ಲೋಕಸಭಾ ಚುನಾವಣೆ ವೇಳೆ ಕೇಳಿಬಂದ ಯುವಿ ಹೆಸರು
ಸಿಕ್ಸರ್ ಕಿಂಗ್ ಲೋಕ ಸಮರಕ್ಕೆ ಸಜ್ಜಾಗಿರೋದು ನಿಜನಾ?
ಕ್ರಿಕೆಟ್ ಬಳಿಕ ರಾಜಕೀಯದತ್ತ ಬರಲು ಯುವರಾಜ್ ರೆಡಿನಾ?
ಲೋಕಸಭಾ ಚುನಾವಣೆಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಅತ್ತ ಕ್ರಿಕೆಟೆಗರ ಹೆಸರು ಕೂಡ ಕೇಲಿಬರುತ್ತಿದ್ದು, ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಹೆಸರು ಕೂಡ ಲೋಕ ಸಮರದಲ್ಲಿ ಕೇಳಿಬಂದಿದೆ.
ಹೌದು.. ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಬಿಜೆಪಿ ಪಕ್ಷದಿಂದ ಯುವಿ ಸ್ಪರ್ಧಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಯುವರಾಜ್ ಸಿಂಗ್ ತಮ್ಮ ಕುರಿತ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಯುವಿ ಹೇಳಿದ್ದೇನು..?
ನಾನು ಗುರುದಾಸ್ಪುರ ಲೋಕಸಭೆ ಕ್ಷೇತ್ರದಿಂದ ಚುನಾವಣೆ ಸ್ಪರ್ಧೆ ಮಾಡುತ್ತಿಲ್ಲ. ನನ್ನ ಕುರಿತ ಹಬ್ಬುತ್ತಿರುವ ಸುದ್ದಿ ಸುಳ್ಳು. ನನ್ನ ಉತ್ಸಾಹವು ವಿವಿಧ ಜನರಿಗೆ ನನ್ನ ಕೈಯಲ್ಲಿ ಆದಷ್ಟು ಸಹಾಯ ಮತ್ತು ಬೆಂಬಲ ನೀಡುವುದಾಗಿದೆ. ನಾನು ನನ್ನ ಫೌಂಡೇಷನ್ ಮೂಲಕ ಈ ಕೆಲಸವನ್ನು ಮುಂದುವರಿಸುತ್ತೇನೆ ಎಂದು ಯುವರಾಜ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ. .
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ