ಹೊಸ ಅವತಾರದಲ್ಲಿ ಮಿಸ್ಟರ್ ಕೂಲ್ ಮಾಹಿ..?
ಶುರುವಾಯ್ತು ಧೋನಿ ಬಗ್ಗೆ ಫ್ಯಾನ್ಸ್ ಲೆಕ್ಕಚಾರ..?
ನಾಯಕತ್ವ ತ್ಯಜಿಸ್ತಾರಾ ಮಹೇಂದ್ರ ಸಿಂಗ್ ಧೋನಿ..?
ಐಪಿಎಲ್ ಸೀಸನ್ ಶುರುವಾದ್ರೆ ಸಾಕು ಅತಿ ಹೆಚ್ಚು ಚರ್ಚೆಯಾಗುವ ಹೆಸರು ಮಾಹಿ. ಕಳೆದ್ಮೂರು ಸೀಸನ್ಗಳಿಂದ ಮಾಹಿಯದ್ದೇ ಚರ್ಚೆ? ಈ ಸೀಸನ್ ಕೊನೆಯಾ? ನಾಯಕತ್ವ ತ್ಯಜಿಸ್ತಾರಾ? ಚೆನ್ನೈ ಮೆಂಟರ್ ಆಗ್ತಾರಾ? ಐಪಿಎಲ್ಗೆ ಗುಡ್ಬೈ ಹೇಳ್ತಾರಾ ಅನ್ನೋದು. ಆದ್ರೀಗ ಇಂಥದ್ದೇ ಚರ್ಚೆ ಮತ್ತೆ ಹುಟ್ಟಿದೆ.
ಸೀಸನ್-17 ಐಪಿಎಲ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ಬೆನ್ನಲ್ಲೇ ಚಾಂಪಿಯನ್ ಕ್ಯಾಪ್ಟನ್ ಮಾಹಿಯದ್ದೇ ಚರ್ಚೆ.. ಚೆನ್ನೈ ನಾಯಕರಾಗಿ ತಂಡವನ್ನ ಮುನ್ನೆಡೆಸ್ತಾರಾ? ಈ ವರ್ಷವೇ ಐಪಿಎಲ್ ಭವಿಷ್ಯ ಕೊನೆಯಾಗುತ್ತಾ? ಎಂಬಿತ್ಯಾದಿ ಸಾಲು ಸಾಲು ಪ್ರಶ್ನೆಗಳು ಹುಟ್ಟಿಕೊಂಡಿವೆ. ಇದಕ್ಕೆ ಉತ್ತರ ಸಿಗದ ಹೊತ್ತಲ್ಲೇ ಸಿಡಿದ ಒಂದೇ ಒಂದು ಫೋಸ್ಟ್. ಕ್ರಿಕೆಟ್ ದಿಗ್ಗಜರ ಹಾಗೂ ಅಭಿಮಾನಿಗಳ ತಲೆಗೆ ಮತ್ತಷ್ಟು ಹುಳಬಿಟ್ಟಿದೆ.
ನ್ಯೂ ಸೀಸನ್.. ನ್ಯೂ ರೋಲ್..
ನ್ಯೂ ಸೀಸನ್-17ರ ಆರಂಭಕ್ಕೆ ಜಸ್ಟ್ 17 ದಿನವಷ್ಟೇ ಬಾಕಿಯಿದೆ. ಈ ಹೊತ್ತಿನಲ್ಲೇ ಚೆನ್ನೈ ನಾಯಕ ಮಾಹಿ, ಫೇಸ್ಬುಕ್ನಲ್ಲಿ ಹಾಕಿರುವ ಒಂದು ಪೋಸ್ಟ್ ಕ್ಯೂರಿಯಾಸಿಟಿ ಹೆಚ್ಚಿಸಿದೆ. ಈ ಸೀಸನ್ನಲ್ಲಿ ಧೋನಿ, ಯಾವ ರೋಲ್ ಪ್ಲೇ ಮಾಡ್ತಾರೆ ಎಂಬ ಲೆಕ್ಕಚಾರವೂ ಜೋರಾಗಿ ನಡೀತಿದೆ. ಇದಕ್ಕೆ ಕಾರಣ ಒಂದು ಫೋಸ್ಟ್. ಫೇಸ್ಬುಕ್ನಲ್ಲಿ ಹೊಸ ಸೀಸನ್ಗಾಗಿ ಕಾಯುತ್ತಿದ್ದೇನೆ. ಈ ಸೀಸನ್ನಲ್ಲಿ ನ್ಯೂ ರೋಲ್ನಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇದೇ ಈಗ ಧೋನಿ, ಯಾವ ಪಾತ್ರದಲ್ಲಿ ಕಾಣಿಸಿಕೊಳ್ತಾರೆ ಎಂಬ ಪ್ರಿಡಿಕ್ಷನ್ ಶುರುವಾಗುವಂತೆ ಮಾಡಿದೆ.

ಸೀಸನ್-16ರ ಮುಕ್ತಾಯದ ಬೆನ್ನಲ್ಲೇ ಮಾಹಿ, ಮುಂದಿನ ಸೀಸನ್ ಆಡ್ತೀರಾ ಎಂಬ ಪ್ರಶ್ನೆಗೆ 9 ತಿಂಗಳು ಬಾಕಿಯಿದೆ ಎಂದಿದ್ರು. ಆ ಮೂಲಕ ಅಡ್ಡಗೋಡೆಯ ಮೇಲೆ ದೀಪ ಇಟ್ಟಿದ್ರು. ಅಷ್ಟೇ ಅಲ್ಲ.! ಈ ಸೀಸನ್ನ ಮೊದಲಾರ್ಧದ ಬಳಿಕ ನಾಯಕತ್ವ ಬಿಟ್ಟುಕೊಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬಂದಿವೆ. ಈ ಹೊತ್ತಿನಲ್ಲೇ ಧೋನಿಯ ಆ ಒಂದು ಪೋಸ್ಟ್ ನಾಯಕತ್ವ ಬಿಡ್ತಾರಾ ಎಂಬ ಪ್ರಶ್ನೆಯ ಜೊತೆ ಜೊತೆಗೆ ನಿವೃತ್ತಿ ಘೋಷಿಸ್ತಾರಾ ಎಂಬ ಪ್ರಶ್ನೆ ಉದ್ಬವಿಸುವಂತೆ ಮಾಡಿದೆ.
ಇಂಜುರಿ ಕಾರಣಕ್ಕೆ ಮೆಂಟರ್ ಆಗ್ತಾರಾ ಮಹೇಂದ್ರ..?
ಕಳೆದ ಸೀಸನ್ನಲ್ಲೇ KNEE ಇಂಜುರಿಗೆ ತುತ್ತಾಗಿದ್ದ ಮಾಹಿ, ನೋವಿನಲ್ಲೇ ಅಂಗಳಕ್ಕಿಳಿದಿದ್ದರು. ಫ್ಯಾನ್ಸ್ಗೆ ಮನರಂಜನೆ ನೀಡಿದ್ರು. ಆದ್ರೆ, ಅಪರೇಷನ್ಗೆ ಒಳಗಾಗಿರುವ ಮಾಹಿ ಸಂಪೂರ್ಣ ಫಿಟ್ ಆಗಿರುವ ಬಗ್ಗೆ ಮಾಹಿತಿಯೇ ಇಲ್ಲ. ಹೀಗಾಗಿ ತೆರೆ ಮರೆಯಿಂದ ಮೆಂಟರ್ ಆಗಿ ಚೆನ್ನೈಗೆ ಸೇವೆ ಮಾಡ್ತಾರಾ ಎಂಬ ಪ್ರಿಡಿಕ್ಷನ್ ಫ್ಯಾನ್ಸ್ ವಲಯದಲ್ಲಿದೆ.
ಓಪನರ್ ಆಗಿ ನ್ಯೂ ರೋಲ್ನಲ್ಲಿ ಕಣಕ್ಕಿಳಿಯುವರಾ..?
ಇದು ಉದ್ಭವಿಸಿದರೂ ಅಚ್ಚರಿ ಇಲ್ಲ. ಯಾಕಂದ್ರೆ ಅನ್ಪ್ರಿಡಕ್ಟಲ್ ಮಾಹಿ, ಯಾವಾಗಾದ್ರೂ ಚಮಕ್ ನೀಡಬಲ್ಲರು. ಅಚ್ಚರಿಯ ನಿರ್ಧಾರಗಳಿಗೆ ಹೆಸರುವಾಸಿಯಾಗಿರೋ ಮಾಹಿ, ಡಿವೋನ್ ಕಾನ್ವೆ ಅಲಭ್ಯತೆಯಲ್ಲಿ ಆರಂಭಿಕರಾಗಿ ಕಣಕ್ಕಿಳಿಯೋ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಯಾಕಂದ್ರೆ ಕಳೆದ ಸೀಸನ್ನಲ್ಲಿ ಅಬ್ಬರಿಸಿದ್ದ ಮಾಹಿ, ಪೇಸ್ ಮಾಡಿದ್ದು ಬೆರಳೆಣಿಕೆಯಷ್ಟು ಬಾಲ್ಗಳನ್ನ ಮಾತ್ರವೇ. ಹೀಗಾಗಿ ಮಾಹಿ, ಓಪನರ್ ಆಗಿ ನ್ಯೂ ರೋಲ್ ಪ್ಲೇ ಮಾಡ್ತಾರೆ ಅನ್ನೋ ಎಕ್ಸ್ಪೆಕ್ಟೇಷನ್ನಲ್ಲಿದ್ದಾರೆ.
ಹಿಂದಿನಂತೆ ಚಮಕ್ ಕೊಡ್ತಾರಾ ಮಿಸ್ಟರ್ ಕೂಲ್?
ಆನ್ಫೀಲ್ಡ್ನಲ್ಲಿ ಚಮಕ್ ನೀಡೋ ಮಾಹಿ, ಆಫ್ ದಿ ಫೀಲ್ಡ್ನಲ್ಲೂ ಚಮಕ್ ಕೊಟ್ಟಿದ್ದಿದೆ. 2022ರ ಸೆಂಪ್ಟೆಂಬರ್ನಲ್ಲಿ ಫೇಸ್ಬುಕ್ ಬುಕ್ ಫೋಸ್ಟ್ ಮಾಡಿದ್ದ ಧೋನಿ, 2022 ಟಿ-20 ವಿಶ್ವಕಪ್ಗೂ ಮುನ್ನ ರೋಚಕ ಸುದ್ದಿ ಹಂಚಿಕೊಳ್ಳುತ್ತೇನೆ ಎಂದಿದ್ದರು. ಈ ವೇಳೆ ಸೋಶಿಯಲ್ ಮೀಡಿಯಾದಲ್ಲಿ ಹೊಸ ಸಂಚಲನವೇ ಸೃಷ್ಟಿಯಾಗಿತ್ತು. ಆದ್ರೆ, ಒರಿಯೋ ಬ್ರ್ಯಾಂಡ್ನ ಪ್ರಮೋಟ್ ಮಾಡಿ ಚಮಕ್ ನೀಡಿದ್ರು. ಆದ್ರೀಗ 2 ವರ್ಷಗಳಿಂದ ಕೇವಲ ಕಮರ್ಶಿಯಲ್ ಪೋಸ್ಟ್ಗಳನ್ನೇ ಮಾಡಿರೋ ಮಾಹಿ, ಐಪಿಎಲ್ ಆರಂಭಕ್ಕೂ ಮುನ್ನ ಮಾಡಿರೋ ಈ ಪೋಸ್ಟ್ ಅಂಥದ್ದೇ ಚಮಕ್ ನೀಡ್ತಿದೆಯಾ ಎಂಬ ಅನುಮಾನ ಹುಟ್ಟಿಸ್ತಿರೋದು ಸುಳ್ಳಲ್ಲ.
ಒಟ್ನಲ್ಲಿ. ಒಂದಂತೂ ಸತ್ಯ.. ಅನ್ ಪ್ರಿಡಕ್ಟಬಲ್ ಧೋನಿ, ಕೊನೆ ಕ್ಷಣದಲ್ಲೇ ನಿರ್ಧಾರ ಪ್ರಕಟಿಸಿ ಪ್ರತಿ ಸಲ ಅಚ್ಚರಿಗೊಳಿಸಿದ್ದಾರೆ. ಹೀಗಾಗಿ ಈ ಸಲನೂ ಯಾವ ರೀತಿಯ ಚಮಕ್ ನೀಡ್ತಾರೆ ಅನ್ನೋದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್