ಮನೆ ಬಿಟ್ಟು ಹೋಗಲ್ಲ ಎಂದು ಪಟ್ಟು ಹಿಡಿದು ಕೂತಿದ್ದಳಂತೆ
ದೀರ್ಘ ಪ್ರವಾಸದಲ್ಲಿದ್ದ ರಾಹುಲ್ ದ್ರಾವಿಡ್ಗೆ ಸರ್ಪ್ರೈಸ್
ನನ್ನ ಪೋಷಕರಿಗೆ ಎಚ್ಚರಿಕೆ ಆಗಿತ್ತು ಎಂದಿದ್ದೇಕೆ ದ್ರಾವಿಡ್
ರಾಹುಲ್ ದ್ರಾವಿಡ್. ಆಟದಿಂದಲೇ ಅಲ್ಲ. ವ್ಯಕ್ತಿತ್ವದಿಂದಲೂ ಅಭಿಮಾನಿಗಳ ಹೃದಯ ಗೆದ್ದ ಕ್ರಿಕೆಟರ್. ಇಂತಹ ಮಿಸ್ಟರ್ ಡಿಪೆಂಡಬಲ್ಗೆ ಲೇಡಿ ಫ್ಯಾನ್, ಮನೆಗೆ ಆಗಮಿಸಿ ಶಾಕ್ ನೀಡಿದ್ದರು.
ರಾಹುಲ್ ದ್ರಾವಿಡ್. ಅಭಿಮಾನಿಗಳ ನೆಚ್ಚಿನ ವಾಲ್, ಮಿಸ್ಟರ್ ಡಿಪೆಂಡೆಬಲ್. ನಡೆ, ನುಡಿ, ವ್ಯಕ್ತಿತ್ವದಿಂದ ಅಸಂಖ್ಯಾತ ಅಭಿಮಾನಿಗಳನ್ನೇ ಸಂಪಾದಿಸಿದ್ದಾರೆ. ಅತಿ ಹೆಚ್ಚು ಲೇಡಿ ಫ್ಯಾನ್ಸ್ ಹೊಂದಿರುವವರ ಪೈಕಿ ರಾಹುಲ್ ದ್ರಾವಿಡ್ ಕೂಡ ಒಬ್ಬರು. ರಾಹುಲ್ ದ್ರಾವಿಡ್ರ ಹ್ಯಾಂಡ್ಸಮ್ ಲುಕ್ಗೆ ಹಲವರು ಬೋಲ್ಡ್ ಆಗಿ, ಪ್ರಪೋಸ್ ಮಾಡಿದ ಎಕ್ಸಾಂಪಲ್ಸ್ ಇವೆ. ಲೇಡಿ ಫ್ಯಾನ್ಸ್ ಹೊಂದಿದ್ದ ರಾಹುಲ್ ದ್ರಾವಿಡ್ಗೆ, ಹೈದರಾಬಾದ್ ಮೂಲದ ಮಹಿಳಾ ಅಭಿಮಾನಿಯೊಬ್ಬರು ಶಾಕ್ ನೀಡಿದ್ದರು. ಇಂಟ್ರೆಸ್ಟಿಂಗ್ ಅಂದ್ರೆ ಮನೆ ಬಿಟ್ಟು ಬಂದಿದ್ದ ಆಕೆ, ದ್ರಾವಿಡ್ ಮನೆಯಲ್ಲೇ ಉಳಿದುಕೊಳ್ಳಲು ಮುಂದಾಗಿದ್ದಳು.
ನಾನು ದೀರ್ಘ ಪ್ರವಾಸದಿಂದ ಮರಳಿದ್ದೆ. ಪ್ರವಾಸದ ಬಳಿಕ ಮನೆಯಲ್ಲಿ ಮಲಗಿದ್ದೆ. ನನ್ನ ತಾಯಿ ಸಂಜೆ ಹೇಳಿದ್ರು. ನಿನ್ನ ಅಭಿಮಾನಿ ನಿನಗಾಗಿ ವೇಯ್ಟ್ ಮಾಡ್ತಿದ್ದಾರೆ. ಆಕೆ ಹೈದ್ರಾಬಾದ್ನಿಂದ ಬಂದಿದ್ದಾಳೆ ಎಂದು ತಿಳಿಸಿದ್ರು. ಒಂದೂವರೆ ಗಂಟೆಗಳಿಂದ ಕಾದಿದ್ದ ಆಕೆಗೆ ನಮ್ಮ ಪೋಷಕರು, ಟೀ, ಕಾಫಿ ನೀಡಿ ಉಪಚಾರ ಮಾಡಿದ್ರು. ನಾನು ಸಾಮಾನ್ಯವಾಗಿ ಆಟೋಗ್ರಾಫ್, ಫೋಟೋಗ್ರಾಫ್ ಎಂದು ತೆರಳಿ ಹಲೋ, ಹೇಗಿದ್ದೀಯಾ? ಓ ನೀನು ಹೈದ್ರಾಬಾದ್ನಿಂದ ಬಂದಿಯಾ. ಗ್ರೇಟ್ ಎಂದು ಮಾತನಾಡಿದೆ. ಆಕೆ ನಾನು, ಮನೆ ಬಿಟ್ಟು ಹೋಗಲ್ಲ ಎಂದಳು.
ನಾನು ಹೈದ್ರಾಬಾದ್ ಮನೆ ಬಿಟ್ಟು ಬಂದಿದ್ದೇನೆ. ನಾನು ಇಲ್ಲೇ ಉಳಿಯಲು ಬಂದಿದ್ದೇನೆ. ನಾನು ಹೇಳಿದೆ. ಅದು ಹೇಗೆ ಸಾಧ್ಯ? ನಿಮ್ಮ ತಂದೆ-ತಾಯಿ ಎಲ್ಲಿ ಎಂದು ಪ್ರಶ್ನಿಸಿದೆ. ಆ ದಿನ ನನಗೆ ತುಂಬ ಬೇಸರವಾಯ್ತು. ನಮ್ಮ ಪೋಷಕರು ಬಂದು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡರು. ಸಮಸ್ಯೆ ಬಗೆಹರಿಸಿದ್ರು. ಇದು ನನ್ನ ಪೋಷಕರಿಗೆ ಎಚ್ಚರಿಕೆಯ ಕರೆಗಂಟೆಯಾಗಿತ್ತು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್