ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳಿಗೆ ಕಾಡ್ತಿದೆ ಆ ಒಂದು ನೋವು..!
ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್ಗೆ ಇಳಿಯಲಿಲ್ಲ ಮಹೇಂದ್ರ ಧೋನಿ..!
ಐಪಿಎಲ್ನಲ್ಲಿ ಮಾಹಿ ಅರ್ಧಶತಕ ಸಿಡಿಸಿ ಆಯ್ತು 3 ವರ್ಷ
ಎಮ್.ಎಸ್.ಧೋನಿ. ಕ್ರೇಜ್ ಕಾ ಬಾಪ್. ಬಹುದಿನಗಳ ಅಂತರದ ಬಳಿಕ ಧೋನಿಯನ್ನ ಅಂಗಳದಲ್ಲಿ ಕಣ್ತುಂಬಿಕೊಳ್ಳುವ ಮೂಲಕ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಆದ್ರೆ, ಇದೇ ಫ್ಯಾನ್ಸ್ಗೆ ಬೇಸರವೂ ಆಗ್ತಿದೆ. ಅರೇ ಧೋನಿ, ಫ್ಯಾನ್ಸ್ಗೆ ಹೇಗೆ ನಿರಾಸೆ ಮಾಡಿದ್ರು ಅನ್ನೋದು ನಿಮ್ಮ ಪ್ರಶ್ನೆಯಾಗಿದ್ರೆ. ಅದಕ್ಕೆ ಈ ಸ್ಟೋರಿಯಲ್ಲಿದೆ ಉತ್ತರ.
ಸೀಸನ್ 17ರ ಇಂಡಿಯನ್ ಪ್ರೀಮಿಯರ್ ಲೀಗ್ ಕಾವೇರುತ್ತಿದೆ. ಹೈವೋಲ್ಟೇಜ್ ಮ್ಯಾಚ್ಗಳು, ಹೈಡ್ರಾಮಾಗಳು ಅಭಿಮಾನಿಗಳಿಗೆ ಸಖತ್ ಕಿಕ್ ನೀಡ್ತಿವೆ. ತಮ್ಮ ನೆಚ್ಚಿನ ಬ್ಯಾಟರ್ಗಳ ಆರ್ಭಟ ಕಣ್ತುಂಬಿಕೊಳ್ಳುತ್ತಿರುವ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಆದ್ರೆ, ಮಿಸ್ಟರ್ ಕೂಲ್ ಮಾಹಿ ಅಭಿಮಾನಿಗಳ ಆಸೆ ಮಾತ್ರ, ಈಡೇರುತ್ತಿಲ್ಲ.
ವಿಕೆಟ್ ಹಿಂದೆ ಧೋನಿ ಚಮತ್ಕಾರ.. ಫ್ಯಾನ್ಸ್ ಖುಷ್…!
ಈಗಾಗಲೇ ನಾಯಕತ್ವದಿಂದ ಕೆಳಗಿಳಿದು ನಿರಾಸೆ ಮೂಡಿಸಿದ್ರೂ, 42ರ ವಯಸ್ಸಿನಲ್ಲೂ ಧೋನಿ 22 ಯಾರ್ಡ್ನಲ್ಲಿ ಚಮತ್ಕಾರ ಮಾಡ್ತಿದ್ದಾರೆ. ವಿಕೆಟ್ ಹಿಂದೆ ಸ್ಟನ್ನಿಂಗ್ ಕ್ಯಾಚಿಂಗ್ ಹಿಡಿದು ಫ್ಯಾನ್ಸ್ ಮನ ಗೆಲ್ತಿದ್ದಾರೆ. ಈಗಾದ್ರೂ ಮಾಹಿ ಅಭಿಮಾನಿಗಳಿಗೆ ಮಾತ್ರ ಒಂದು ನೋವು ಕಾಡುತ್ತಿದೆ.
ಪ್ಲೀಸ್ ಮಾಹಿ.. ಬ್ಯಾಟಿಂಗ್ಗೆ ಬೇಗ ಬನ್ನಿ..!
ಧೋನಿ ಆಟ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಸ್ಟೇಡಿಯಂಗೆ ಬರ್ತಿದ್ದಾರೆ. ಮಾಹಿ ಜಪ ಝೇಂಕರಿಸುತ್ತಿದೆ. ಆದ್ರೆ, ಧೋನಿ ಬ್ಯಾಟ್ನಿಂದ ಬೌಂಡರಿ, ಸಿಕ್ಸರ್ಗಳ ಸುರಿಮಳೆ ನೋಡಬೇಕೆಂಬ ಫ್ಯಾನ್ಸ್ ಮನದಾಸೆ ಮಾತ್ರ ಈಡೇರ್ತಿಲ್ಲ. ಆಡಿದ ಎರಡೂ ಪಂದ್ಯಗಳಲ್ಲಿ ಧೋನಿ, ಬ್ಯಾಟಿಂಗ್ನಿಂದ ದೂರ ಉಳಿದಿದ್ದಾರೆ.
ಈ ಹಿಂದೆ 7ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡ್ತಿದ್ದ ಮಾಹಿ, ಈ ಸೀಸನ್ನ ಎರಡೂ ಪಂದ್ಯಗಳಲ್ಲಿ ಜಡೇಜಾ ಹಾಗೂ ಸಮೀರ್ ರಿಜ್ವಿಗೆ ಚಾನ್ಸ್ ನೀಡಿದ್ದಾರೆ. ಇದರಿಂದ ಧೋನಿಯ ಉಗ್ರವತಾರ ನೊಡಲು ಸಾಧ್ಯವಾಗದ ಫ್ಯಾನ್ಸ್, ಬ್ಯಾಟಿಂಗ್ ಬಡ್ತಿಗೆ ಮನವಿ ಮಾಡ್ತಿದ್ದಾರೆ.
ಕಳೆದ ಸೀಸನ್ನಲ್ಲೂ ಬ್ಯಾಟಿಂಗ್ನಿಂದ ದೂರ..!
ಕಳೆದ ವರ್ಷವೂ ಮಾಹಿ ಬ್ಯಾಟಿಂಗ್ನಿಂದ ಬಹುಪಾಲು ದೂರ ಉಳಿದಿದ್ರು. ಬ್ಯಾಟಿಂಗ್ ನಡೆಸಿದ್ದು ಜಸ್ಟ್ 12 ಇನ್ನಿಂಗ್ಸ್ಗಳಲ್ಲಿ ಮಾತ್ರ. ಎದುರಿಸಿದ್ದು ಕೇವಲ 57 ಎಸೆತ. 2022ರ ಓಪನಿಂಗ್ ಮ್ಯಾಚ್ನಲ್ಲಿ ಕೆಕೆಆರ್ ಎದುರಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದು ಬಿಟ್ರೆ, ಈವರೆಗೂ ಧೋನಿ ಬ್ಯಾಟ್ನಿಂದ ಸಿಂಗಲ್ ಫಿಫ್ಟಿ ಬಂದಿಲ್ಲ.
ಇದೇ ನಿಜವಾದ ಲೀಡರ್ ಕ್ವಾಲಿಟಿ.. ಸಲಾಂ ಮಾಹಿ ಭಾಯ್.!
ಈ ಹಿಂದೆ 4, 5, 6, 7ರ ಸ್ಲಾಟ್ನಲ್ಲಿ ಬ್ಯಾಟ್ ಬೀಸ್ತಿದ್ದ ಮಾಹಿ, ಇದೀಗ ತಂಡದಲ್ಲಿನ ಇತರೆ ಆಟಗಾರರಿಗೆ ಮುಂಬಡ್ತಿ ನೀಡ್ತಿದ್ದಾರೆ. ತಾನು ಕೊನೆ ಕ್ಷಣದಲ್ಲಿ ಫೀಲ್ಡ್ಗೆ ಇಳಿಯುತ್ತಿದ್ದಾರೆ. ಇದು ಸಹಜವಾಗೇ ಧೋನಿ ನಂಬರ್ ಡ್ರಾಪ್ಗೆ ಕಾರಣವಾಗಿದೆ.
ಬಹುತೇಕ ಇದು ಧೋನಿಯ ಕೊನೆ ಐಪಿಎಲ್ ಅನ್ನೋದು ಕನ್ಫರ್ಮ್ ಆಗಿದೆ. ಹೀಗಾಗಿ ಗ್ರೇಟ್ ಫಿನಿಷರ್ ಮಾಹಿಯ ಬ್ಯಾಟಿಂಗ್ ರೌದ್ರವತಾರ ನೋಡ್ಬೇಕು ಫ್ಯಾನ್ಸ್ ಮನದಾಸೆಯಾಗಿದೆ. ಈ ಹೆಬ್ಬಯಕೆನಾ ತಲಾ ಈಡೆರಿಸ್ತಾರಾ.? ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ