ಲೋಕಸಭಾ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್ಗೆ ಬಿಗ್ ಶಾಕ್!
ಮಧ್ಯಪ್ರದೇಶ ಮಾಜಿ ಸಿಎಂ ಕಮಲ್ ನಾಥ್ ಕಾಂಗ್ರೆಸ್ಗೆ ಗುಡ್ ಬೈ?
ಬಿಜೆಪಿ ಸೇರೋ ಬಗ್ಗೆ ಏನಂದ್ರು ಮಾಜಿ ಸಿಎಂ ಕಮಲ್ ನಾಥ್..?
ದೆಹಲಿ: ಇನ್ನೂ ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ಕುರಿತು ಮಧ್ಯಪ್ರದೇಶ ಮಾಜಿ ಸಿಎಂ ಕಮಲ್ ನಾಥ್ ಮಾತಾಡಿದ್ದಾರೆ. ಮಾಧ್ಯಮಗಳೇ ನಾನು ಬಿಜೆಪಿ ಸೇರ್ತೀನಿ ಎಂದು ತೋರಿಸುತ್ತಿವೆ. ನನಗಿಂತಲೂ ನಿಮಗೆ ಹೆಚ್ಚು ಎಕ್ಸೈಟ್ಮೆಂಟ್ ಇದೆ. ಒಂದು ವೇಳೆ ಆ ರೀತಿ ಬೆಳವಣಿಗೆಗಳು ಆದರೆ ನಿಮಗೆ ಹೇಳುತ್ತೇನೆ ಎಂದರು ಕಮಲ್ ನಾಥ್.
ಇನ್ನು, ಕಮಲ್ ನಾಥ್ ಈ ರೀತಿ ಹೇಳಿಕೆ ನೀಡುವ ಮೂಲಕ ಬಿಜೆಪಿ ಸೇರಲಿದ್ದಾರೆ ಅನ್ನೋ ಚರ್ಚೆಗೆ ತೆರೆ ಎಳೆದರು. ಆದ್ರೂ, ನಾನು ಕಾಂಗ್ರೆಸ್ ತೊರೆಯುತ್ತಿಲ್ಲ ಎಂದು ಕಮಲ್ ನಾಥ್ ನೇರವಾಗಿ ಹೇಳದ ಕಾರಣ ಈ ಬಗ್ಗೆ ಇನ್ನೂ ಹಲವು ಪ್ರಶ್ನೆಗಳಿವೆ.
ಗಾಂಧಿ ಕುಟುಂಬದ ನಿಷ್ಠ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಕಾಂಗ್ರೆಸ್ ತೊರೆಯಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಬಿಜೆಪಿ ಸೇರಲಿದ್ದಾರೆ ಕಮಲ್ ನಾಥ್ ಎಂದು ವರದಿಯಾಗಿತ್ತು.
ಇನ್ನು, ಬಿಜೆಪಿ ಸೇರಬಹುದು ಎಂಬ ಊಹಾಪೋಹಗಳ ಮಧ್ಯೆಯೇ ಕಮಲ್ ನಾಥ್ ದೆಹಲಿಗೆ ಬಂದಿದ್ದಾರೆ. ಕಮಲ್ ನಾಥ್ ಈ ನಡೆ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಮತ್ತು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಸಮ್ಮುಖದಲ್ಲೇ ಬಿಜೆಪಿ ಸೇರೋ ಸಾಧ್ಯತೆ ಇದೆ ಎನ್ನಲಾಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ