ಐಪಿಎಲ್ನಲ್ಲಿ ಮಿಂಚಿದ್ದ ಆರ್ಸಿಬಿ ಸ್ಟಾರ್ ಬ್ಯಾಟರ್ ರಜತ್ ಪಾಟಿದಾರ್
ಟೀಮ್ ಇಂಡಿಯಾಗೆ ಡೆಬ್ಯೂಟ್ ಮಾಡಿದ್ರೂ ಸರಿಯಾಗಿ ಆಡದ ರಜತ್
ಮೂರು ಟೆಸ್ಟ್ 6 ಇನ್ನಿಂಗ್ಸ್ನಲ್ಲಿ ರಜತ್ ಗಳಿಸಿದ್ದು 61 ಕೇವಲ ರನ್ ಮಾತ್ರ
ಅದು 2022ರ ಇಂಡಿಯನ್ ಪ್ರೀಮಿಯರ್ ಲೀಗ್ ಎಲಿಮಿನೇಟರ್ ಪಂದ್ಯ. ಅಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಅಬ್ಬರಿಸಿದ ಆರ್ಸಿಬಿ ಬ್ಯಾಟ್ಸ್ಮನ್ ರಜತ್ ಪಾಟಿದಾರ್ ಆಕರ್ಷಕ ಶತಕ ಸಿಡಿಸಿ ದಾಖಲೆ ಬರೆದಿದ್ದರು.
ಲಕ್ನೋ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿತ್ತು. ಈ ಮೂಲಕ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಸಂಕಷ್ಟದಲ್ಲಿದ್ದ ತಂಡಕ್ಕೆ ರಜತ್ ಪಾಟಿದಾರ್ ಆಸರೆಯಾದರು. ಐಪಿಎಲ್ ಪ್ಲೇ ಆಫ್ ಪಂದ್ಯಗಳಲ್ಲಿ ಗರಿಷ್ಠ ರನ್ ಸಿಡಿಸಿದ ಅನ್ಕ್ಯಾಪ್ ಪ್ಲೇಯರ್ ಅನ್ನೋ ಹೆಗ್ಗಳಿಕೆಗೆ ರಜತ್ ಪಾಟಿದಾರ್ ಪಾತ್ರರಾಗಿದ್ದಾರೆ. ಅಂದಿನಿಂದ ಕ್ರೀಡಾ ಲೋಕದಲ್ಲಿ ಭಾರೀ ಸದ್ದು ಮಾಡಿದ್ದ ರಜತ್ ಪಾಟಿದಾರ್ಗೆ ಟೀಮ್ ಇಂಡಿಯಾ ಪರ ಆಡಲು ಅವಕಾಶ ಸಿಕ್ಕಿತ್ತು.
ಅದ್ಯಾಕೋ ರಜತ್ ಪಾಟಿದಾರ್ ತನ್ನ ಮೇಲೆ ಟೀಮ್ ಇಂಡಿಯಾ ಇಟ್ಟಿದ್ದ ಭರವಸೆಯನ್ನು ಮಣ್ಣುಪಾಲು ಮಾಡಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಲೇ ಇವೆ. ಏಕದಿನ ಕ್ರಿಕೆಟ್ನಲ್ಲಿ ಭರವಸೆ ಮೂಡಿಸಿದ್ದ ರಜತ್ ತನಗೆ ಸಿಕ್ಕ ಅವಕಾಶದಲ್ಲಿ 3 ಟೆಸ್ಟ್ಗಳಲ್ಲೂ ಫೇಲ್ಯೂರ್ ಆಗಿದ್ದಾರೆ.
ಭಾರತಕ್ಕೆ ಕೈಕೊಟ್ಟ ಆರ್ಸಿಬಿ ಸ್ಟಾರ್ ಬ್ಯಾಟರ್!
ಹೌದು, ಇಂಗ್ಲೆಂಡ್ ವಿರುದ್ಧ ಕಳೆದ 2 ಟೆಸ್ಟ್ಗಳಲ್ಲಿ ರಜತ್ ಪಾಟಿದಾರ್ ಸ್ಕೋರ್ ಹೀಗಿದೆ. ಮೊದಲ ಟೆಸ್ಟ್ 2 ಇನ್ನಿಂಗ್ಸ್ಗಳಲ್ಲಿ 41 ರನ್ ಮತ್ತು 2ನೇ ಟೆಸ್ಟ್ ಎರಡು ಇನ್ನಿಂಗ್ಸ್ಗಳಲ್ಲೂ ಕೇವಲ 5 ರನ್ ಮತ್ತು 3ನೇ ಟೆಸ್ಟ್ 2 ಇನ್ನಿಂಗ್ಸ್ನಲ್ಲೂ ಕೇವಲ 17 ರನ್ ಗಳಿಸಿ ಔಟಾಗಿದ್ದಾರೆ. ಈ ಪೈಕಿ 2 ಡಕೌಟ್ ಕೂಡ ಇದೆ. ಹೀಗಾಗಿ ಆರ್ಸಿಬಿ ಸ್ಟಾರ್ ಬ್ಯಾಟರ್ ವಿರುದ್ಧ ಟೀಮ್ ಇಂಡಿಯಾ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ