ಕೆ.ಎಸ್ ಭರತ್ ಕೈ ಸೇರಿದ್ರೆ ಬಿಡೋ ಮಾತೇ ಇಲ್ಲ
ಶ್ರೇಯಸ್ ಅಯ್ಯರ್ ಕ್ಯಾಚ್ಗೆ ದಂಗಾದ ಕ್ರಾವ್ಲಿ!
ಚೆಂಗನೆ ಜಿಗಿದು ಸೂಪರ್ ಕ್ಯಾಚ್ ಹಿಡಿದ ಗಿಲ್
ಕ್ಯಾಚಸ್ ವಿನ್ ಮ್ಯಾಚಸ್.. ಈ ಮಾತು ಸದ್ಯ ಟೀಮ್ ಇಂಡಿಯಾಗೆ ಸಖತ್ ಸೂಟ್ ಆಗುತ್ತೆ. ಯಾಕಂದ್ರೆ, ರೋಹಿತ್ ಪಡೆ ಈಗ ಬ್ರಿಲಿಯಂಟ್ ಫೀಲ್ಡಿಂಗ್ ಮಂತ್ರ ಜಪಿಸ್ತಿದೆ. ಇಷ್ಟು ದಿನ ಬ್ಯಾಟಿಂಗ್-ಬೌಲಿಂಗ್ ತಂಡದ ಸ್ಟ್ರೆಂಥ್ ಆಗಿತ್ತು. ಆದ್ರೆ ಈಗ ಫೀಲ್ಡಿಂಗ್ ಕೂಡ ತಂಡದ ಬಲವಾಗಿದೆ. ಕ್ವಾಲಿಟಿ ಪೀಲ್ಡಿಂಗ್ ಟೀಮ್ ಇಂಡಿಯಾವನ್ನ ಪರ್ಫೆಕ್ಟ್ ತಂಡವನ್ನಾಗಿಸಿದೆ.
ಟೀಮ್ ಇಂಡಿಯಾ ಬರೀ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಮಾತ್ರ ಬಲಿಷ್ಠವಾಗಿಲ್ಲ. ಫೀಲ್ಡಿಂಗ್ನಲ್ಲೂ ಕೂಡ ಸಖತ್ ಸ್ಟ್ರಾಂಗ್ ಆಗಿದೆ. ವೈಜಾಗ್ ಟೆಸ್ಟ್ ವಿಕ್ಟರಿ ನೋಡಿದೋರಿಗೆ ಅದು ಗೊತ್ತಿರುತ್ತೆ. ಯಾಕಂದ್ರೆ ಈ ಗೆಲುವಿನಲ್ಲಿ ಫೀಲ್ಡಿಂಗ್ ಕ್ರೂಷಿಯಲ್ ರೋಲ್ ಪ್ಲೇ ಮಾಡ್ತು. ಎಸ್ಪೆಷಲಿ ಮ್ಯಾಜಿಕಲ್ ಕ್ಯಾಚಸ್.! ಹೌದು… ಕ್ಯಾಚಸ್ ವಿನ್ ಮ್ಯಾಚಸ್ ಮಾತನ್ನ ರೋಹಿತ್ ಬಾಯ್ಸ್ ಚಾಚು ತಪ್ಪದೇ ಪಾಲಿಸಿದ್ರು.
ಭರತ್ ಕೈ ಸೇರಿದ್ರೆ ಬಿಡೋ ಮಾತೇ ಇಲ್ಲ
ಕೆಎಸ್ ಭರತ್ ಬ್ಯಾಟಿಂಗ್ನಲ್ಲಿ ಸ್ವಲ್ಪ ವೀಕ್ ನಿಜ. ಆದ್ರೆ ಕೀಪಿಂಗ್ನಲ್ಲಿ ಮಾತ್ರ ಬೆಂಕಿ. ಬಾಲ್ ಭರತ್ ಕೈ ಸೇರಿದ್ರೆ ಸಾಕು ಬಿಡೋ ಮಾತೇ ಇಲ್ಲ. ಅದೆಷ್ಟೇ ಟಫ್ ಇದ್ರೂ ಕ್ಯಾಚ್ ಹಿಡಿದೇ ತೀರ್ತಾರೆ. ಬೆನ್ ಡಕೆಟ್ರ ಈ ಸ್ಟನ್ನಿಂಗ್ ಕ್ಯಾಚೆ ಅದಕ್ಕೆ ಅತ್ಯುತ್ತಮ ನಿದರ್ಶನ.
ಶ್ರೇಯಸ್ ಕ್ಯಾಚ್ಗೆ ದಂಗಾದ ಕ್ರಾವ್ಲಿ
ಜಾಕ್ ಕ್ರಾವ್ಲಿ ವೈಜಾಗ್ನಲ್ಲಿ ಪವರ್ಫುಲ್ ಆಟವಾಡ್ತಿದ್ರು. ಇನ್ನೇನು ಭಾರತದ ಕಥೆ ಮುಗಿದು ಹೋಯ್ತು ಅನ್ನುವಷ್ಟರಲ್ಲಿ ಶ್ರೇಯಸ್ ಅಯ್ಯರ್ ಫೀಲ್ಡಿಂಗ್ನಲ್ಲಿ ಜಾದೂ ಮಾಡಿದ್ರು. ಗಲ್ಲಿಯಲ್ಲಿ ಫೀಲ್ಡ್ ಮಾಡ್ತಿದ್ದ ಶ್ರೇಯಸ್, ಬ್ಯಾಕ್ವರ್ಡ್ ಕಡೆ ಚಿರತೆಯಂತೆ ಓಡಿ ಹೋಗಿ ಅದ್ಭುತ ಕ್ಯಾಚ್ ಹಿಡಿದ್ರು.
ಚೆಂಗನೆ ಜಿಗಿದು ಸೂಪರ್ ಕ್ಯಾಚ್ ಹಿಡಿದ ಗಿಲ್
ವೈಜಾಗ್ ಟೆಸ್ಟ್ ಮೊದಲ ಇನ್ನಿಂಗ್ಸ್ನಲ್ಲಿ ಶುಭ್ಮನ್ ಗಿಲ್ ಬರೋಬ್ಬರಿ 4 ಕ್ಯಾಚ್ ಹಿಡಿದು ಸೈ ಅನ್ನಿಸಿಕೊಂಡಿದ್ರು. ಅದ್ರಲ್ಲೂ ಶಾರ್ಟ್ ಫೀಲ್ಡ್ನಲ್ಲಿ ಹಿಡಿದ ರೇಹಾನ್ ಅಹ್ಮದ್ ಕ್ಯಾಚ್ ಅಂತೂ ಸೂಪರ್ಬ್.!
A superb catch from Shubhman Gill to dismiss Rehan Ahmed#INDvENG #Gill #Iyer pic.twitter.com/jJD3uCKB8P
— The Cricket Analyst (@Wing1653725) February 3, 2024
ರೋಹಿತ್ ಕ್ಯಾಚ್ಗೆ ಪೋಪ್ ದಿಗ್ಭ್ರಾಂತ..!
ಬ್ಯಾಟಿಂಗ್ನಲ್ಲಿ ಮಂಕಾದ ಕ್ಯಾಪ್ಟನ್ ರೋಹಿತ್ ಶರ್ಮಾ ಫೀಲ್ಡಿಂಗ್ನಲ್ಲಿ ಮಾತ್ರ ಮ್ಯಾಜಿಕ್ ಮಾಡಿದ್ರು. ಓಲಿ ಪೋಪ್ ಬ್ಯಾಟ್ಗೆ ಸವರಿದ ವಿಕೆಟ್ ಹಿಂದೆ ಹೋಯ್ತು. ಸ್ಲಿಪ್ನಲ್ಲಿ ನಿಂತಿದ್ದ ರೋಹಿತ್ ಕಣ್ಮುಚ್ಚಿ ತೆಗೆಯುವಷ್ಟರಲ್ಲಿ ಸಖತ್ ಕ್ಯಾಚ್ ಹಿಡಿದು ಪೆವಿಲಿಯನ್ ದಾರಿ ತೋರಿಸಿದ್ರು.
WHAT A CATCH FROM ROHIT SHARMA …!!! 🤯pic.twitter.com/7rPNYMw6pe
— Mufaddal Vohra (@mufaddal_vohra) February 5, 2024
ಶ್ರೇಯಸ್ ಅಯ್ಯರ್ ಅದ್ಭುತ ರನೌಟ್..!
ಇನ್ನು ಶ್ರೇಯಸ್ ಅಯ್ಯರ್ ಮಾಡಿದ ಬೆನ್ ಸ್ಟೋಕ್ಸ್ ರನೌಟ್ ಅಂತೂ ಸೂಪರ್ಬ್. ಫಾರ್ವರ್ಡ್ನಲ್ಲಿ ನಿಂತು ಚೆಂಡನ್ನ ವಿಕೆಟ್ಗೆ ಡೈರೆಕ್ಟ್ ಹೊಡೆದ್ರು ಅಷ್ಟೇ.! ಬೆನ್ ಸ್ಟೋಕ್ಸ್ ಸಪ್ಪೆ ಮೋರೆ ಹಾಕಿ ಪೆವಿಲಿಯನ್ ಸೇರಿದ್ರು.
Extraordinary stuff from shreyas iyer. Brilliant field work to run out stokes#INDvsENGTest #INDvENG #INDvsENG pic.twitter.com/huWyW6WVWa
— RanaJi🏹 (@RanaTells) February 5, 2024
ಆಟಗಾರರು ಹೀಗೆ ಬ್ರಿಲಿಯಂಟ್ ಫೀಲ್ಡಿಂಗ್ ಮಾಡಿದ್ರೆ ಯಾವ ಫೀಲ್ಡಿಂಗ್ ಕೋಚ್ಗೆ ತಾನೇ ಖುಷಿ ಆಗಲ್ಲ ಹೇಳಿ. ಟಿ ದಿಲೀಪ್ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಮೊದಲ 2 ಟೆಸ್ಟ್ಗಳಲ್ಲಿ ಟೀಮ್ ಇಂಡಿಯಾ ಅದ್ಭುತ ಫೀಲ್ಡಿಂಗ್ ನಡೆಸಿ ಎಚ್ಚೆತ್ತುಕೊಂಡಿದೆ. ಈ ಫೆಂಟಾಸ್ಟಿಕ್ ಫೀಲ್ಡಿಂಗ್ ಮ್ಯಾಜಿಕ್ ಇಲ್ಲಿಗೆ ನಿಲ್ಲದೆ ಮುಂದಿನ ಪಂದ್ಯದಲ್ಲೂ ಮರುಕಳಿಸುವಂತಾಗಲಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ