ಇಂದಿನಿಂದ ಕ್ರಿಕೆಟ್ ಜಾತ್ರೆ ಐಪಿಎಲ್ ಆರಂಭ
ಮೊದಲ ಪಂದ್ಯದಲ್ಲೇ ದಿಗ್ಗಜರ ಮುಖಾಮುಖಿ
ಧೋನಿ - ಕೊಹ್ಲಿ ಮುಖಾಮುಖಿಗೆ ಫ್ಯಾನ್ಸ್ ಕಾತರ
ಮದಗಜಗಳ ನಡುವಿನ ಕಾದಾಟ ನೋಡಲು ಇಡೀ ವಿಶ್ವದ ಜನ ಕಾದು ಕುಳಿತಿದ್ದಾರೆ. ಗುರು-ಶಿಷ್ಯರ ನಡುವಿನ ಕಾಳಗದ ಕಿಚ್ಚು ಅಷ್ಟರಮಟ್ಟಿಗೆ ಕ್ರಿಕೆಟ್ ಲೋಕವನ್ನೇ ಆವರಿಸಿಬಿಟ್ಟಿದೆ. ಕೊಹ್ಲಿ, ಕೊಹ್ಲಿ, ಧೋನಿ, ಧೋನಿ ಈ ಎರಡೇ ಹೆಸರುಗಳು ಇವತ್ತು ಚೆಪಾಕ್ ಅಂಗಳದಲ್ಲಿ ಮಾರ್ದನಿಸಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಜಾತ್ರೆ ಅರಂಭಕ್ಕೆ ಕೆಲವೇ ಗಂಟೆಗಳು ಬಾಕಿ. ಬೌಂಡರಿ-ಸಿಕ್ಸರ್ಗಳ ಫುಲ್ ಮೀಲ್ಸ್ ಸವಿಯಲು ವಿಶ್ವಾದ್ಯಂತ ಫ್ಯಾನ್ಸ್ ಸಜ್ಜಾಗಿದ್ದಾರೆ. ಈ ಸೀಸನ್ ಮೊದಲ ಪಂದ್ಯವೇ ಅಭಿಮಾನಿಗಳ ಕಾತುರತೆಯನ್ನ ಡಬಲ್ ಮಾಡಿದೆ. ಯಾಕಂದ್ರೆ, ಬ್ಯಾಟಲ್ ಫೀಲ್ಡ್ನಲ್ಲಿ ಮುಖಾಮುಖಿಯಾಗ್ತಿರೋದು ಎಮ್.ಎಸ್ ಧೋನಿ ಅಂಡ್ ವಿರಾಟ್ ಕೊಹ್ಲಿ.
ಮೊದಲ ಪಂದ್ಯದಲ್ಲೇ ದಿಗ್ಗಜರ ಮುಖಾಮುಖಿ
ಐಪಿಎಲ್ ಸೀಸನ್ 17ರ ಮೊದಲ ಪಂದ್ಯದಲ್ಲೇ ದಿಗ್ಗಜರ ಮುಖಾಮುಖಿಗೆ ವೇದಿಕೆ ಸಜ್ಜಾಗಿದೆ. ಚೆಪಾಕ್ನಲ್ಲಿಂದು ಗುರು-ಶಿಷ್ಯರು ನಾನಾ ನೀನಾ ಫೈಟ್ ನಡೆಸಲಿದ್ದಾರೆ. ಇದು CSK vs RCB ನಡುವಿನ ಪಂದ್ಯ ಅನ್ನೋದಕ್ಕಿಂತ ಇದು ಧೋನಿ vs ಕೊಹ್ಲಿ ನಡುವಿನ ಕಾಳಗ ಎಂದೇ ಬಿಂಬಿತವಾಗಿದೆ. ಧೋನಿ-ಕೊಹ್ಲಿ ಎದುರುಬದುರಾಗ್ತಿರೋದ್ರ ಕ್ರೇಜ್ ನೆಕ್ಸ್ಟ್ ಲೆವೆಲ್ನಲ್ಲಿದೆ.
ಅಭಿಮಾನಿಗಳಿಗೆ ಕಾದಿದೆ ಸ್ಪೆಷಲ್ ಟ್ರೀಟ್..!
ಎಂ.ಎಸ್.ಧೋನಿ-ವಿರಾಟ್ ಕೊಹ್ಲಿ. ಟೀಮ್ ಇಂಡಿಯಾ ಫ್ಯಾನ್ಸ್ ಎಂದಿಗೂ ಮರೆಯದ ಹೆಸರುಗಳಿವು. ಐಪಿಎಲ್ನಲ್ಲಂತೂ ಯಾವತ್ತೇ ಮುಖಾಮುಖಿಯಾದ್ರೂ, ಫ್ಯಾನ್ಸ್ಗೆ ಫುಲ್ ಮೀಲ್ಸ್ ಫಿಕ್ಸ್. ಜಿದ್ದಿಗೆ ಬಿದ್ದವರಂತೆ ಹೋರಾಡೋದ್ರಲ್ಲಿ ಇಬ್ಬರನ್ನ ಮೀರಿಸೋರಿಲ್ಲ. ಬಾಲರ್ಗಳನ್ನ ನಿರ್ಧಯವಾಗಿ ದಂಡಿಸಿ, ರನ್ ಭರಾಟೆ ನಡೆಸೋದ್ರಲ್ಲಂತೂ ಇಬ್ಬರೂ ನಿಸ್ಸೀಮರು.! ಇಂದೂ ಕೂಡ ಫ್ಯಾನ್ಸ್ ಕಾಯ್ತಿರೋದು ಈ ಕಾರಣಕ್ಕೆ.
ಕೂಲ್ ಅಂಡ್ ಕಾಮ್ ಧೋನಿ, ಅಗ್ರೆಸ್ಸಿವ್ ಕಿಂಗ್ ಕೊಹ್ಲಿ..!
ಪಂದ್ಯದ ನಡುವೆ ಎಷ್ಟೇ ಒತ್ತಡವಿರಲಿ ಧೋನಿ ವ್ಯಕ್ತಿತ್ವ ಬದಲಾಗಲ್ಲ. ಕೂಲ್ ಅಂಡ್ ಕಾಮ್ ಆಗಿಯೇ ಎಂತಾ ಪ್ರೆಶರ್ ಇದ್ರೂ ಹ್ಯಾಂಡೆಲ್ ಮಾಡ್ತಾರೆ. ಆದ್ರೆ, ವಿರಾಟ್ ಕೊಹ್ಲಿಯದ್ದು ತದ್ವಿರುದ್ಧ ಅವತಾರ. ಫೀಲ್ಡ್ಗಿಳಿದ್ರೆ ಸಾಕು ಅಗ್ರೆಸ್ಸೀವ್ ಅವತಾರದಲ್ಲಿ ಮಿಂಚು ಹರಿಸ್ತಾರೆ. ಅಪ್ಪಿತಪ್ಪಿ ಯಾರಾದ್ರೂ ಕೆಣಕಿದ್ರೆ, ಉಗ್ರರೂಪವನ್ನೇ ತಾಳ್ತಾರೆ. ಈ ಆ್ಯಕ್ಷನ್ – ರಿಯಾಕ್ಷನ್ಗಳು ಪಂದ್ಯಕ್ಕೇ ಟ್ವಿಸ್ಟ್ ಕೊಟ್ಟು ಬಿಡ್ತವೆ.
‘ಭಲೇ ಜೋಡಿ’ ಪಾಲಿಗೆ ಇದೇ ಕೊನೆಯ ಐಪಿಎಲ್?
ಟೂರ್ನಿಗೂ ಮುನ್ನವೇ ಕ್ಯಾಪ್ಟನ್ಸಿಗೆ ಗುಡ್ ಬೈ ಹೇಳಿರುವ ಧೋನಿ, ಇದೇ ಕೊನೇ ಸೀಸನ್ ಎಂಬ ಸೂಚನೆಯನ್ನ ಕೊಟ್ಟಿದ್ದಾರೆ. ಧೋನಿ ಗುಡ್ ಬೈ ಹೇಳಿದ್ದೇ ಆದ್ರೆ, ವಿರಾಟ್ ಕೊಹ್ಲಿ ಎದುರು ಆಡೋ ಕೊನೆಯ ಟೂರ್ನಿಯೂ ಇದೇ ಆಗಲಿದೆ. ಈ ಕಾರಣದಿಂದ ಕೂಡ ಕೊಹ್ಲಿ – ಧೋನಿ ಮುಖಾಮುಖಿ ಅಭಿಮಾನಿಗಳ ವಲಯದಲ್ಲಿ ಕುತೂಹಲವನ್ನ ಕೆರಳಿಸಿದೆ.
ವಿಶೇಷ ವರದಿ: ವಸಂತ್ ಮಳವತ್ತಿ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್