ಹಿಂದಿ ವ್ಯಕ್ತಿಯೊಬ್ಬರಿಗೆ ಕನ್ನಡ ಕ್ಲಾಸ್ ಮಾಡಿದ ಕ್ರಿಕೆಟರ್ ಕೆ.ಎಲ್.ರಾಹುಲ್
ಕೆ.ಎಲ್.ರಾಹುಲ್ ಕನ್ನಡ ಹೇಳಿಕೊಡುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆ
ಅಂದು ನಟ ಹೇಳಿದ್ದರು ಕನ್ನಡ ಅಂಥ, ಇಂದು ಕ್ರಿಕೆಟರ್ ಕಲಿಸಿದರು ಕನ್ನಡ
ಟೀಮ್ ಇಂಡಿಯಾದ ಸ್ಟಾರ್ ಪ್ಲೇಯರ್ ಕೆ.ಎಲ್.ರಾಹುಲ್ ಇತ್ತೀಚೆಗಷ್ಟೇ ತುಮಕೂರಿನಲ್ಲಿನ ಪ್ರಸಿದ್ಧ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಕನ್ನಡ ಮಾತನಾಡಿದ್ದರು. ಇದು ಎಲ್ಲ ಕನ್ನಡಿಗರ ಮನ ಗೆದ್ದಿತ್ತು. ಈ ಹಿಂದೆ ಕಿಚ್ಚ ಸುದೀಪ್ ಅವರು ಮಹಿಳಾ ಆ್ಯಂಕರ್ಗೆ ಕನ್ನಡ್ ಅಲ್ಲ, ಕನ್ನಡ ಎಂದು ಕಲಿಸಿದ್ದರು. ಇದೀಗ ಕೆ.ಎಲ್.ರಾಹುಲ್ ಕೂಡ ಇದೇ ರೀತಿ ಹಿಂದಿಯ ಯುವಕನೊಬ್ಬನಿಗೆ ಹೇಳಿಕೊಟ್ಟಿರುವುದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಇದನ್ನು ಓದಿ: VIDEO: ’ಅದು ಕನ್ನಡ್ ಅಲ್ಲ, ಕನ್ನಡ’- ಕನ್ನಡವನ್ನು ತಪ್ಪಾಗಿ ಬಳಸಿದವರಿಗೆ KL ರಾಹುಲ್ ಕನ್ನಡ ಪಾಠ
ವಿಡಿಯೋದ ಅಸಲಿ ಕಥೆ ಏನು..?
ಈ ವೇಳೆ ಕೆ.ಎಲ್ ರಾಹುಲ್ ಸ್ಕ್ರಿಪ್ಟ್ ಓದುವಾಗ ಡೈರೆಕ್ಷನ್ ಡಿಪಾರ್ಟ್ಮೆಂಟ್ ಯುವಕನೊಬ್ಬ ‘ಕನ್ನಡ್’ ಎಂದು ಹೇಳಿದ್ದಾರೆ. ತಕ್ಷಣ ಅವರ ಮುಖ ನೋಡಿದ ಕೆ.ಎಲ್ ರಾಹುಲ್ ಏನು ಹೇಳಿದೆ ಅಂತ ಕೇಳಿದ್ದಾರೆ. ಅದಕ್ಕೆ ಕನ್ನಡ್ ಎಂದು ಉತ್ತರಿಸಿದ್ದಾನೆ. ಎ ಭಾಯ್ ಅದು ಕನ್ನಡ್ ಅಲ್ಲ, ‘ಕನ್ನಡ’ ಎಂದು ಸರಿಯಾಗಿ ಹೇಳಿಕೊಟ್ಟಿದ್ದಾರೆ. ಅಲ್ಲದೇ ಯುವಕನಿಂದಲೂ ಕನ್ನಡ ಎಂದು ಹೇಳಿಸಿದ್ದಾರೆ. ಅಂದ್ಹಾಗೆ ಇದು ಐಪಿಎಲ್ನ ಫಿಲ್ಮ್ ಶೂಟ್ನ ಒಂದು ದೃಶ್ಯವಾಗಿದೆ. ಮಾರ್ಚ್ 22 ರಿಂದ ಐಪಿಎಲ್ ಶುರುವಾಗುತ್ತಿದ್ದು, ಅದರ ಪ್ರಮೋಷನ್ ವಿಡಿಯೋ ಇದಾಗಿದೆ ಎನ್ನಲಾಗಿದೆ.
https://twitter.com/i/status/1761088302097281273
ಈ ಹಿಂದೆ ವಿಕ್ರಾಂತ್ ರೋಣ ಸಿನಿಮಾ ಕುರಿತು ಕಿಚ್ಚ ಸುದೀಪ್ ಅವರು ಸಂದರ್ಶನ ನೀಡುವಾಗ ಮಹಿಳಾ ಆ್ಯಂಕರ್ರೊಬ್ರು ಕನ್ನಡ್ ಎಂದು ಹೇಳಿದ್ದರು. ಆಗ ಸುದೀಪ್ ಅವರು ಮೇಡಂ ಕನ್ನಡ್ ಅಲ್ಲ, ಕನ್ನಡ ಎಂದು ಹೇಳಿದ್ದರು. ಹೇಗೆ ಹಿಂದಿ, ಹಿಂದ್ ಆಗಲ್ವೋ ಹಾಗೇ ಕನ್ನಡ, ಕನ್ನಡ್ ಆಗಲ್ಲ ಎಂದು ಆನ್ ಕ್ಯಾಮೆರಾ ಸಂದರ್ಶನದಲ್ಲೇ ಕಿಚ್ಚ ನೇರವಾಗಿ ಹೇಳಿದ್ದರು. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಕ್ರಿಕೆಟರ್ ಕೆ.ಎಲ್ ರಾಹುಲ್ ಹಾಗೂ ಕಿಚ್ಚ ಸುದೀಪ್ ಅವರು ಕನ್ನಡ ಹೇಳಿಕೊಡುತ್ತಿರುವ ವಿಡಿಯೋ ಸಖತ್ ಸೆನ್ಷೇಷನ್ ಮೂಡಿಸುತ್ತಿದೆ.
KL Rahul at Star Sports IPL film shoot. pic.twitter.com/5H2Lum8Sv9
— Mufaddal Vohra (@mufaddal_vohra) February 23, 2024
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ