ಫೆ. 25ನೇ ತಾರೀಕಿನಿಂದ ಟೀಮ್ ಇಂಡಿಯಾ, ಇಂಗ್ಲೆಂಡ್ ಮಧ್ಯೆ 4ನೇ ಟೆಸ್ಟ್
4ನೇ ಟೆಸ್ಟ್ಗೆ ಮುನ್ನವೇ ಟೀಮ್ ಇಂಡಿಯಾಗೆ ಕೈ ಕೊಟ್ಟ ಸ್ಟಾರ್ ಪ್ಲೇಯರ್!
ಬುಮ್ರಾ ಬೆನ್ನಲ್ಲೇ ಟೀಮ್ ಇಂಡಿಯಾದಿಂದ ಹೊರಬಿದ್ದ ಕನ್ನಡಿಗ ರಾಹುಲ್
ಇದೇ ಫೆಬ್ರವರಿ 23ನೇ ತಾರೀಕಿನಿಂದ ಟೀಮ್ ಇಂಡಿಯಾ, ಇಂಗ್ಲೆಂಡ್ ತಂಡದ ನಡುವೆ 4ನೇ ಟೆಸ್ಟ್ ನಡೆಯಲಿದೆ. ರಾಂಚಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯಲಿರೋ ಈ ಟೆಸ್ಟ್ನಿಂದ ಸ್ಟಾರ್ ವೇಗಿ ಬುಮ್ರಾ ಹೊರಬಿದ್ದಿದ್ದರು. ಈ ಬೆನ್ನಲ್ಲೇ ಟೀಮ್ ಇಂಡಿಯಾಗೆ ಮತ್ತೋರ್ವ ಸ್ಟಾರ್ ಬ್ಯಾಟರ್ ಕೈಕೊಟ್ಟಿದ್ದಾರೆ.
ಹೌದು, 4ನೇ ಟೆಸ್ಟ್ ಪಂದ್ಯಕ್ಕೆ ಬ್ಯಾಟರ್ ಕೆ.ಎಲ್ ರಾಹುಲ್ ಟೀಂ ಇಂಡಿಯಾಗೆ ಕಮ್ಬ್ಯಾಕ್ ಮಾಡುವುದು ಡೌಟ್ ಎನ್ನಲಾಗಿದೆ. ಗಾಯದ ಸಮಸ್ಯೆಯಿಂದಾಗಿ ಕಳೆದ 3 ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದ ರಾಹುಲ್, ಸಂಪೂರ್ಣ ಗುಣಮುಖರಾಗಿಲ್ಲ. ಹೀಗಾಗಿ 4ನೇ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಇವರು ಕಣಕ್ಕಿಳಿಯಲ್ಲ ಎಂದು ವರದಿಯಾಗಿದೆ.
ರಾಹುಲ್ಗೆ ಏನಾಗಿತ್ತು..?
ಕೊಹ್ಲಿ ಅನುಪಸ್ಥಿಯಿಂದ ಟೀಂ ಇಂಡಿಯಾಕ್ಕೆ ಅಗ್ರ ಕ್ರಮಾಂಕದ ಬ್ಯಾಟಿಂಗ್ ಬಲದ ಅಗತ್ಯವಿತ್ತು. ಹಾಗಾಗಿ ಕೊಹ್ಲಿ ಬದಲಿಗೆ ರಾಹುಲ್ ಅವರನ್ನು ಕಣಕ್ಕಿಳಿಸಲಾಗಿತ್ತು. ಆದ್ರೆ ಹೈದರಾಬಾದ್ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ರಾಹುಲ್ ಬಲತೊಡೆಯ ಸ್ನಾಯು ಸೆಳೆತಕ್ಕೆ ಒಳಗಾದರು. ಕಳೆದ ಪಂದ್ಯದಲ್ಲಿ ರಾಹುಲ್ ಬದಲಿಗೆ ದೇವದತ್ ಪಡಿಕಲ್ಗೆ ಅವಕಾಶ ನೀಡಲಾಗಿತ್ತಾದ್ರೂ ಆಡುವ ಅವಕಾಶ ಸಿಕ್ಕಿರಲಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ