ಮೊದಲ ಬಾರಿ ಟೆಸ್ಟ್ ಸರಣಿಗೆ ಕೊಹ್ಲಿ ಅಲಭ್ಯ.!
ವಿರಾಟ್ ಕೊಹ್ಲಿಯ ಕಮ್ಬ್ಯಾಕ್ ಯಾವಾಗ.?
3 ತಿಂಗಳು, 6 ಸರಣಿ , ಕೊಹ್ಲಿ ಆಡಿದ್ದು 4 ಪಂದ್ಯ.!
ವಿರಾಟ್ ಕೊಹ್ಲಿಯ ಕಮ್ಬ್ಯಾಕ್ ಯಾವಾಗ?. ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನ ಬಿಡದೇ ಕಾಡ್ತಿರೋ ಪ್ರಶ್ನೆಯಿದು. ಕಿಂಗ್ ಕೊಹ್ಲಿಯ ಕಮ್ಬ್ಯಾಕ್ ವಿಚಾರದಲ್ಲಿ ಸದ್ಯಕ್ಕಂತೂ ಸ್ಪಷ್ಟತೆ ಸಿಕ್ಕಿಲ್ಲ. ಆದರ ನಡುವೆ ಮತ್ತೊಂದು ಶಾಕಿಂಗ್ ಸುದ್ದಿ ಹೊರ ಬಿದ್ದಿದೆ. ಏನದು ಹೊಸ ಸುದ್ದಿ.? ಇಲ್ಲಿದೆ ಡಿಟೇಲ್ಸ್!.
ಇಂಗ್ಲೆಂಡ್ ಎದುರಿನ ಮೊದಲ 2 ಟೆಸ್ಟ್ನಿಂದ ಹೊರಗುಳಿದಿದ್ದ ವಿರಾಟ್ ಕೊಹ್ಲಿ, ಇದೀಗ ಉಳಿದ 3 ಪಂದ್ಯಗಳಿಂದಲೂ ಹೊರಗುಳಿಯೋ ನಿರ್ಧಾರ ಮಾಡಿದ್ದಾರೆ. ವೈಯಕ್ತಿಕ ಕಾರಣ ನೀಡಿ ವಿರಾಟ್ ಕೊಹ್ಲಿ ರಜೆ ಕೇಳಿದ್ರೆ, ಬಿಸಿಸಿಐ & ಟೀಮ್ ಮ್ಯಾನೇಜ್ಮೆಂಟ್ ಇದಕ್ಕೆ ಒಪ್ಪಿಗೆ ನೀಡಿದೆ. ಇಷ್ಟೇ ಅಲ್ಲ. ಕೊಹ್ಲಿಗೆ ನಮ್ಮ ಬೆಂಬಲ ಇದೆ ಅಂತಲೂ ಬಿಸಿಸಿಐ ತನ್ನ ಸ್ಟೇಟ್ಮೆಂಟ್ನಲ್ಲಿ ಹೇಳಿಕೊಂಡಿದೆ. ಆದ್ರೆ, ಆ ವೈಯಕ್ತಿಕ ಕಾರಣ ಏನು ಅನ್ನೋದು ಮಾತ್ರ ನಿಗೂಢವಾಗಿಯೇ ಉಳಿದಿದೆ.
ಕರಿಯರ್ನಲ್ಲೇ ಮೊದಲ ಬಾರಿ ಟೆಸ್ಟ್ ಸರಣಿಗೆ ಕೊಹ್ಲಿ ಅಲಭ್ಯ.!
2011ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಡೆಬ್ಯೂ ಮಾಡಿದ ವಿರಾಟ್ ಕೊಹ್ಲಿ, ಮೊದಲ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಕಳಪೆ ಪರ್ಫಾಮೆನ್ಸ್ ನೀಡಿದ್ರು. ಹೀಗಾಗಿ ಇಂಗ್ಲೆಂಡ್ ಪ್ರವಾಸದಿಂದ ಕೊಹ್ಲಿಯನ್ನ ಡ್ರಾಪ್ ಮಾಡಲಾಗಿತ್ತು. ಅದೇ ಕೊನೆ ಅದಾದ ಬಳಿಕ ನಡೆದ ಎಲ್ಲಾ ಟೆಸ್ಟ್ ಸರಣಿಗಳಲ್ಲಿ ಕೊಹ್ಲಿ ಟೀಮ್ ಇಂಡಿಯಾ ಭಾಗವಾಗಿದ್ರು. ಆದರೆ, ಇದೇ ಮೊದಲ ಬಾರಿಗೆ ಕೊಹ್ಲಿ ಟೆಸ್ಟ್ ಸರಣಿಯಿಂದಲೇ ಹೊರಗುಳಿಯೋ ನಿರ್ಧಾರ ಮಾಡಿದ್ದಾರೆ.
ಅಂದು ತಂದೆ ಸಾವಿನ ನಡುವೆಯೂ ಮೈದಾನಕ್ಕಿಳಿದು ಹೋರಾಟ.!
ವಿರಾಟ್ ಕೊಹ್ಲಿ ಟೆಸ್ಟ್ ಸರಣಿಯಿಂದ ಹೊರಗುಳಿದ ಬೆನ್ನಲ್ಲೇ ದೇಶ ಮೊದಲಾ.? ಕುಟುಂಬ ಮೊದಲಾ.? ಎಂಬ ಚರ್ಚೆ ನಡೀತಾಯಿದೆ. ಅಂದು, ತಂದೆ ತೀರಿಕೊಂಡ ಸಂದರ್ಭದಲ್ಲೂ ಬಂದು ಬ್ಯಾಟಿಂಗ್ ನಡೆಸಿದ್ದ ಕೊಹ್ಲಿಯ ಕ್ರಿಕೆಟ್ ಪ್ರೇಮ, ಡೆಡಿಕೇಷನ್ ಅನ್ನ ಅನುಮಾನಿಸೋಕೆ ಸಾಧ್ಯವೇ ಇಲ್ಲ. ಆದ್ರೂ, ಈ ಬಾರಿ ಕೊಹ್ಲಿ ಕೂಡ ಮೌನಕ್ಕೆ ಜಾರಿದ್ದು, ಈ ಮೌನವೇ ಫ್ಯಾಮಿಲಿ ಫಸ್ಟ್ ಅನ್ನೋ ಉತ್ತರವನ್ನ ನೀಡ್ತಿದೆ.
ಐಪಿಎಲ್ ಟೂರ್ನಿಗೂ ವಿರಾಟ್ ಕೊಹ್ಲಿ ಅನುಮಾನ.?
ಯೆಸ್.. ಅಂದು ತಂದೆಯ ಸಾವಿನ ನಡೆವೆಯೂ ಪಂದ್ಯವನ್ನಾಡಿದ್ದ ಕೊಹ್ಲಿ, ಇದೀಗ ಲಾಂಗ್ ಬ್ರೇಕ್ ಪಡೆದಿದ್ದಾರೆ. ಇದನ್ನ ನೋಡಿದ ಮೇಲೆ ಕೊಹ್ಲಿ ಯಾವುದೋ ಗಂಭೀರ ಸಮಸ್ಯೆಯಲ್ಲಿದ್ದಾರೆ ಅನ್ನೋದು ಎಲ್ಲರ ಊಹೆಯಾಗಿದೆ. ಇದರ ಬೆನ್ನಲ್ಲೇ ಮತ್ತೊಂದು ಸುದ್ದಿ ಹೊರಬಿದ್ದಿದ್ದು, ಕೊಹ್ಲಿ ಮುಂಬರೋ ಐಪಿಎಲ್ ಟೂರ್ನಿಯಿಂದಲೂ ಹೊರಗುಳಿಯೋ ನಿರ್ಧಾರ ಮಾಡೋ ಸಾಧ್ಯತೆಯಿದೆ. ಒಂದು ವೇಳೆ ಐಪಿಎಲ್ ಆಡಿದ್ರೂ, ಆರಂಭಿಕ ಕೆಲ ಪಂದ್ಯಗಳನ್ನ ಆಡೋದು ಅನುಮಾನ ಎನ್ನಲಾಗ್ತಿದೆ.
ಮಗುವಾದ ಬಳಿಕ ‘ಫ್ಯಾಮಿಲಿ ಫಸ್ಟ್’ ಎಂದ ವಿರಾಟ್ ಕೊಹ್ಲಿ.!
ವಿರಾಟ್ ಕೊಹ್ಲಿ ಕರಿಯರ್ನಲ್ಲಿ ಪಂದ್ಯಗಳನ್ನ ತಪ್ಪಿಸಿಕೊಂಡಿದ್ದು ತೀರಾ ಕಮ್ಮಿ. ತಮ್ಮ ವಿವಾಹದ ಸಂದರ್ಭದಲ್ಲಿ ಶ್ರೀಲಂಕಾ ಎದುರಿನ ವೈಟ್ಬಾಲ್ ಸರಣಿಗಳಿಂದ ಹೊರಗುಳಿದ್ರೂ ಕೂಡ, ನಾನು ಮುಂಬರೋ ಸೌತ್ ಆಫ್ರಿಕಾ ಪ್ರವಾಸಕ್ಕೆ ಈ ಬ್ರೇಕ್ನಲ್ಲಿ ಅಭ್ಯಾಸ ನಡೆಸ್ತೇನೆ ಎಂದಿದ್ರು. ಇಂತಾ ಕೊಹ್ಲಿ ಮಗುವಾದ ಬಳಿಕ ಬದಲಾದ್ರು. ಮಗಳು ವಮಿಕಾ ಹುಟ್ಟಿನ ಸಂದರ್ಭದಲ್ಲಿ ಆಸ್ಟ್ರೇಲಿಯಾ ಪ್ರವಾಸದಿಂದ ಅರ್ಧಕ್ಕೆ ವಾಪಾಸ್ಸಾಗಿದ್ರು. ಆ ಬಳಿಕ ಆಗಾಗ ಬ್ರೇಕ್ ತೆಗೆದುಕೊಂಡಿದ್ರು. ಇದೀಗ 2ನೇ ಮಗುವಿನ ಸುದ್ದಿ ಸದ್ದು ಮಾಡ್ತಿದೆ. ಕಾಕತಾಳೀಯ ಎಂಬಂತೆ 2023ರ ವಿಶ್ವಕಪ್ ಬಳಿಕ ಹಲ ಪಂದ್ಯಗಳಿಂದ ದೂರ ಉಳಿದಿದ್ದಾರೆ.
ಅಫ್ಘಾನಿಸ್ತಾನ ಎದುರಿನ ಮೊದಲ T20 ಪಂದ್ಯ
2023ರ ಏಕದಿನ ವಿಶ್ವಕಪ್ ಟೂರ್ನಿಯ ಬಳಿಕ ಆಸ್ಟ್ರೇಲಿಯಾ ಎದುರಿನ ಟಿ20 ಸರಣಿಯ 5 ಪಂದ್ಯಗಳಿಂದ ಹೊರಗುಳಿದ ಕೊಹ್ಲಿ, ಸೌತ್ ಆಫ್ರಿಕಾ ಪ್ರವಾಸದ 3 ಟಿ20 ಹಾಗೂ 3 ಏಕದಿನ ಪಂದ್ಯಗಳ ಸರಣಿಯಿಂದಲೂ ವಿಶ್ರಾಂತಿ ಪಡೆದಿದ್ರು. ಆ ನಂತರದ ಅಪ್ಘಾನಿಸ್ತಾನ ಎದುರಿನ ಮೊದಲ ಟಿ20 ಪಂದ್ಯಕ್ಕೆ ಅಲಭ್ಯರಾಗಿದ್ದ ಕೊಹ್ಲಿ, ಇದೀಗ ಇಂಗ್ಲೆಂಡ್ ಎದುರಿನ 5 ಪಂದ್ಯಗಳ ಟೆಸ್ಟ್ ಸರಣಿಯಿಂದಲೂ ಹೊರಗುಳಿದಿದ್ದಾರೆ.
3 ತಿಂಗಳು, 6 ಸರಣಿ , ಕೊಹ್ಲಿ ಆಡಿದ್ದು ಕೇವಲ 4 ಪಂದ್ಯ.!
ಕಳೆದ 3 ತಿಂಗಳಲ್ಲಿ ಟೀಮ್ ಇಂಡಿಯಾ ಒಟ್ಟು 18 ಪಂದ್ಯಗಳನ್ನಾಡಿದ್ದು, ಒಟ್ಟು 6 ಸರಣಿಗಳನ್ನ ಆಡಿದೆ. ಈ ಪೈಕಿ ಕೊಹ್ಲಿ ಆಡಿರೋದು 4 ಪಂದ್ಯಗಳನ್ನ ಮಾತ್ರ. ಇದೀಗ ಐಪಿಎಲ್ಗೂ ಕೊಹ್ಲಿ ಅಲಭ್ಯ ಅನ್ನೋ ಸುದ್ದಿ ಹೊರಬಿದ್ದಿದೆ. ಇದೆಲ್ಲವನ್ನ ನೋಡಿದ್ರೆ ಕೊಹ್ಲಿ ಯಾವುದೋ ಗಂಭೀರ ಸಮಸ್ಯೆಯಲ್ಲಿದ್ದಾರೆ ಅನ್ನೋದಂತೂ ಸ್ಪಷ್ಟವಾಗ್ತಿದೆ. ಆ ಸಮಸ್ಯೆಯಿಂದ ಸುಧಾರಿಸಿಕೊಂಡು ಕೊಹ್ಲಿ ಆದಷ್ಟು ಬೇಗ ಹೊರಬರಲಿ ಅನ್ನೋದು ಅಭಿಮಾನಿಗಳ ಪ್ರಾರ್ಥನೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ