newsfirstkannada.com

×

ಪರೀಕ್ಷೆಯಲ್ಲಿ ತಂಗಿಗೆ ಕಾಪಿ ಚೀಟಿ ಕೊಡಲು ನಕಲಿ ಪೊಲೀಸ್ ಆದ ಅಣ್ಣ; ಸೆಲ್ಯೂಟ್ ಮಾಡುವ ವೇಳೆ ಸಿಕ್ಕಿಬಿದ್ದ..!

Share :

Published February 23, 2024 at 7:11am

Update February 23, 2024 at 7:21am

    ತಂಗಿಗಾಗಿ ಫೇಕ್ ಪೊಲೀಸ್​ ಆದ ದೇವರುಕೊಟ್ಟ ಅಣ್ಣ

    ಪೊಲೀಸರ ಕೈಗೆ ತಗಲಾಕಿಕೊಂಡು ಯುವಕನ ಪರದಾಟ

    ಪೊಲೀಸ್ ಅಧಿಕಾರಿ ಸಮವಸ್ತ್ರ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಎಂಟ್ರಿ

ಅಣ್ಣಾ ತಂಗಿಗೋಸ್ಕರ ಏನ್ ಬೇಕಾದರೂ ಮಾಡೋಕೆ ರೆಡಿ ಇರ್ತಾರೆ ಅನ್ನೋದಕ್ಕೆ ಈ ಸ್ಟೋರಿಯೇ ಸಾಕ್ಷಿ. ಮಹಾರಾಷ್ಟ್ರದಲ್ಲಿ ಅಣ್ಣನೊಬ್ಬ ತಂಗಿಗಾಗಿ ಮಾಡಿದ ಮಾರುವೇಷದ ಕತೆ ಕೇಳಿದ್ರೆ ನಿಮಗೆ ನಗಬೇಕೋ ಅಥವಾ ಅಳಬೇಕೋ ಅನ್ನೋದೆ ಗೊತ್ತಾಗಲ್ಲ.
ತಂಗಿಗಾಗಿ ಫೇಕ್ ಪೊಲೀಸ್​ ಆದ ದೇವರುಕೊಟ್ಟ ಅಣ್ಣ!

12ನೇ ತರಗತಿ ಪರೀಕ್ಷೆ ಬರೆಯುತ್ತಿದ್ದ ತಂಗಿಯನ್ನು ಹೇಗಾದರೂ ಮಾಡಿ ಪಾಸ್ ಮಾಡಿಸಬೇಕು ಎಂದು ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಯುವಕನೊಬ್ಬ ಹುಚ್ಚು ಸಾಹಸಕ್ಕೆ ಕೈ ಹಾಕಿದ್ದಾನೆ. ಆದ್ರೆ ಸಾಹಸದಲ್ಲಿ ಸಕ್ಸಸ್ ಆಗಿ ಅಣ್ಣಾ ತಂಗಿಗೆ ಕೊಟ್ಟ ಮಾತನ್ನ ಉಳಿಸಿಕೊಳ್ಳೋ ಹೊತ್ತಲ್ಲೇ ಅದೊಂದು ಪ್ರಮಾದ ಮಾಸ್ಟರ್​ ಪೀಸ್​ ಅಣ್ಣನ ಸಾಹಸಗಾಥೆಯನ್ನ ಬಿಚ್ಚಿಟ್ಟು ಎಲ್ರೂ ಬಿದ್ದು ಬಿದ್ದು ನಗುವಂತೆ ಮಾಡಿದೆ.

ದೇವರು ಕೊಟ್ಟ ಅಣ್ಣಾ!
ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಪತೂರ್ ಪಟ್ಟಣದ ಶಹಬಾಬು ಉರ್ದು ಹೈಸ್ಕೂಲಿನಲ್ಲಿ 12ನೇ ತರಗತಿಯ ಮೊದಲ ಪರೀಕ್ಷೆ ನಡೆಯುತ್ತಿತ್ತು.. ಈ ವೇಳೆ ಪಾಂಗ್ರಾ ಬಂಡಿ ನಿವಾಸಿಯಾಗಿರುವ 24 ವರ್ಷದ ಅನುಪಮ್ ಖಾಂಡರೆ ಎಂಬ ಯುವಕ ತನ್ನ ಸಹೋದರಿ ಪರೀಕ್ಷೆಯಲ್ಲಿ ಕಾಪಿ ಹೊಡೆಯಲು ಅನುಕೂಲವಾಗುವಂತೆ ಕಾಪಿ ಚೀಟಿಗಳನ್ನ ಹಿಡಿದು ಪರೀಕ್ಷಾ ಕೇಂದ್ರಕ್ಕೆ ಎಂಟ್ರಿಕೊಟ್ಟಿದ್ದ. ಅಂದುಕೊಂಡತೆ 12ನೇ ತರಗತಿ ಪರೀಕ್ಷೆ ಬರೆಯುತ್ತಿದ್ದ ತಂಗಿಗೆ ಕಾಪಿ ಚೀಟಿ ನೀಡೋದ್ರಲ್ಲಿ ಸಕ್ಸಸ್ ಆಗಿದ್ದ. ಅಷ್ಟಕ್ಕೂ ಆತ ಪರೀಕ್ಷೆ ಕೇಂದ್ರಕ್ಕೆ ಎಂಟ್ರಿಕೊಟ್ಟಿದ್ದು ಪೊಲೀಸ್ ಅಧಿಕಾರಿ ಸಮವಸ್ತ್ರ ಧರಿಸಿ.. ಪೊಲೀಸನಂತೆ ಫೋಸ್​ ಕೊಟ್ಟ ಅನುಪಮ್ ಪರೀಕ್ಷೆ ಮುಗಿಯೋವರೆಗೂ ಪೊಲೀಸ್​ ಎಂಬಾತೆಯೇ ನಡೆದುಕೊಂಡಿದ್ದ.

ಸೆಲ್ಯೂಟ್​ ಮಾಡುವಾಗ ಎಡವಿದ ಅನುಪಮ್ ಖಾಂಡರೆ
ಅನುಪಮ್ ಖಾಂಡರೆ ಬಹಳ ಸಮಯದಿಂದ ಪರೀಕ್ಷಾ ಕೇಂದ್ರ ಪೊಲೀಸ್​ ಸಮವಸ್ತ್ರ ಧರಿಸಿ ಓಡಾಟ ನಡೆಸಿದ್ರು ಶಾಲಾ ಸಿಬ್ಬಂದಿ ಆತನನ್ನ ಪ್ರಶ್ನಿಸಿರಲಿಲ್ಲ.

ಪತೂರ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಕಿಶೋರ್ ಶೆಲ್ಕೆ ಭದ್ರತೆ ಪರೀಕ್ಷಿಸಲು ಪರೀಕ್ಷಾ ಕೇಂದ್ರಕ್ಕೆ ಬಂದಾಗ ಅನುಪಮ್ ಮಾಡಿದ ಸೆಲ್ಯೂಟ್ ಅನುಮಾನ ಹುಟ್ಟಿಸಿತ್ತು. ಅನುಪಮ್ ಹೊಡೆದ ಸೆಲ್ಯೂಟ್ ಶಿಷ್ಟಾಚಾರಕ್ಕೆ ಅನುಗುಣವಾಗಿರಲಿಲ್ಲ, ಅಲ್ಲದೇ ಸಮವಸ್ತ್ರದಲ್ಲಿನ ಆತನ ಹೆಸರು ಸಹ ತಪ್ಪಾಗಿತ್ತು. ಇದರಿಂದ ಪೊಲೀಸರ ಕೈಗೆ ಅನುಪಮ್ ಲಾಕ್ ಆಗಿದ್ದಾನೆ. ತೀವ್ರ ವಿಚಾರಣೆಗೆ ಒಳಪಡಿಸಿದಾಗ ಅನುಪಮ್​ನ ಕಳ್ಳಾಟ ಬೆಳಕಿಗೆ ಬಂದಿದೆ. ಆತನ ಜೇಬಿನಲ್ಲಿ ಇಂಗ್ಲಿಷ್ ಪರೀಕ್ಷೆ ಪತ್ರಿಕೆಯ ಪ್ರತಿಯೊಂದು ಸಿಕ್ಕಿದೆ.

ಒಟ್ನಲ್ಲಿ ತಂಗಿಯನ್ನ ಪರೀಕ್ಷೆಯಲ್ಲಿ ಪಾಸ್​ ಮಾಡಿಸಲು ಹೋದ ಅಣ್ಣಾ ಕಂಬಿ ಹಿಂದೆ ಸೇರಿದ್ದಾನೆ. ಅಣ್ಣನ ಕಾಪಿ ಚೀಟಿ ಕಥೆಯನ್ನ ಕೇಳಿ ಒಮ್ಮೆ ಪೊಲೀಸರೇ ಶಾಕ್ ಆಗಿದ್ದಾರೆ.. ಈ ದೇವರು ಕೊಟ್ಟ ಅಣ್ಣ, ತಂಗಿಗಾಗಿ ಮಾಡಿದ ತ್ಯಾಗದ ಕತೆ ಕೇಳಿ ಕೆಲವರು ನಕ್ಕರೆ ಇನ್ನೂ ಕೆಲವರು ನಿನಗಿದು ಬೇಕಿತ್ತ ಮಗನೇ ಅಂತ ವ್ಯಂಗ್ಯವಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪರೀಕ್ಷೆಯಲ್ಲಿ ತಂಗಿಗೆ ಕಾಪಿ ಚೀಟಿ ಕೊಡಲು ನಕಲಿ ಪೊಲೀಸ್ ಆದ ಅಣ್ಣ; ಸೆಲ್ಯೂಟ್ ಮಾಡುವ ವೇಳೆ ಸಿಕ್ಕಿಬಿದ್ದ..!

https://newsfirstlive.com/wp-content/uploads/2024/02/FAKE-POLICE-1.jpg

Load More