newsfirstkannada.com

×

VIDEO: 10 ವರ್ಷ ಸಾಕಿ ಬೆಳೆಸಿದ ಮೃಗಾಲಯ ಸಿಬ್ಬಂದಿಯನ್ನೇ ಬಲಿ ಪಡೆದ ಸಿಂಹ; ಕಾರಣವೇನು?

Share :

Published February 22, 2024 at 5:40pm

Update February 22, 2024 at 5:35pm

    ನೋಡ ನೋಡುತ್ತಿದ್ದಂತೆ ಸಿಬ್ಬಂದಿ ಮೇಲೆ ಹಾರಿ ಬಲಿ ಪಡೆದುಕೊಂಡ ಸಿಂಹ

    ಮೃಗಾಲಯದ ಮೇಲ್ವಿಚಾರಕರಾಗಿದ್ದ ಸಿಬ್ಬಂದಿ ಒಲಾಬೊಡೆ ಒಲೈಯು

    ಸಿಂಹಕ್ಕೆ ಹೊಟ್ಟೆ ಹಸಿದಿದೆ ಅಂತಾ ಆಹಾರ ನೀಡುತ್ತಿದ್ದಾಗ ನಡೆದ ಘಟನೆ

ನೈಜೀರಿಯಾ: ಪಶ್ಚಿಮ ಆಫ್ರಿಕಾ ರಾಷ್ಟ್ರವಾದ ನೈಜೀರಿಯಾದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದು ಹೋಗಿದೆ. ಒಬಾಫೆಮಿ ಅವೊಲೊವೊ ವಿಶ್ವವಿದ್ಯಾಲಯ ನಡೆಸುವ ಮೃಗಾಲಯದಲ್ಲಿ ಸಿಂಹವೊಂದು ಸಿಬ್ಬಂದಿಯನ್ನು ಬಲಿ ಪಡೆದಿದೆ. ಒಲಾಬೊಡೆ ಒಲೈಯು ಎಂಬುವವರು ಮೃತಪಟ್ಟಿದ್ದಾರೆ.

ಇದನ್ನು ಓದಿ: ಕ್ರಿಕೆಟ್ ಆಡುತ್ತಿದ್ದಾಗ ದಿಢೀರ್ ಹೃದಯಾಘಾತ.. ಕರ್ನಾಟಕ ಪ್ಲೇಯರ್ ಕೆ. ಹೊಯ್ಸಳ ಸಾವು

ಮೃತ ಸಿಬ್ಬಂದಿ ಮೃಗಾಲಯದ ಮೇಲ್ವಿಚಾರಕರಾಗಿದ್ದರಂತೆ. ಮೃತ ಒಲಾಬೊಡೆ ಒಲೈಯು ಸುಮಾರು 10 ವರ್ಷಗಳ ಕಾಲ ಸಿಂಹವನ್ನು ಸಾಕುತ್ತಿದ್ದರಂತೆ. ಸಿಂಹ ಮರಿ ಇರುವಾಗಲೇ ಮೃಗಾಲಯದಲ್ಲಿ ಅದರ ಆರೈಕೆ ಮಾಡಿದ್ದರು. ಆದರೆ ಕಳೆದ ಫೆಬ್ರವರಿ 19ರಂದು ಒಲಾಬೊಡೆ ಒಲೈಯು ಅವರು ಸಿಂಹಕ್ಕೆ ಹೊಟ್ಟೆ ಹಸಿದಿರಬಹುದು ಎಂದು ಭಾವಿಸಿ ಅದರ ಸಮೀಪಕ್ಕೆ ಹೋಗಿ ಮೈ ದಡವಿ ಆಹಾರ ನೀಡಲು ಹೋಗಿದ್ದಾಗ ಏಕಾಏಕಿ ಸಿಂಹ ಸಿಬ್ಬಂದಿ ಮೇಲೆ ಹಾರಿ ಅವರನ್ನು ಬಲಿ ಪಡೆದುಕೊಂಡಿದೆ.

ಆ ಸಿಂಹ ಮರಿಯಾಗಿದ್ದ ಕಾಲದಿಂದ ಸಾಕಿ ಬೆಳೆಸಿದ್ದ ಒಲೈಯು, ಅದರ ಜೊತೆ ಆತ್ಮೀಯತೆ ಬೆಳಸಿಕೊಂಡಿದ್ದರು. ಸಿಂಹ ತನಗೇನೂ ಮಾಡೋದಿಲ್ಲ ಅನ್ನೋ ವಿಶ್ವಾಸದಿಂದ ಅವರ ಬಳಿ ಹೋಗಿದ್ದಾಗ ಈ ದುರ್ಘಟನೆ ನಡೆದಿದೆ. ಇನ್ನೂ ಕೂಡಲೇ ಅಲ್ಲೇ ನಿಂತುಕೊಂಡಿದ್ದ ಉಳಿದ ಸಿಬ್ಬಂದಿಗಳು ಒಲೈಯು ಅವರ ರಕ್ಷಣೆಗೆ ಧಾವಿಸಿದ್ದರು. ಆದರೆ ಒಲೈಯು ರಕ್ತದ ಮಡುವಲ್ಲಿ ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸುವ ಹೊತ್ತಲ್ಲಿ ಒಲೈಯು ಮೃತಪಟ್ಟಿದ್ದರು ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: 10 ವರ್ಷ ಸಾಕಿ ಬೆಳೆಸಿದ ಮೃಗಾಲಯ ಸಿಬ್ಬಂದಿಯನ್ನೇ ಬಲಿ ಪಡೆದ ಸಿಂಹ; ಕಾರಣವೇನು?

https://newsfirstlive.com/wp-content/uploads/2024/02/death-2024-02-22T165714.074.jpg

Load More