್ಲ ಬ್ಯಾಟ್ಸ್ಮನ್ಗಳ ತಲೆ ಕೆಡಿಸಿದ್ದಾರೆ.
ಯಾರ್ಕರ್ ಸ್ಪೆಷಲಿಸ್ಟ್ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ
ಹಳೆ ಬಾಲ್ನಲ್ಲಿ ಜಸ್ಪ್ರೀತ್ ಬೂಮ್ರಾ ಇಂಪ್ರೆಸ್ಸಿವ್ ದಾಳಿ ನಡೆಸಿದ್ದು, 26.1 ಓವರ್ ಹಾಕಿ 11 ವಿಕೆಟ್ ಬೇಟೆಯಾಡಿದ್ದಾರೆ. 5.8 ಬೌಲಿಂಗ್ ಎವರೇಜ್ ಆದ್ರೆ 14.3 ಬಾಲ್ಗೆ ಒಂದೊಂದು ವಿಕೆಟ್ ಪಡೆದಿದ್ದಾರೆ. ವೈಜಾಗ್ನಲ್ಲಿ ಧೂಳೆಬ್ಬಿಸಿದ ಬೂಮ್ರಾ ಆಂಗ್ಲರ ಹೆಡೆಮುರಿ ಕಟ್ಟಿದ್ರು. ಮೊದಲ ಇನ್ನಿಂಗ್ಸ್ನಲ್ಲಿ 6 ಹಾಗೂ 2ನೇ ಇನ್ನಿಂಗ್ಸ್ನಲ್ಲಿ 3 ವಿಕೆಟ್ ಕಬಳಿಸಿ ಗೆಲುವಿನ ಹೀರೋ ಅನ್ನಿಸಿಕೊಂಡ್ರು. ಆಂಗ್ಲರಿಗೆ ಸೋಲಿನ ರುಚಿ ತೋರಿಸಿದ ಸೂಪರ್ ಸ್ಟಾರ್ ಬೌಲರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಬಾಚಿಕೊಂಡ್ರು.
ವೈಜಾಗ್ನಲ್ಲಿ ಟೀಮ್ ಇಂಡಿಯಾ ವಿಜೃಂಭಿಸಿದೆ. ಇದ್ರಲ್ಲಿ ಬೂಮ್ ಬೂಮ್ ಬೂಮ್ರಾ ಪಾತ್ರ ದೊಡ್ಡದಿದೆ. ಮುಂದಿನ ಪಂದ್ಯ ತವರು ಗುಜರಾತ್ನ ರಾಜ್ಕೋಟ್ನಲ್ಲಿ ನಡೆಯಲಿದೆ. ಅಲ್ಲೂ ಚಾಂಪಿಯನ್ ಬೌಲರ್ ಆಂಗ್ಲರಿಗೆ ಚಳ್ಳೆಹಣ್ಣು ತಿನ್ನಿಸಲಿ ಅನ್ನೋದೆ ಎಲ್ಲರ ಆಶಯ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ