ಎಲ್ಲ ಅಭಿಮಾನಿಗಳು ಖುಷಿ ಪಡೋ ಸುದ್ದಿ ಕೊಟ್ಟ ಸೀರಿಯಲ್ ತಂಡ
ನಂಬರ್ ಒನ್ ಧಾರಾವಾಹಿಯಾಗಿ ಹೊರ ಹೊಮ್ಮುತ್ತಿರೋ ಲಕ್ಷ್ಮೀ ನಿವಾಸ
ಮುಂದಿನ ದಿನಗಳಲ್ಲಿ ಲಕ್ಷ್ಮೀ ನಿವಾಸ ಧಾರಾವಾಹಿ ಎರಡು ಭಾಗವಾಗುತ್ತಾ?
ಲಕ್ಷ್ಮೀ ನಿವಾಸ ಮನೆ ಮನೆ ಮನಸ್ಸನ್ನ ಗೆದ್ದಿದೆ. ಕರ್ನಾಟಕದ ನಂಬರ್ ಒನ್ ಧಾರಾವಾಹಿಯಾಗಿ ಜನಪ್ರಿಯತೆ ಪಡೆಯುತ್ತಿದೆ. ತುಂಬು ಕುಟುಂಬದ ಕಥೆ ಮತ್ತೊಂದು ಹೊಸ ರೂಪ ಪಡೆಯುತ್ತಿದೆ. ಅಭಿಮಾನಿಗಳ ಆಸೆ ಇನ್ನೇನೂ ಕೆಲವೇ ದಿನಗಳ ಈಡೇರಲಿದೆ. ಹೌದು, ಸೀರಿಯಲ್ ಸೆಟ್ನಿಂದ ಇಂತಹದೊಂದು ಸುದ್ದಿ ಹರಿದಾಡ್ತಿದೆ.
ಈಗಾಗಲೇ ಮದುವೆ ಸಂಚಿಕೆಗಳು 1 ಗಂಟೆಯ ಕಾಲ ಪ್ರಸಾರವಾಗಲಿದೆ ಎಂಬ ಮಾಹಿತಿ ಅನೌನ್ಸ್ ಆಗಿದೆ. ಇದರ ಜೊತೆಗೆ ಮದುವೆ ಮುಗಿದ ನಂತರ ಎರಡು ಹೊಸ ಸ್ಟೋರಿ ಹೊತ್ತು ತರಲಿದೆ ಲಕ್ಷ್ಮೀ ನಿವಾಸ. ಅರ್ಥಾತ್ ಎರಡು ಧಾರಾವಾಹಿ ಆಗಿ ಸ್ಪ್ಲಿಟ್ ಆಗಲಿದೆ. ಲಕ್ಷ್ಮೀ ಬಾರಮ್ಮ, ಭಾಗ್ಯಲಕ್ಷ್ಮೀ ಧಾರಾವಾಹಿ ರೀತಿಯಲ್ಲೇ ಅಕ್ಕ-ತಂಗಿಯ ಕಥೆ ಅಕ್ಕಪಕ್ಕ ತರೋ ಪ್ಲ್ಯಾನ್ ನಡೆತಿದೆಯಂತೆ. ಒಂದು ಕಡೆ ಜಾಹ್ನವಿ-ಜಯಂತ್ ಮದುವೆ ಸ್ಟೋರಿ. ಮತ್ತೊಂದು ಕಡೆ ಸಿದ್ದೇಗೌಡ್ರು-ಭಾವನಾ ಲವ್ ಸ್ಟೋರಿ ಶುರುವಾಗಲಿದೆ. ಸಿದ್ದೇಗೌಡ್ರು ಲವ್ ಮಾಡೋ ಸ್ಟೈಲ್ನ ಜನ ಸಿಕ್ಕಾಪಟ್ಟೆ ಇಷ್ಟಪಡುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾವನಾ-ಸಿದ್ದೇಗೌಡರದ್ದೇ ಪ್ರೇಮ ಪುರಾಣ ಹರಿದಾಡ್ತಿದೆ.
ಇದನ್ನು ಓದಿ: ಮಂಡ್ಯ ಇನ್ನೂ ಸಸ್ಪೆನ್ಸ್.. ಜೆ.ಪಿ ನಡ್ಡಾ ಭೇಟಿ ಬಳಿಕ ಸುಮಲತಾ ಕೊಟ್ರು ಹೊಸ ಟ್ವಿಸ್ಟ್!
ವೀಕ್ಷಕರು ಇಷ್ಟು ಇಷ್ಟ ಪಟ್ಟಮೇಲೆ ಮನರಂಜನೆಯ ರುಚಿ ಮತ್ತಷ್ಟು ಹೆಚ್ಚಿಸಲು ಇವರ ಕಥೆನೇ ಬೇರೆ ರೀತಿ ಹೇಳೋ ಪ್ಲ್ಯಾನ್ ಮಾಡ್ತಿದ್ದಾರಂತೆ. ಲಕ್ಷ್ಮೀ ನಿವಾಸ ಕುಟುಂಬಕ್ಕೆ ಜಯಂತ್ ಅನ್ನೋ ಪಾತ್ರ ಎಂಟ್ರಿ ಕೊಟ್ಟಾಗಿನಿಂದ ಕಥೆ ಹೀಗೆ ಆಗಬಹುದಾ? ಹಾಗೇ ಆಗಬಹುದಾ..? ಜಯಂತ್ ಯಾರು? ಯಾಕೆ ಇಷ್ಟು ಒಳ್ಳೆಯವನು? ಅನ್ನೋದ್ರ ಬಗ್ಗೆ ಫ್ಯಾನ್ಸೇ ಲೆಕ್ಕಾಚಾರ ಹಾಕುತ್ತಿದ್ದಾರೆ. ಹೀಗಾಗಿನೇ ಜಾಹ್ನವಿ-ಜಯಂತ್ ಸ್ಟೋರಿನ ಮತ್ತಷ್ಟು ಇಂಟ್ರಸ್ಟಿಂಗ್ ಆಗಿ ತೋರಿಸಲು ಇವರಿಗಾಗಿನೇ ಒಂದು ಸ್ಲಾಟ್ ಫಿಕ್ಸ್ ಮಾಡೋ ಮಾತು ಕೇಳಿ ಬರ್ತಿವೆ.
ಲಕ್ಷ್ಮೀ ನಿವಾಸ ತಮಿಳಿನ ತಾವರಮೈ ತವರಿಮಿರುಂದು ಸೀರಿಯಲ್ನ ರಿಮೇಕ್ ಆಗಿದ್ದು, ಕನ್ನಡದಲ್ಲಿ ಆದರ್ಶ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಕೂಡು ಕುಟುಂಬ ಎಂಟರ್ಟೈನ್ಮೆಂಟ್ ಧಾರಾವಾಹಿ ಲಕ್ಷ್ಮೀ ನಿವಾಸ ಎರಡು ಭಾಗವಾಗಿ ಎರಡು ವಿಭಿನ್ನ ಕಥೆಯನ್ನ ತೋರಿಸಲು ತಯಾರಿ ಮಾಡಿಕೊಳ್ತಿದೆ ಅನ್ನೋದು ಸದ್ಯದ ಅಪ್ಡೇಟ್ಸ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ