ಪಂದ್ಯ ಸೋತ್ರೂ ವಿರಾಟ್ ಚಿನ್ನಸ್ವಾಮಿಯಲ್ಲಿ ವಿರಾಜಿಸಿದ್ದಾರೆ
ಕೆಕೆಆರ್ ವಿರುದ್ಧ ನರಸಿಂಹನ ಉಗ್ರರೂಪ ತಾಳಿದ್ದ ವಿರಾಟ್.!
ಐಪಿಎಲ್ ಟೂರ್ನಿಯಲ್ಲಿ ಬ್ಯಾಕ್ ಟು ಬ್ಯಾಕ್ ಅರ್ಧಶತಕ ಗರಿ
ಆರ್ಸಿಬಿಯ ಸತತ ಎರಡನೇ ಗೆಲುವಿಗೆ ಕೆಕೆಆರ್ ಅಡ್ಡಗಾಲಾಗಿದೆ. ವಿಕ್ಟರಿ ನಿರೀಕ್ಷೆಯಲ್ಲಿದ್ದ ಫ್ಯಾನ್ಸ್ ಬೇಸರ ಹೇಳತೀರದು. ಆದ್ರೆ ಪಂದ್ಯ ಸೋತ್ರೂ ವಿರಾಟ್ ಕೊಹ್ಲಿ ಚಿನ್ನಸ್ವಾಮಿ ಕಿಂಗ್ಡಮ್ನಲ್ಲಿ ವಿರಾಜಿಸಿದ್ದಾರೆ. ಸೋಲಿನಲ್ಲೂ ವಿರಾಟ್ ವೀರಾವೇಶ ಹೇಗಿತ್ತು
ಅಬ್ಬಬ್ಬಾ, ಅದೆಂಥಾ ವೀರಾವೇಶ, ಸಿಕ್ಸರ್-ಬೌಂಡರಿಗಳ ಮೊರೆತ. ನೆರೆದಿದ್ದ ಪ್ರೇಕ್ಷಕರಿಗೆ ಪಕ್ಕಾ ವಸೂಲಿ ಟ್ರೀಟ್ ಸಿಗ್ತು. ಬ್ಯಾಟಿಂಗ್ನಲ್ಲಿ ಸುನಾಮಿ-ಸುಂಟಗಾಳಿಯನ್ನೆ ಎಬ್ಬಿಸಿದ ವಿರಾಟ್ ಕೊಹ್ಲಿ ಚಿನ್ನಸ್ವಾಮಿ ನನ್ನ ಕಿಂಗ್ಡಮ್ ಅನ್ನೋದನ್ನ ಪ್ರೂವ್ ಮಾಡಿದ್ರು.
ಚಿನ್ನಸ್ವಾಮಿ ಕಿಂಗ್ಡಮ್ನಲ್ಲಿ ಕೊಹ್ಲಿ ರಣಾರ್ಭಟ..!
ಹೇಳಿಕೇಳಿ ಎಂ.ಚಿನ್ನಸ್ವಾಮಿ ಮೈದಾನ ಕೊಹ್ಲಿಯ ಕಿಂಗ್ಡಮ್. ಅಂದ್ಮೇಲೆ ವಿರಾಟ್ ಅಬ್ಬರ ಇರಲೇಬೇಕು ಅಲ್ವಾ?. ಕೆಕೆಆರ್ ವಿರುದ್ಧ ನರಸಿಂಹನ ಉಗ್ರರೂಪ ತಾಳಿದ ವಿರಾಟ್, ಸಿಕ್ಸರ್-ಬೌಂಡರಿಗಳ ಸರಮಾಲೆಯನ್ನ ಕಟ್ಟಿದ್ರು. ಕೊಹ್ಲಿ ಒಂದೊಂದು ಸಿಕ್ಸ್, ಬೌಂಡ್ರಿ ಸಿಡಿಸ್ತಿದ್ರೆ ಪ್ರೇಕ್ಷಕರು ಹುಚ್ಚೆದ್ದು ಕುಣಿದು ಕುಪ್ಪಳಿಸಿದ್ರು.
ತನ್ನ ಕಿಂಗ್ಡಮ್ನಲ್ಲಿ ಸತತ 2ನೇ ಹಾಫ್ಸೆಂಚುರಿ..!
ಕೆಕೆಆರ್ ಬೌಲರ್ಗಳ ಮೈಚಳಿ ಬಿಡಿಸಿದ ಕೊಹ್ಲಿ ಜಸ್ಟ್ 36 ಎಸೆತಗಳಲ್ಲಿ ಹಾಫ್ಸೆಂಚುರಿ ಕಂಪ್ಲೀಟ್ ಮಾಡಿದ್ರು. ಆ ಮೂಲಕ ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಬ್ಯಾಕ್ ಟು ಬ್ಯಾಕ್ ಅರ್ಧಶತಕ ಗಳಿಸಿದ್ರು. ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸಿಡಿಲಬ್ಬರದ 77 ರನ್ ಚಚ್ಚಿ ಶೈನ್ ಆಗಿದ್ರು.
ಫೇವರಿಟ್ ಗ್ರೌಂಡ್ನಲ್ಲಿ 22ನೇ ಅರ್ಧಶತಕ..!
ದಶಕಕ್ಕೂ ಅಧಿಕ ಕಾಲ ಕೊಹ್ಲಿ ಚಿನ್ನಸ್ವಾಮಿ ಕಿಂಗ್ಡಮ್ನಲ್ಲಿ ರಾಜನಂತೆ ಮೆರೆದಿದ್ದಾರೆ. ಕೆಕೆಆರ್ ಕೂಡ ವಿರಾಟ್ ವೀರಾವೇಶಕ್ಕೆ ಬ್ರೇಕ್ ಹಾಕಲು ಸಾಧ್ಯವಾಗ್ಲಿಲ್ಲ. ಸ್ಫೋಟಕ ಅರ್ಧಶತಕ ಪೂರೈಸಿದ ಕಿಂಗ್ ಕೊಹ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 22ನೇ ಹಾಫ್ಸೆಂಚುರಿ ಪೂರ್ಣಗೊಳಿಸಿದ್ರು.
ಗ್ರೀನ್-ಮ್ಯಾಕ್ಸ್ವೆಲ್ ಜೊತೆ ಭರ್ಜರಿ ಜೊತೆಯಾಟ
ಕೆಕೆಆರ್ ಮೇಲೆ ದಂಡೆತ್ತಿದ್ದ ಹೋದ ಕಿಂಗ್ ಕೊಹ್ಲಿ ಕ್ಯಾಮರೂನ್ ಗ್ರೀನ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಉತ್ತಮ ಜೊತೆಯಾಟ ಆಡಿ ಸೈ ಅನ್ನಿಸಿಕೊಂಡಿದ್ರು. ಗ್ರೀನ್ ಜೊತೆ ಕೂಡಿಕೊಂಡು ಬಿರುಸಿನ 65 ರನ್ ಕಲೆಹಾಕಿದ್ರೆ, ಕೊಹ್ಲಿ ಹಾಗೂ ಮ್ಯಾಕ್ಸ್ವೆಲ್ ಸಿಡಿಲಬ್ಬರದ 42 ರನ್ ಬಾರಿಸಿದ್ರು.
ಕೋಲ್ಕತ್ತಾಗೆ ಚಳ್ಳೆಹಣ್ಣು ತಿನ್ನಿಸಿದ ಛಲದಂಕ..!
ಮೊದಲ ಎಸೆತದಿಂದ ಕೊನೆ ಎಸೆತದ ತನಕ ಕೊಹ್ಲಿ, ಕೋಲ್ಕತ್ತಾಗೆ ದುಸ್ವಪ್ನರಾಗಿ ಕಾಡಿದ್ರು. ಒಂದೂವರೆ ಗಂಟೆ ಕಾಲ ಕೆಕೆಆರ್ ಬೌಲರ್ಸ್ ಬೆಂಡೆತ್ತಿದ ವಿರಾಟ್ 59 ಎಸೆತಗಳಲ್ಲಿ ವಿಸ್ಫೋಟಕ 83 ರನ್ ಗಳಿಸಿ ಅಜೇಯರಾಗುಳಿದ್ರು. ಆ ಮೂಲಕ ತವರಿನ ಪ್ರೇಕ್ಷಕರಿಗೆ ಮನರಂಜನೆ ಫುಲ್ ಮೀಲ್ಸ್ ಉಣಬಡಿಸಿದ್ರು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ