ವಿದಾಯ ಹೇಳ್ತಾರೋ, ಇಲ್ವೋ ಮಿಲಿಯನ್ ಡಾಲರ್ ಪ್ರಶ್ನೆ
ಬೆಳೆದು ಬಂದ ಹಾದಿಯನ್ನ ಮರೆಯದಿರೋ ಪ್ಲೇಯರ್ ಧೋನಿ
ಧೋನಿ ಬ್ಯಾಟ್ ಮೇಲಿನ ಸ್ಟಿಕ್ಕರ್ ಬದಲಿಸಲು ಇದೆ ಕಾರಣ
ಎಷ್ಟೇ ಎತ್ತರಕ್ಕೆ ಬೆಳೆದ್ರೂ ಬೆಳೆದ ಬಂದ ಹಾದಿಯನ್ನ ಮರಿಬಾರ್ದು ಅನ್ನೋ ಮಾತಿದೆ. ಈ ಮಾತನ್ನ ಚಾಚೂ ತಪ್ಪಿಸದೇ ಪಾಲಿಸಿದ ಕ್ರಿಕೆಟಿಗ ಎಮ್.ಎಸ್ ಧೋನಿ. ಮುಂಬರೋ ಐಪಿಎಲ್ಗೆ ಸಜ್ಜಾಗ್ತಿರೋ ಮಾಹಿ, ಹೊಸ ಹೆಜ್ಜೆಯನ್ನಿಟ್ಟಿದ್ದಾರೆ. ಐಪಿಎಲ್ ಅಖಾಡದಲ್ಲಿ ಜೀವದ ಗೆಳೆಯನಿಗೆ ವಿಶೇಷ ಗೌರವ ಸಲ್ಲಿಸಲು ಮುಂದಾಗಿದ್ದಾರೆ. ಅಷ್ಟಕ್ಕೂ ಚೆನ್ನೈ ಕ್ಯಾಪ್ಟನ್ ತೆಗೆದುಕೊಂಡಿರೋ ಆ ನಿರ್ಧಾರ ಏನು, ಆ ಜೀವದ ಗೆಳೆಯ ಯಾರು?.
ಧೋನಿ ದಿ ಅನ್ಟೋಲ್ಡ್ ಸ್ಟೋರಿ ಚಿತ್ರದ ಈ ಸೀನ್ ನಿಮಗೆ ನೆನಪಿರಬಹುದು. ಧೋನಿ ಆಗಿನ್ನೂ ಅಂತರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟಿರಲಿಲ್ಲ. ಮಿಡಲ್ ಕ್ಲಾಸ್ ಫ್ಯಾಮಿಲಿಯ ಧೋನಿ ಆರ್ಥಿಕವಾಗಿ ತುಂಬಾ ಸಮಸ್ಯೆ ಎದುರಿಸ್ತಾ ಇದ್ದ ದಿನಗಳವು. ಆಗ ಧೋನಿಗಾಗಿ ಜೀವದ ಗೆಳೆಯ ಪರಮ್ಜಿತ್ ಸಿಂಗ್ ಕಿಟ್ ಸ್ಪಾನ್ಸರ್ಗಾಗಿ ಹುಡುಕಾಟ ಆರಂಭಿಸಿದ್ದ.
ಗೆಳೆಯ ಬೆಳೆಯಬೇಕು ಅನ್ನೋ ಆಸೆ.!
ಅಂದು ಧೋನಿಗಾಗಿ ಕಿಟ್ ಸ್ಪಾನ್ಸರ್ಗಾಗಿ ಹುಡುಕಾಟ ನಡೆಸಿದ ಗೆಳೆಯನಿಗೆ ಡೀಲರ್ ಕೇಳಿದ ನೇರವಾದ ಪ್ರಶ್ನೆ. ಇದ್ರಲ್ಲಿ ನಿನ್ನ ಸ್ವಾರ್ಥ ಏನಿದೆ?. ನಿಜ ಹೇಳಬೇಕಂದ್ರೆ, ಅಂದು ಸ್ಪಾನ್ಸರ್ಗಳಿಗಾಗಿ ಅಂಗಲಾಚಿದ್ದ ಧೋನಿಯ ಗೆಳೆಯನಲ್ಲಿದ್ದಿದ್ದು ಸ್ವಾರ್ಥವಲ್ಲ, ಪ್ರೀತಿ. ಗೆಳೆಯ ಬೆಳೆಯಬೇಕು ಅನ್ನೋ ಆಸೆ.
ಕೇವಲ ಸ್ಪಾನ್ಸರ್ ಶಿಪ್ ವಿಚಾರವಾಗಿ ಮಾತ್ರವಲ್ಲ, ಕರಿಯರ್ ಆರಂಭದ ದಿನಗಳಲ್ಲಿ ಕಷ್ಟ ಬಂದಾಗಲೆಲ್ಲ ಧೋನಿ ಜೊತೆ ನಿಂತಿದ್ದು ಗೆಳೆಯರೇ. ಅದ್ರಲ್ಲೂ, ಪ್ರೈಮ್ ಸ್ಪೋರ್ಟ್ಸ್ ಅನ್ನೋ ಚಿಕ್ಕ ಸ್ಪೋರ್ಟ್ಸ್ ಅಂಗಡಿಯನ್ನಿಟ್ಟುಕೊಂಡಿದ್ದ ಪರಮ್ಜಿತ್ ಸಿಂಗ್, ಧೋನಿ ದೊಡ್ಡ ಸ್ಟಾರ್ ಆಗಬೇಕು ಎಂದು ಹಂಬಲಿಸಿದ ವ್ಯಕ್ತಿ. ಧೋನಿಯನ್ನ ಕಷ್ಟವನ್ನ ಅರ್ಥ ಮಾಡಿದ್ದ ಈ ಪರಮ್ಜಿತ್ ಸಿಂಗ್, ಒಂದು ಸ್ಪಾನ್ಸರ್ ತರಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ.. ಕೊನೆಗೂ ಬಿಡಲಿಲ್ಲ, ಡೊಮೆಸ್ಟಿಕ್ ಕ್ರಿಕೆಟ್ಗೆ ಕಾಲಿಡೋಕೆ ಮುನ್ನವೇ ಸ್ಪಾನ್ಸರ್ನ ಹುಡುಕಿ ತಂದೇ ಬಿಟ್ರು.
ಧೋನಿಯ ಬಯೋಪಿಕ್ನಲ್ಲಿ ನೀವು ಏನು ನೋಡಿದ್ದೀರೋ ಅದೆಲ್ಲವೂ ಸತ್ಯ ಘಟನೆಗಳೇ.! ಅಂದು ಸ್ಪಾನ್ಸರ್ ಸಿಕ್ಕ ಬಳಿಕ ದೋನಿ, ಪರಮ್ಜಿತ್ ಅಂಗಡಿಗೆ ತೆರಳಿ ಭಾವುಕರಾಗಿ ತಬ್ಬಿಕೊಂಡು ಧನ್ಯವಾದ ಹೇಳಿದ್ರು. ಇದೀಗ ಕಷ್ಟದಲ್ಲಿ ಕೈ ಹಿಡಿದ ಗೆಳೆಯನಿಗೆ ವಿಶೇಷ ಗೌರವ ಸಲ್ಲಿಸಲು ಮುಂದಾಗಿದ್ದಾರೆ.
ಗೆಳೆಯನಿಗೆ ವಿಶೇಷ ಗೌರವ ಸಲ್ಲಿಸಲು ಮುಂದಾದ ಮಾಹಿ.!
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17ಕ್ಕೆ ಕೌಂಟ್ಡೌನ್ ಶುರುವಾಗಿದೆ. ಮಾರ್ಚ್ ಕೊನೆ ವಾರದಲ್ಲಿ ಐಪಿಎಲ್ ಹಂಗಾಮ ಆರಂಭವಾಗೋ ನಿರೀಕ್ಷೆಯಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ಯಾಪ್ಟನ್ ಧೋನಿ ಕೂಡ ಅಭ್ಯಾಸ ಆರಂಭಿಸಿದ್ದಾರೆ. ಜೊತೆಗೆ ಇದೇ ಐಪಿಎಲ್ನಲ್ಲಿ ಗೆಳೆಯನಿಗೆ ವಿಶೇಷ ಗೌರವ ಸಲ್ಲಿಸಲು ಮುಂದಾಗಿದ್ದಾರೆ.
ಮಾಹಿ ಬ್ಯಾಟ್ ಮೇಲೆ ಪ್ರೈಮ್ ಸ್ಪೋರ್ಟ್ಸ್ ಸ್ಟಿಕ್ಕರ್.?
ಕಳೆದ ಐಪಿಎಲ್ ಟೂರ್ನಿಯಲ್ಲಿ ಧೋನಿ ಬೇರೆ ಬೇರೆ ಸ್ಟಿಕರ್ಗಳಿದ್ದ ಬ್ಯಾಟ್ ಹಿಡಿದು ಅಂಗಳಕ್ಕಿಳಿದಿದ್ದು ನಿಮಗೆ ನೆನಪಿರಬಹುದು. ಕರಿಯರ್ ಆರಂಭದಿಂದ ಈವರೆಗೆ ತಮ್ಮಗೆ ಸ್ಪಾನ್ಸರ್ ಮಾಡಿದವರಿಗೆ ಗೌರವ ಸೂಚಿಸಲು ಧೋನಿ ಹಾಗೇ ಮಾಡಿದ್ರು. ಇದೀಗ ಈ ಬಾರಿಯೂ ಧೋನಿ ಬ್ಯಾಟ್ ಮೇಲಿನ ಸ್ಟಿಕ್ಕರ್ ಬದಲಾಗಲಿದೆ. ಈ ಬಾರಿ ಧೋನಿ ಅಂದು ಬ್ಯಾಟ್ ಸ್ಪಾನ್ಸರ್ ಹುಡುಕಿ ತಂದು ಕೊಟ್ಟ ಪರಮ್ಜಿತ್ ಸಿಂಗ್ರ ಅಂಗಡಿಯ ಹೆಸರಾದ ಪ್ರೈಮ್ ಸ್ಪೋರ್ಟ್ಸ್ ಸ್ಟಿಕ್ಕರ್ ಹೊಂದಿರೋ ಬ್ಯಾಟ್ನಲ್ಲಿ ಆಡಲು ಸಜ್ಜಾಗಿದ್ದಾರೆ.
ಎಲ್ಲಿಂದ ಆರಂಭವೋ, ಅಲ್ಲೇ ಅಂತ್ಯ.?
ಐಪಿಎಲ್ ಟೂರ್ನಿಗೆ ಅಭ್ಯಾಸ ಆರಂಭಿಸಿರುವ ಧೋನಿ, ನೆಟ್ಸ್ನಲ್ಲಿ ಪ್ರೈಮ್ ಸ್ಪೋರ್ಟ್ಸ್ ಸ್ಟಿಕ್ಕರ್ನ ಬ್ಯಾಟ್ನೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಬಾರಿಯ ಐಪಿಎಲ್ ಟೂರ್ನಿ ಧೋನಿ ಪಾಲಿನ ಕೊನೆಯ ಟೂರ್ನಿ ಎನ್ನಲಾಗ್ತಿದೆ. ಹೀಗಾಗಿ, ಅಂದು ಕರಿಯರ್ ಆರಂಭದಲ್ಲಿ ಹೆಗಲಾಗಿ ನಿಂತ ಗೆಳೆಯನಿಗೆ ವಿಶೇಷ ಗೌರವ ಸಲ್ಲಿಸಲು ಮುಂದಾಗಿದ್ದಾರೆ. ಎಲ್ಲಿಂದ ಆರಂಭವಾಗಿತ್ತೋ.. ಅಲ್ಲೇ ಅಂತ್ಯಗೊಳಿಸೋದು ಮಾಹಿಯ ಪ್ಲಾನ್.
MS Dhoni signing 'Prime Sports' miniature bats.
Prime Sports is owned by his friend, MS helping his friend establish as a brand. 👌 pic.twitter.com/Wxdiz2UaKA
— Mufaddal Vohra (@mufaddal_vohra) February 8, 2024
ಧೋನಿ ನಡೆಯನ್ನ ಯಾರೂ ಪ್ರಿಡಿಕ್ಟ್ ಮಾಡೋಕೆ ಆಗಲ್ಲ. ಹೀಗಾಗಿ ವಿದಾಯ ಹೇಳ್ತಾರೋ, ಇಲ್ವೋ ಅನ್ನೋದು ಸದ್ಯಕ್ಕೆ ಮಿಲಿಯನ್ ಡಾಲರ್ ಪ್ರಶ್ನೆ. ಆದ್ರೆ, ಗೆಳೆಯನಿಗೆ ಗೌರವ ಸಲ್ಲಿಸಲು ಮುಂದಾಗಿರುವ ನಡೆ ನಿಜಕ್ಕೂ ಮೆಚ್ಚುವಂತದ್ದು. ಅದ್ಕೆ ನಾವು ಆರಂಭದಲ್ಲೇ ಹೇಳಿದ್ದು, ಧೋನಿ ಬೆಳೆದು ಬಂದ ಹಾದಿಯನ್ನ ಮರೆಯದೆ ಇರೋ ಕ್ರಿಕೆಟಿಗ ಅಂತಾ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ