ಯುಪಿ ವಾರಿಯರ್ಸ್ನ ಕೈಕಟ್ಟಿಸಿದ ಆಶಾ
ಆರ್ಸಿಬಿ ಪರ 5 ವಿಕೆಟ್ ಕಿತ್ತ ಸೊಬಾನ ಆಶಾ
ತವರಿನಲ್ಲಿ 2 ರನ್ಗಳ ಜಯ ಸಾಧಿಸಿದ ಆರ್ಸಿಬಿ
ಬೆಂಗಳೂರು: ಇಂದು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಹಿಳೆಯರ ಪ್ರೀಮಿಯರ್ ಲೀಗ್ ಪಂದ್ಯಾಟದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯುಪಿ ವಾರಿಯರ್ಸ್ ತಂಡದ ವಿರುದ್ಧ 2 ರನ್ಗಳ ಜಯ ಸಾಧಿಸಿದೆ.
ಆರಂಭದಲ್ಲಿ ಟಾಸ್ ವಿನ್ ಆಗಿ ಫಿಲ್ಡಿಂಗ್ ಆಯ್ದುಕೊಂಡ ಯುಪಿ ವಾರಿಯರ್ಸ್ ತಂಡ ರಾಯಲ್ ಚಾಲೆಂಜರ್ಸ್ ತಂಡವನ್ನು ಕಟ್ಟಿಹಾಕಲು ಶ್ರಮಿಸಿತು. ಆದರೆ ಬೆಂಗಳೂರು ಮಹಿಳಾ ಮಣಿಗಳು 20 ಓವರ್ನಲ್ಲಿ 6 ವಿಕೆಟ್ ಕಳೆದುಕೊಂಡು 157 ರನ್ ಬಾರಿಸಿದ್ದರು.
ನಂತರ ಬ್ಯಾಟಿಂಗ್ ಇಳಿದ ಯುಪಿಗೆ ಜಯದ ಹಾದಿ ಸುಗಮವಿದ್ದರು ಅದೃಷ್ಟ ಲಕ್ಷ್ಮೀ ಮಾತ್ರ ಒಳಿಯಲಿಲ್ಲ. ಸುಲಭವಾಗಿ ಪಡೆಯಬೇಕಾದ ಜಯಕ್ಕೆ ಹೋರಾಡಿ ಕೊನೆಗೆ 2 ರನ್ಗಳನ್ನು ಪೇರಿಸಲಾಗದೆ ಕೊನೆಗೆ ಸೋಲೊಪ್ಪಿಕೊಂಡಿತು.
ಇನ್ನು ಇಂದಿನ ಪಂದ್ಯದಲ್ಲಿ ಆರ್ಸಿಬಿ ತಂಡದಲ್ಲಿ ರಿಚಾ ಘೋಷ್ 37 ಎಸೆತಕ್ಕೆ 12 ಬೌಂಡರಿ ಬಾರಿಸುವ ಮೂಲಕ 62 ರನ್ ಬಾರಿಸಿ ಗಮನಸೆಳೆದರು. ಮೇಘನಾ 44 ಎಸೆತದಲ್ಲಿ 7 ಬೌಂಡರಿ, ಒಂದು ಸಿಕ್ಸ್ ಸೇರಿ 53 ರನ್ ಬಾರಿಸಿದ್ದಾರೆ. ಅತ್ತ ಯುಪಿ ತಂಡದಲ್ಲಿ ಗ್ರೇಸ್ ಹ್ಯಾರಿಸ್ 38 ರನ್ ಬಾರಿಸಿದ್ದಾರೆ. ಶ್ವೇತಾ ಶೇರಾವತ್ 31 ರನ್ ಬಾರಿಸಿದ್ದಾರೆ. ಆರ್ಸಿಬಿ ತಂಡದ ಸೊಬಾನ ಆಶಾ ಯುಪಿ ವಾರಿಯರ್ಸ್ನ 5 ವಿಕೆಟ್ ಕಬಳಿಸುವ ಮೂಲಕ ತಂಡಕ್ಕೆ ನೆರವಾದರು.