ಕಾರಾಗೃಹದಲ್ಲಿ ಕುಳಿತು 2 ನಿಮಿಷಗಳ ಲೈವ್ ವಿಡಿಯೋ ಮಾಡಿದ ಆರೋಪಿ
ಶೀಘ್ರದಲ್ಲೇ ಜೈಲಿನಿಂದ ಹೊರ ಬರುತ್ತೇನೆ ಎಂದು ಹೇಳಿದ ವಿಡಿಯೋ ವೈರಲ್
ಕೊಲೆ ಮಾಡಿದ್ದ ಆರೋಪಿಗೆ ಜೈಲಿನಲ್ಲಿ ಇಷ್ಟೊಂದು ಸೌಕರ್ಯವಿದೆಯಾ?
ಉತ್ತರ ಪ್ರದೇಶ: ಕೊಲೆ ಆರೋಪಿಯೋರ್ವ ಜೈಲಿನಲ್ಲಿ ಕುಳಿತುಕೊಂಡು ಲೈವ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಘಟನೆಯೊಂದು ಮುನ್ನೆಲೆಗೆ ಬಂದಿದೆ. ವಿಡಿಯೋದಲ್ಲಿ ಆತ ‘ಸ್ವರ್ಗ’ದಲ್ಲಿ ಜೀವನವನ್ನು ‘ಎಂಜಾಯ್’ ಮಾಡುತ್ತಿದ್ದೇನೆ ಎಂದು ಹೇಳಿದ್ದಾನೆ.
ಉತ್ತರ ಪ್ರದೇಶದ ಬರೇಲಿ ಕೇಂದ್ರ ಕಾರಾಗೃಹದಲ್ಲಿರುವ ಆರೋಪಿ ಆಸಿಫ್ 2 ನಿಮಿಷಗಳ ಲೈವ್ ವಿಡಿಯೋ ಹಂಚಿಕೊಂಡಿದ್ದು, ಶೀಘ್ರದಲ್ಲೇ ಜೈಲಿನಿಂದ ಹೊರಬಲಿದ್ದೇನೆ ಎಂದು ಹೇಳಿದ್ದಾನೆ.
ಸದ್ಯ ಈ ವಿಡಿಯೋ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ಕುಂತಲ್ ಕಿಶೋರ್ಗೆ ಸಿಕ್ಕಿದ್ದು, ಈ ಪ್ರಕರಣ ಕುರಿತಾಗಿ ತನಿಖೆ ನಡೆಸುತ್ತಿದ್ದಾರೆ. ತನಿಖೆಯಲ್ಲಿ ಯಾರೇ ತಪ್ಪಿತಸ್ಥರಿದ್ದರು ಸಹ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಆಸಿಫ್ ವಿಡಿಯೋದಲ್ಲಿ ‘ನಾನು ಸ್ವರ್ಗದಲ್ಲಿದ್ದೇನೆ ಮತ್ತು ಎಂಜಾಯ್ ಮಾಡುತ್ತಿದ್ದೇನೆ. ಶೀಘ್ರದಲ್ಲೇ ಜೈಲಿನಿಂದ ಹೊರಬರುತ್ತೇನೆ’ ಎಂದು ಲೈವ್ ವಿಡಿಯೋದಲ್ಲಿ ಹೇಳಿದ್ದಾನೆ.
रामराज्य हैं
उत्तर प्रदेश बरेली जेल में बन्द जेल में बंद आरोपी का वीडियो वायरल PWD ठेकेदार हत्याकांड का आरोपी जेल में है बंद जेल में बंद आरोपी का लाइव वीडियो चैट वायरल,, pic.twitter.com/8yZOg1m2xK— Mαɳιʂԋ Kυɱαɾ αԃʋσƈαƚҽ 🇮🇳🇮🇳 (@Manishkumarttp) March 14, 2024
ಕೊಲೆ ಮಾಡಿ ಜೈಲು ಸೇರಿದ್ದ
ಆಸಿಫ್ 2019 ಡಿಸೆಂಬರ್ 2ರಂದು ದೆಹಲಿಯ ಶಹಜಹಾನ್ಪುರದ ಸದರ್ ಬಜಾರ್ ಪೊಲೀಸ್ಠಾಣೆ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರ ರಾಕೇಶ್ ಯಾದವ್ (34) ಅವರನ್ನು ಗುಂಡಿಕ್ಕಿ ಕೊಂದಿದ್ದನು. ಹಾಡುಹಗಲೇ ಕೊಲೆ ಮಾಡಿದ್ದನು. ಈ ಪ್ರಕರಣದಲ್ಲಿ ಬರೇಲಿ ಜೈಲು ಸೇರಿದ್ದನು.
ಆಸಿಫ್ ಜೊತೆಗೆ ಮತ್ತೊಬ್ಬ ಆರೋಪಿ ರಾಹುಲ್ ಚೌಧರಿ ಕೂಡ ಕೊಂದ ಆರೋಪವನ್ನು ಹೊತ್ತುಕೊಂಡಿದ್ದನು. ಸದ್ಯ ಇಬ್ಬರು ಬರೇಲಿ ಕೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.
ಸದ್ಯ ಆಸಿಪ್ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಇದನ್ನು ಕಂಡು ರಾಕೇಶ್ ಯಾದವ್ ಸಹೋದರ ಜಿಲ್ಲಾಧಿಕಾರಿ ಉಮೇಶ್ ಪ್ರತಾಪ್ ಸಿಂಗ್ರನ್ನು ಭೇಟಿ ಮಾಡಿ ದೂರು ಸಲ್ಲಿಸಿದ್ದಾರೆ. ಕೊಲೆ ಆರೋಪಿ ಜೈಲಿನಲ್ಲಿ ವಿಶೇಷ ಸೌಲಭ್ಯ ತೆಗೆದುಕೊಳ್ಳುತ್ತಿದ್ದಾನೆ ಎಮದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ