ರಿಲೇಷನ್ಶಿಪ್ ಬಗ್ಗೆ ಮಾತನಾಡಿದ ನಟ ವಿಜಯ್ ದೇವರಕೊಂಡ
ರಿಲೇಷನ್ಶಿಪ್ನಲ್ಲಿ ಇದ್ದೀರಾ ಎಂದಿದ್ದಕ್ಕೆ ಹೌದು ಎಂದ ಅರ್ಜುನ್ ರೆಡ್ಡಿ ನಟ
ವಿಜಯ್ ದೇವರಕೊಂಡ ಯಾರೊಂದಿಗೆ ರಿಲೇಷನ್ಶಿಪ್ನಲ್ಲಿದ್ದಾರೆ ಗೊತ್ತಾ?
ವಿಜಯ್ ದೇವರಕೊಂಡ ಸದಾ ಸುದ್ದಿಯಲ್ಲಿರುವ ನಟ. ಅದರಲ್ಲೂ ಡೇಟಿಂಗ್ ವಿಚಾರದಲ್ಲಿ ನಟನ ಹೆಸರು ಮುಂದಿರುತ್ತದೆ. ರಶ್ಮಿಕಾ ಮಂದಣ್ಣ ಮತ್ತು ವಿಜಯ್ ಡೇಟಿಂಗ್ ವಿಚಾರವಾಗಿ ಫ್ಯಾನ್ಸ್ ಆಗಾಗ ಚರ್ಚೆ ನಡೆಸುತ್ತಿರುತ್ತಾರೆ. ಆದರೀಗ ನಟ ತನ್ನ ಡೇಟಿಂಗ್ ವಿಚಾರವಾಗಿ ಅಚ್ಚರಿಯ ಮಾಹಿತಿ ಬಿಚ್ಚಿಟ್ಟಿದ್ದಾರೆ.
ರಶ್ಮಿಕಾ ಜೊತೆಗಿನ ಡೇಟಿಂಗ್ ಕುರಿತಾದ ಪ್ರಶ್ನೆ ವಿಜಯ್ ದೇವರಕೊಂಡಗೆ ಹೊಸದೇನಲ್ಲ. ನಟ ಸಿಕ್ಕಿದ ಸ್ಥಳಗಳಲ್ಲಿ ನೀವು ಯಾರೊಂದಿಗಾದರು ರಿಲೇಷನ್ಶಿಪ್ನಲ್ಲಿದ್ದೀರಾ? ಎಂಬ ಪ್ರಶ್ನೆ ಕೇಳಿಯೇ ಕೇಳುತ್ತಾರೆ. ಅದರಂತೆಯೇ ಮತ್ತೊಮ್ಮೆ ನಟನ ಬಾಯಿ ಬಿಡಿಸಲು ರಿಲೇಷನ್ಶಿಪ್ ವಿಚಾರವಾಗಿ ಪತ್ರಕರ್ತರು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಅರ್ಜುನ್ ರೆಡ್ಡಿ ನಟ ಏನಂದು ಹೇಳಿದ್ದಾರೆ ಗೊತ್ತಾ?.
ಹೌದು.. ಇದ್ದೇನೆ
ವಿಜಯ್ ನೀವು ಯಾರೊಂದಿಗಾದರೆ ರಿಲೇಶನ್ಶಿಪ್ನಲ್ಲಿದ್ದೀರಾ? ಎಂಬ ಪ್ರಶ್ನೆಗೆ ವಿಜಯ್ ಕೋಪಿಸದೆ ಹೌದು ಎಂದು ಹೇಳಿದ್ದಾರೆ. ನಾನು ನನ್ನ ಹೆತ್ತವರೊಂದಿಗೆ, ಸಹೋದರರೊಂದಿಗೆ, ನಿಮ್ಮೊಂದಿಗೆ ಸಂಬಂಧದಲ್ಲಿದ್ದೇನೆ ಎಂದು ಹೇಳಿದ್ದಾರೆ.
ಇನ್ನು ಜಪಾನ್ಗೆ ಹೋಗೋದಕ್ಕೂ ಮುನ್ನ ನಟಿ ರಶ್ಮಿಕಾ ಮಂದಣ್ಣ ವಿಜಯ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು. ‘ವಿಜಯ್ ಮತ್ತು ನಾಣು ಒಟ್ಟಿಗೆ ಬೆಳೆದಿದ್ದೇವೆ. ಹಾಗಾಗಿ ನನ್ನ ಜೀವನದಲ್ಲಿ ನಾನು ಏನು ಮಾಡಿದರೂ ಅದಕ್ಕೆ ಅವನ ಕೊಡುಗೆ ಇದೆ’ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ