ಮತ್ತೆ ಫೋನ್ ಮಾಡು ಎಂದು ಮೊಬೈಲ್ ನಂಬರ್ ಕೊಟ್ಟಿದ್ದ ನೀಚ
ರಾತ್ರಿ ರಸ್ತೆಯಲ್ಲಿ ನಿಂತಿದ್ದ ಬಾಲಕಿಯನ್ನು ಕೂರಿಸಿಕೊಂಡು ಹೋಗಿದ್ದ
ನಗರದ ಸಂಬಂಧಿಕರ ಮನೆಯಲ್ಲಿ ಕೆಲ ದಿನ ಇರಲು ಬಂದಿದ್ದ ಬಾಲಕಿ
ಮುಂಬೈ: ಉಬರ್ ಕ್ಯಾಬ್ ಚಾಲಕನೋರ್ವ ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ನಗರದ ದಾದರ್ ಪ್ರದೇಶದಲ್ಲಿ ತಡರಾತ್ರಿ ನಡೆದಿದೆ.
ಸದ್ಯ ಈ ಘಟನೆ ಸಂಬಂಧ ಕ್ಯಾಬ್ ಚಾಲಕ ಮೊಹಮ್ಮದ್ ಜಲೀಲ್ ಖಲೀಲ್ (33)ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮಾನಸಿಕ ಅಸ್ವಸ್ಥಳಾದ 15 ವರ್ಷದ ಬಾಲಕಿ ತನ್ನ ಸಂಬಂಧಿಕರ ಜೊತಗಿರಲು ದಾದರ್ಗೆ ಬಂದಿದ್ದಳು. ಈ ವೇಳೆ ತಡರಾತ್ರಿ 1 ಗಂಟೆ ಸುಮಾರಿಗೆ ಶೌಚಕ್ಕೆ ಎಂದು ಮನೆಯಿಂದ ಹೊರ ಬಂದು ರಸ್ತೆಯಲ್ಲಿ ನಿಂತಿದ್ದಾಳೆ. ಆಗ ಬಾಲಕಿ ಒಬ್ಬಳೆ ಇರುವುದನ್ನು ಗುರುತಿಸಿದ ಆರೋಪಿ ಖಲೀಲ್ ಕಾರಿನಲ್ಲಿ ಮುಂಬೈನೆಲ್ಲ ತೋರಿಸುತ್ತೇನೆ ಎಂದು ಕರೆದುಕೊಂಡು ಹೋಗಿದ್ದಾನೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಮನೆಯಲ್ಲಿ ರಾತ್ರಿ ಕಾಣಿಸಿಕೊಂಡ ಬೆಂಕಿ.. ಉಸಿರುಗಟ್ಟಿ ಮಗು ಸೇರಿ ಒಂದೇ ಕುಟುಂಬದ ನಾಲ್ವರು ದುರ್ಮರಣ
ಬಳಿಕ ದಾದರ್ ವೆಸ್ಟ್ನ ಫ್ಲೈಓವರ್ ಬಳಿಯ ಗಲ್ಲಿಯೊಂದಕ್ಕೆ ಬಾಲಕಿಯನ್ನು ಕರೆದೊಯ್ದು ಅಲ್ಲಿ ಅತ್ಯಾಚಾರ ಎಸಗಿದ್ದಾನೆ. ಬಳಿಕ ಆಕೆಯನ್ನು ಕ್ಯಾಬ್ನಲ್ಲಿ ಕೂರಿಸಿಕೊಂಡು ವಾಪಸ್ ಅದೇ ಸ್ಥಳದಲ್ಲಿ ಬಿಟ್ಟು, ಮತ್ತೆ ಫೋನ್ ಮಾಡು ಎಂದು ಮೊಬೈಲ್ ನಂಬರ್ ಬರೆದುಕೊಟ್ಟು ಹೋಗಿದ್ದಾನೆ. ಮನೆಗೆ ವಾಪಸ್ ಆದ ಬಾಲಕಿ ನಡೆದ ಘಟನೆಯನ್ನು ಮನೆಯವರಿಗೆ ತಿಳಿಸಿದ್ದಾಳೆ. ಕುಟುಂಬಸ್ಥರು ತಕ್ಷಣ ದಾದರ್ ಪೊಲೀಸರಿಗೆ ಮಾಹಿತಿ ತಿಳಿಸಿ, ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದಾರೆ. ಸದ್ಯ ಸಿಸಿಟಿವಿ ಹಾಗೂ ಮೊಬೈಲ್ ನಂಬರ್ ಸಹಾಯದಿಂದ ಆರೋಪಿ ಖಲೀಲ್ನನ್ನು ಪೊಲೀಸರು ಪತ್ತೆ ಮಾಡಿ ಅರೆಸ್ಟ್ ಮಾಡಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ