ಆಕಾಶ್ ದೀಪ್ ಮುಂದೆ ಬೆನ್ ಡಕೆಟ್, ಪೋಪ್ ಸೈಲೆಂಟ್ ಆದ್ರು
ಇಂಗ್ಲೆಂಡ್ ತಂಡಕ್ಕೆ ಆಸರೆಯಾದ ಜೋ ರೂಟ್ ಆಕರ್ಷಕ ಶತಕ
ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾರಿಂದ ಬ್ರಿಟಿಷರಿಗೆ ಶಾಕ್
ರಾಂಚಿ ಟೆಸ್ಟ್ನ ಮೊದಲ ದಿನದಾಟದಲ್ಲಿ ಇಂಡೋ -ಇಂಗ್ಲೆಂಡ್ ತಂಡಗಳು ನಾನಾ- ನೀನಾ ಎಂಬಂತೆ ಸಾಲಿಡ್ ಫೈಟ್ ನಡೆಸಿದ್ವು. ಆರಂಭದಲ್ಲಿ ಇಂಡಿಯನ್ ಟೈಗರ್ಸ್ ಘರ್ಜಿಸಿದ್ರೆ, ಆ ಬಳಿಕ ಇಂಗ್ಲೆಂಡ್ ಲಯನ್ಸ್ ಸಾಲಿಡ್ ಕಮ್ಬ್ಯಾಕ್ ಮಾಡಿದರು. ಹೇಗಿತ್ತು ಇಂಡೋ -ಇಂಗ್ಲೆಂಡ್ ನಡುವಿನ ಮೊದಲ ದಿನದಾಟದ ಕದನ?.
ಇಂಡೋ -ಇಂಗ್ಲೆಂಡ್ 4ನೇ ಟೆಸ್ಟ್ನ ಮೊದಲ ದಿನದಾಟ ಅಭಿಮಾನಿಗಳಿಗೆ ಸಖತ್ ಟ್ರೀಟ್ ನೀಡ್ತು. ಡೆಬ್ಯೂಟಂಟ್ ಆಕಾಶ್ ದೀಪ್ ಆರಂಭದಲ್ಲೇ ಆಂಗ್ಲರ ಆಟಕ್ಕೆ ಬ್ರೇಕ್ ಹಾಕಿದ್ರು. ಆದ್ರೆ, ಆ ಬಳಿಕ ಅನುಭವಿ ಜೋ ರೂಟ್, ಭಾರತೀಯ ಬೌಲರ್ಗಳ ತಾಳ್ಮೆಯನ್ನೇ ಪರೀಕ್ಷಿಸಿಬಿಟ್ಟರು.
ಡೆಬ್ಯೂ ಪಂದ್ಯದಲ್ಲೇ ಆಂಗ್ಲರ ಚಳಿ ಬಿಡಿಸಿದ ಆಕಾಶ್.!
ಟಾಸ್ ಗೆದ್ದು ಆತ್ಮವಿಶ್ವಾಸದಲ್ಲಿ ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ಕ್ಯಾಪ್ಟನ್ ಬೆನ್ ಸ್ಟೋಕ್ಸ್ ಲೆಕ್ಕಾಚಾರ ಆರಂಭದಲ್ಲೇ ತಲೆ ಕೆಳಗಾಯ್ತು. ಡೆಬ್ಯೂಟಂಟ್ ಆಕಾಶ್ ದೀಪ್ ಆಂಗ್ಲರ ಆಟಕ್ಕೆ ಆರಂಭದಲ್ಲೇ ಬ್ರೇಕ್ ಹಾಕಿದರು. ಆಕಾಶ್ ದೀಪ್ ಆರ್ಭಟದ ಮುಂದೆ ಬೆನ್ ಡಕೆಟ್, ಒಲೀ ಪೋಪ್ ಫುಲ್ ಸೈಲೆಂಟಾದ್ರು. ಬಂದಷ್ಟೇ ವೇಗವಾಗಿ ಇವರಿಬ್ರು ಪೆವಿಲಿಯನ್ ಸೇರಿದ್ರೆ, 42 ರನ್ಗಳಿಗೆ ಜಾಕ್ ಕ್ರಾವ್ಲಿ ವಿಕೆಟ್ ಒಪ್ಪಿಸಿದರು.
5 ವಿಕೆಟ್ ಕಬಳಿಸಿ ಮಿಂಚಿದ ಇಂಡಿಯನ್ ಬೌಲರ್ಸ್
57 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಕಂಗೆಟ್ಟ ತಂಡಕ್ಕೆ ಅಶ್ವಿನ್, ರವೀಂದ್ರ ಜಡೇಜಾ ಶಾಕ್ ನೀಡಿದ್ರು. 38 ರನ್ಗಳಿಸಿ ಉತ್ತಮ ಸ್ಟಾರ್ಟ್ ಪಡೆದುಕೊಂಡ ಜಾನಿ ಬೇರ್ಸ್ಟೋ ಅಶ್ವಿನ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ರು. ಬಳಿಕ ಕಣಕ್ಕಿಳಿದ ಕ್ಯಾಪ್ಟನ್ ಬೆನ್ ಸ್ಟೋಕ್ಸ್ಗೆ, ರವೀಂದ್ರ ಜಡೇಜಾ ಪೆವಿಲಿಯನ್ ದಾರಿ ತೋರಿಸಿದ್ರು.
2ನೇ ಸೆಷನ್ನಲ್ಲಿ ಇಂಗ್ಲೆಂಡ್ ತಿರುಗೇಟು.!
ಮೊದಲ ಸೆಷನ್ನಲ್ಲಿ 112 ರನ್ಗಳಿಸಿ 5 ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ತಂಡ ಸೆಕೆಂಡ್ ಸೆಷನ್ನಲ್ಲಿ ಎಚ್ಚರಿಕೆಯ ಆಟವಾಡಿತು. ಅನುಭವಿ ಜೋ ರೂಟ್ ಹಾಗೂ ಬೆನ್ ಫೋಕ್ಸ್ ಸಾಲಿಡ್ ಪಾರ್ಟನರ್ಶಿಪ್ ಕಟ್ಟಿದ್ರು. ಇಂಡಿಯನ್ ಬೌಲರ್ಗಳ ತಾಳ್ಮೆ ಪರೀಕ್ಷೆ ಮಾಡಿದ ಈ ಜೋಡಿ 261 ಎಸೆತಗಳನ್ನ ಎದುರಿಸಿ 113 ರನ್ಗಳ ಜೊತೆಯಾಟವಾಡಿತು.
ಕ್ರಿಸ್ ಕಚ್ಚಿ ನಿಂತ ರೂಟ್.. ರಾಂಚಿಯಲ್ಲಿ ಶತಕದಾರ್ಭಟ.!
3ನೇ ಸೆಷನ್ನ ಆರಂಭದಲ್ಲೇ ಬೆನ್ ಫೋಕ್ಸ್ ಆಟಕ್ಕೆ ಮೊಹಮ್ಮದ್ ಸಿರಾಜ್ ಬ್ರೇಕ್ ಹಾಕಿದ್ರು. 47 ರನ್ಗಳಿಗೆ ಫೋಕ್ಸ್ ಆಟ ಅಂತ್ಯವಾದ್ರೆ, ಆ ಬಳಿಕ ಕಣಕ್ಕಿಳಿದ ಟಾಮ್ ಹಾರ್ಟ್ಲಿ ಆಟವೂ ಸಿರಾಜ್ ಮುಂದೆ ನಡೀಲಿಲ್ಲ. ಆದ್ರೆ, ಇನ್ನೊಂದು ತುದಿಯಲ್ಲಿ ಅದ್ಭುತ ಆಟವಾಡಿದ ಜೋ ರೂಟ್, ಶತಕ ಸಿಡಿಸಿ ಮಿಂಚಿದ್ರು.
ದಿನದ ಅಂತ್ಯಕ್ಕೆ ಇಂಗ್ಲೆಂಡ್ 7 ವಿಕೆಟ್ ನಷ್ಟಕ್ಕೆ 307
226 ಎಸೆತಗಳನ್ನ ಎದುರಿಸಿದ ಜೋ ರೂಟ್ 9 ಬೌಂಡರಿಗಳ ನೆರವಿನಿಂದ 106 ರನ್ ಗಳಿಸಿದ್ದಾರೆ. ರೂಟ್ ಸಖತ್ ಸಾಥ್ ಕೊಡ್ತಿರೋ ಒಲೀ ರಾಬಿನ್ಸನ್ 1 ಸಿಕ್ಸರ್ 4 ಬೌಂಡರಿ ಸಹಿತ 31 ರನ್ಗಳಿಸಿದ್ದಾರೆ. ದಿನದ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 302 ರನ್ಗಳಿಸಿದೆ. ಒಲಿ ರಾಬಿನ್ಸನ್ ಹಾಗೂ ಜೋ ರೂಟ್ ಇವತ್ತಿಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಮೊದಲ ದಿನದಾಟದ ಆರಂಭಿಕ ಸೆಷನ್ನಲ್ಲಿ ಆಘಾತ ಎದುರಿಸಿದ ಇಂಗ್ಲೆಂಡ್ ತಂಡ 2 ಮತ್ತು 3ನೇ ಸೆಷನ್ನಲ್ಲಿ ಅದ್ಭುತ ಆಟವಾಡಿದೆ. ಲಂಚ್ ಬ್ರೇಕ್ ಬಳಿಕ ಕೇವಲ 2 ವಿಕೆಟ್ಗಳನ್ನ ಕಳೆದುಕೊಂಡ ಆಂಗ್ಲ ಪಡೆ ಸಾಲಿಡ್ ಕಮ್ಬ್ಯಾಕ್ ಮಾಡಿದೆ. ಟೀಮ್ ಇಂಡಿಯಾ ಕೂಡ ವಿಕೆಟ್ ಕಬಳಿಸಲು ಕಸರತ್ತು ನಡೆಸ್ತಾ ಇದ್ದು, ಹೀಗಾಗಿ ಇಂದಿನ ದಿನದಾಟದ ಮೊದಲ ಸೆಷನ್ ಸಾಕಷ್ಟು ಕುತೂಹಲ ಮೂಡಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ