newsfirstkannada.com

×

ಪ್ರತಾಪ್​ ಸಿಂಹ ಭಾವುಕ.. ಕೊಡಗು-ಮೈಸೂರು ಜನರಿಗೆ ಧನ್ಯವಾದ ಹೇಳಿದ ಯಂಗ್ ಲಯನ್! ವಿದಾಯ​ ಹೇಳಿದ್ರಾ?

Share :

Published March 12, 2024 at 6:50am

Update March 12, 2024 at 6:58am

    ಟಿಕೆಟ್​ ಕೈ ತಪ್ತಿರೋದಕ್ಕೆ ‘ಚಾಮುಂಡಿ ಭಕ್ತ’ನ ಕಣ್ಣೀರು

    ಸಿಂಹದ ಬಾಯಲ್ಲಿ ರಾಜಕೀಯ ವಿದಾಯ ಘೋಷಿಸುವಂತಹ ಮಾತು

    ಕೊಡಗಿನ ಜನರ ಋಣ ತೀರಿಸ್ತೀನಿ ಎಂದ ಫೈರ್ ಬ್ರ್ಯಾಂಡ್ ಪ್ರತಾಪ್ ಸಿಂಹ

ಪ್ರತಾಪ್ ಸಿಂಹ ಫೈರ್ ಬ್ರ್ಯಾಂಡ್. ರಾಜಿಯಿಲ್ಲದ ಮಾತಿನಿಂದ ಮೋದಿ ಮೇಲಿನ ಪ್ರೀತಿಯಿಂದ ಗುರುತಿಸಿಕೊಂಡಿದ್ದ ಜನಪ್ರಿಯ ನಾಯಕ. ಆದ್ರೆ, ಈ ಬಾರಿ ಮೈಸೂರು ಯುದ್ಧದಲ್ಲಿ ಹ್ಯಾಟ್ರಿಕ್ ಕನಸು ಕಂಡಿದ್ದ ಪ್ರತಾಪ್ ಸಿಂಹಗೆ ಶಾಕ್ ಎದುರಾಗಿದೆ. ಆ ಶಾಕ್ ಕಣ್ಣೀರು ತರಿಸಿದೆ.

ಪ್ರತಾಪದಿಂದ ಸದಾ ಘರ್ಜಿಸ್ತಿದ್ದ ‘ಸಿಂಹ’ ಭಾವುಕ!

ಸದಾ ಎದುರಾಳಿ ನಾಯಕರಿಗೆ ಮಾತಿನಲ್ಲೇ ತಿವಿಯುತ್ತಿದ್ದ ಪ್ರತಾಪ್ ಸಿಂಹ ಮಾತು ಭಾವುಕವಾಗಿದೆ. ಪ್ರತಿಪಕ್ಷದವರನ್ನ ನಡುಗಿಸ್ತಿದ್ದ ಪ್ರತಾಪ್ ಸಿಂಹನ ಕಣ್ಣು ಒದ್ದೆಯಾಗಿದೆ. ಅದ್ಯಾವಾಗ ಟಿಕೆಟ್​​ ಕೈ ತಪ್ಪೋದು ಕನ್ಫರ್ಮ್ ಆಯ್ತೋ ನೇರ ಫೇಸ್​ಬುಕ್​ ಲೈವ್​ ಬಂದ ಪ್ರತಾಪ್ ಸಿಂಹ ಮನದಾಳದ ಮಾತುಗಳನ್ನ ಹಂಚಿಕೊಂಡ್ರು.

ಆರಂಭಿಕ ರಾಜಕೀಯ ದಿನಗಳನ್ನ ನೆನೆದ ಯಂಗ್ ಲಯನ್​​!

ರಾಜಾಕಾರಣದಲ್ಲಿ ನನಗ್ಯಾರು ಬಿಗ್ ಬಾಸ್​ ಇಲ್ಲ ಅನ್ನೋದನ್ನ ಸ್ಪಷ್ಟವಾಗಿ ಹೇಳಿರೋ ಪ್ರತಾಪ್ ಸಿಂಹ. ಒಬ್ಬ ಸಾಮಾನ್ಯ ವ್ಯಕ್ತಿ ಹೇಗೆ ಎಂಪಿ ಆಗಿದ್ದು ಅನ್ನೋದನ್ನ ಬಿಚ್ಚಿಟ್ರು.

ಪೊಲಿಟಿಕಲ್​ ಕೆರಿಯರ್​ಗೆ ವಿದಾಯ​ ಹೇಳಿದ್ರಾ ಸಂಸದ?

10 ವರ್ಷ ಅವಕಾಶ ಕೊಟ್ಟಿದ್ದಕ್ಕೆ ಕೊಡಗು ಹಾಗೂ ಮೈಸೂರು ಜನರಿಗೆ ಪ್ರತಾಪ್ ಸಿಂಹ ಧನ್ಯವಾದ ತಿಳಿಸಿದ್ರು. ರಾಜಕೀಯ ವಿದಾಯ ಘೋಷಿಸುವಂತಹ ಮಾತುಗಳನ್ನೂ ಆಡಿದ್ರು.

‘ಮೈಸೂರಲ್ಲಿ ಕೆಲಸ ಮಾಡಿದ್ದೇನೆ .. ಈ ಬಾರಿ ಕೊಡಗಿನ ಋಣ ತೀರಿಸ್ತೀನಿ’

ಹೌದು.. ಮಾತಿನಲ್ಲಿ ಕಡೆಯಲ್ಲಿ ಪ್ರತಾಪ್​ ಒಂದು ಮಾತನ್ನ ಹೇಳ್ತಾರೆ. ಕಳೆದ ಎರಡೂ ಬಾರಿ ಗೆದ್ದಾಗ್ಲೂ ಮೈಸೂರಿನಲ್ಲಿ ಹಲವು ಕೆಲಸವನ್ನ ಮಾಡಿದ್ದೀನಿ.. ಈ ಬಾರಿ ಮೂರನೇ ಟರ್ಮ್​ನಲ್ಲಿ ಕೊಡಗಿನ ಜನರ ಋಣ ತೀರಿಸ್ತೀನಿ ಎಂದ್ರು. ಈ ಮಾತು ಸಾಕಷ್ಟು ನಿಗೂಢತೆಗೆ ಕಾರಣವಾಗಿದ್ದಂತೂ ಸತ್ಯ.

ಒಟ್ಟಾರೆ ರಾಜಸ್ಥಾನದ ಸಂಧಿಯಿಂದ ಹಿಂದ್ವುತದ ಫೈರ್​ ಬ್ರ್ಯಾಂಡ್​ ಪ್ರತಾಪ್ ಸಿಂಹಗೆ ಟಿಕೆಟ್​ ಕೈ ತಪ್ಪೋದು ಪಕ್ಕಾ ಆಗಿದೆ. ಸದ್ಯಕ್ಕೆ ಕ್ಷೇತ್ರದ ಜನರಿಗೆ ಭಾವುಕ ಧನ್ಯವಾದ ಹೇಳಿರೋ ಪ್ರತಾಪ್ ಸಿಂಹ, ವಿದಾಯದ ಹೆಜ್ಜೆ ಇಟ್ಟಂತೆ ಕಾಣ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರತಾಪ್​ ಸಿಂಹ ಭಾವುಕ.. ಕೊಡಗು-ಮೈಸೂರು ಜನರಿಗೆ ಧನ್ಯವಾದ ಹೇಳಿದ ಯಂಗ್ ಲಯನ್! ವಿದಾಯ​ ಹೇಳಿದ್ರಾ?

https://newsfirstlive.com/wp-content/uploads/2024/03/pratap-simha-2.jpg

Load More