ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದು ಬೀಗಿದ ರಾಜಸ್ಥಾನ್ ರಾಯಲ್ಸ್
ಬಟ್ಲರ್ ವಿಕೆಟ್ ಪಡೆಯಲು DRS ಮೊರೆ ಹೋಗಿದ್ದ ಕುಲ್ದೀಪ್
ಕೊನೆಗೂ ಡಿಆರ್ಎಸ್ನಲ್ಲಿ ಗೆದ್ದ ಪಂತ್, ವಿಡಿಯೋ ನೋಡಲೇಬೇಕು
ಐಪಿಎಲ್-2024ರ 9ನೇ ಪಂದ್ಯವು ರಾಜಸ್ಥಾನ ಜೈಪುರದಲ್ಲಿ ನಿನ್ನೆ ನಡೆಯಿತು. ರಾಜಸ್ಥಾನ್ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು.
ಮೊದಲು ರಾಜಸ್ಥಾನ್ ರಾಯಲ್ಸ್ ಬ್ಯಾಟಿಂಗ್ ಆರಂಭಿಸಿತ್ತು. 7.2ನೇ ಓವರ್ನಲ್ಲಿ ಕುಲ್ದೀಪ್ ಯಾದವ್ ಅವರು ಎದುರಾಳಿ ಜೋಶ್ ಬಟ್ಲರ್ಗೆ ಬಾಲ್ ಮಾಡಿ, ಎಲ್ಬಿಡಬ್ಲ್ಯೂಗೆ ಅಪೀಲ್ ಮಾಡಿದ್ದರು. ಆದರೆ ಅಂಪೈರ್, ಬಟ್ಲರ್ ಔಟ್ ಎಂದು ತೀರ್ಪು ಕೊಡಲು ನಿರಾಕರಿಸಿದರು.
ಇದರಿಂದ ರೊಚ್ಚಿಗೆದ್ದ ಕುಲ್ದೀಪ್ ಯಾದವ್, ಕ್ಯಾಪ್ಟನ್ ಪಂತ್ ಬಳಿ ಸಿಟ್ಟಿನಿಂದಲೇ ಬರುತ್ತಾರೆ. ಪಂತ್ ಅವರ ಎರಡೂ ಕೈಗಳನ್ನು ಹಿಡಿದು ಡಿಆರ್ಎಸ್ ತೆಗೆದುಕೊಳ್ಳು ಸ್ಟೈಲ್ನಲ್ಲಿ ಮೇಲೆತ್ತಿ, ಥರ್ಡ್ ಅಂಪೈರ್ಗೆ ಮನವಿ ಮಾಡುವಂತೆ ಸೂಚಿಸುತ್ತಾರೆ. ಸಣ್ಣ ನಗೆ ಬೀರಿದ ರಿಷಬ್ ಪಂತ್, ಡಿಆರ್ಎಸ್ ತೆಗೆದುಕೊಳ್ತಾರೆ. ಕೊನೆಗೂ ಕುಲ್ದೀಪ್ ಯಾದವ್, ಅವರ ಬಲವಾದ ನಂಬಿಕೆ ಸತ್ಯವಾಗಿದ್ದು, ಬಟ್ಲರ್ ಔಟ್ ಎಂದು ತೀರ್ಪು ಬಂತು.
ಇನ್ನು ನಿನ್ನೆಯ ಪಂದ್ಯವನ್ನ ದೆಹಲಿ ಕ್ಯಾಪಿಟಲ್ಸ್ ಕೈಚೆಲ್ಲಿದೆ. ಆರ್ಆರ್ 186 ರನ್ಗಳ ಟಾರ್ಗೆಟ್ ನೀಡಿತ್ತು. ಇದನ್ನು ಬೆನ್ನಟ್ಟಿದ ಪಂತ್ ಪಡೆ ನಿಗದಿತ ಓವರ್ನಲ್ಲಿ 173 ರನ್ಗಳಿಸಿ ಸೋಲನ್ನು ಒಪ್ಪಿಕೊಳ್ತು.
https://twitter.com/itzSekar/status/1773580009308877243
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್