ಸಖತ್ ಸೌಂಡ್ ಮಾಡಲು ಸಜ್ಜಾಗಿ ನಿಂತ ಅಣ್ಣಾವ್ರ ಮೊಮ್ಮಗ ಯುವ
ದೊಡ್ಮನೆಯ ಫ್ಯೂಚರ್ ಸ್ಟಾರ್ ಯುವರಾಜ್ ಕುಮಾರ್ ಸಿನಿಮಾ ರಿಲೀಸ್
ರಿಲೀಸ್ ಮೊದಲ ದಿನವೇ ಬಿಗ್ ಓಪನಿಂಗ್ ಮಾಡುವ ಲೆಕ್ಕಾಚಾರ ಶುರು
ಸ್ಯಾಂಡಲ್ವುಡ್ನಲ್ಲಿ ಇಂದಿನಿಂದ ಯುವ ಘರ್ಜನೆ ಶುರುವಾಗಲಿದೆ. ಪವರ್ ಹೌಸ್ನಿಂದ ಮತ್ತೊಂದು ಪವರ್ಫುಲ್ ವೆಪನ್ ಬೆಳ್ಳಿತೆರೆಗೆ ಎಂಟ್ರಿ ಕೊಡಲಿದೆ. ಹೌದು, ಅಣ್ಣಾವ್ರ ಮೊಮ್ಮಗ, ದೊಡ್ಮನೆಯ ಫ್ಯೂಚರ್ ಸ್ಟಾರ್ ಯುವರಾಜ್ ಕುಮಾರ್ ನಟನೆಯ ಚೊಚ್ಚಲ ಸಿನಿಮಾ ಇಂದು ರಿಲೀಸ್ ಆಗುತ್ತಿದೆ. ಸಖತ್ ಸೌಂಡ್ ಮಾಡಲು ಸಜ್ಜಾಗಿ ನಿಂತಿದೆ.
ಕಳೆದ ಒಂದು ವರ್ಷದಿಂದ ದೊಡ್ಮನೆ ಅಭಿಮಾನಿಗಳು ಬಹಳ ನಿರೀಕ್ಷೆಯಿಂದ ಎದುರು ನೋಡ್ತಿರುವ ‘ಯುವ’ ಸಿನಿಮಾ ಇಂದು ಬೆಳ್ಳಿತೆರೆ ಮೇಲೆ ರಾರಾಜಿಸಲಿದೆ. ರಾಜ್ಯಾದ್ಯಂತ ಸುಮಾರು 350ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ಯುವ ಘರ್ಜನೆ ಆರಂಭವಾಗಲಿದ್ದು, ಯುವ ಸಂಭ್ರಮ ಜೋರಾಗಿದೆ.
ಯುವ ರಿಲೀಸ್ ಹಿನ್ನೆಲೆ ಥಿಯೇಟರ್ಗಳ ಮುಂದೆ ಹಬ್ಬದ ಕಳೆ ಹೆಚ್ಚಿದೆ. ಕೆಜಿ ರಸ್ತೆಯ ನರ್ತಕಿ ಬಳಿ ಅಪ್ಪು ಮತ್ತು ಯುವ ರಾಜ್ ಕುಮಾರ್ ಅವರ 60 ಅಡಿ ಕಟೌಟ್ ತಲೆ ಎತ್ತಿದೆ. ಜೆಪಿ ನಗರದ ಸಿದ್ದೇಶ್ವರದಲ್ಲಂತೂ ದೊಡ್ಡ ಉತ್ಸವವೇ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನಲ್ಲಷ್ಟೇ ಅಲ್ಲ ಹೊಸಪೇಟೆ, ದಾವಣೆಗೆರೆ, ಹಾಸನ, ಚಾಮರಾಜನಗರ ಸೇರಿ ಬಹುತೇಕ ಎಲ್ಲ ಜಿಲ್ಲೆಗಳು ಯುವನ ಎಂಟ್ರಿಗೆ ಸಜ್ಜಾಗಿದೆ.
ಇನ್ನು, ಜಬರ್ದಸ್ತ್ ಟ್ರೇಲರ್, ವೆರೈಟಿ ಸಾಂಗ್ಗಳಿಂದ ಕ್ರೇಜ್ ಹೆಚ್ಚಿಸಿರುವ ಯುವ, ಮೊದಲ ದಿನವೇ ಬಿಗ್ ಓಪನಿಂಗ್ ಮಾಡುವ ಲೆಕ್ಕಾಚಾರದಲ್ಲಿದೆ. ಚೊಚ್ಚಲ ಚಿತ್ರದಲ್ಲೇ ಫೈಟ್, ಡ್ಯಾನ್ಸ್, ಡೈಲಾಗ್ ಮೂಲಕ ಅಬ್ಬರಿಸೋ ಸೂಚನೆ ಕೊಟ್ಟಿರುವ ಯುವ ಬಾಕ್ಸಾಫೀಸ್ನಲ್ಲೂ ಧೂಳೆಬ್ಬಿಸುವ ನಿರೀಕ್ಷೆ ಇದೆ. ಇನ್ನು ಸಂತೋಷ್ ಆನಂದ್ ರಾಮ್ ಡೈರೆಕ್ಷನ್, ಹೊಂಬಾಳೆ ಫಿಲಂಸ್ ಪ್ರೊಡಕ್ಷನ್ ಚಿತ್ರದ ಕಿಕ್ ಹೆಚ್ಚಿಸಿದೆ. ಸಪ್ತಮಿ ಗೌಡ ನಾಯಕಿಯಾಗಿದ್ದು, ಹೊಸ ಜೋಡಿ ಭರವಸೆ ಮೂಡಿಸಿದೆ. ಇದೆಲ್ಲದರ ಜೊತೆ ಯುವ ರಾಜ್ ಕುಮಾರ್, ಪವರ್ಸ್ಟಾರ್ ಪುನೀತ್ ರಾಜ್ ಕುಮಾರ್ ಲೆಗೆಸಿನಾ ಮುಂದುವರಿಸ್ತಾರೆ ಅನ್ನೋ ಅಭಿಪ್ರಾಯ ಕುತೂಹಲ ಹೆಚ್ಚಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ