ಮುಂಬೈಗೆ ವಕ್ರ ದೆಸೆ.. ಹ್ಯಾಟಿಕ್ ಸೋಲುಂಡ ಪಾಂಡ್ಯ ಪಡೆ
ಸತತ ಸೋಲಿನಿಂದ ಕಂಗೆಟ್ಟ ಮುಂಬೈ ಫ್ಯಾನ್ಸ್. ಪಾಂಡ್ಯ ವಿರುದ್ಧ ಘರ್ಜನೆ
ಪಾಂಡ್ಯ ಬೇಡ.. ರೋಹಿತ್ ಮತ್ತೆ ನಾಯಕನಾಗಲಿ ಎಂಬ ಮುಂಬೈ ಫ್ಯಾನ್ಸ್
ಮುಂಬೈಗೆ ಆದ್ಯಾವ ದೆಸೆಯೋ, ಆಡಿರುವ ಮೂರು ಪಂದ್ಯದಲ್ಲೂ ಮುಂಬೈ ತಂಡ ಹ್ಯಾಟ್ರಿಕ್ ಸೋಲು ಅನುಭವಿಸಿದೆ. ನಿನ್ನೆ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧವು ಸೋಲುಂಡಿದೆ. ಆದರೆ ಈ ಸೋಲನ್ನು ಅಭಿಮಾನಿಗಳು ನುಂಗಲಾರದೆ ಉಗುಳಿದ್ದಾರೆ. ನಾಯಕನ ಬದಲಾವಣೆ ಬಗ್ಗೆ ಮನಬಿಚ್ಚಿ ಮಾತನಾಡುತ್ತಿದ್ದಾರೆ.
ಹಾರ್ದಿಕ್ ಪಾಂಡ್ಯಗೆ ಈ ಬಾರಿಯ ಮುಂಬೈ ತಂಡದ ನಾಯಕತ್ವದ ಜವಾಬ್ದಾರಿ ನೀಡಿತ್ತು. ಆದರೆ ಯಾವ ದೆಸೆ ಕೈಕೊಡುತ್ತಿದೆಯೋ ಗೊತ್ತಿಲ್ಲ. ಆಡಿರುವ ಎಲ್ಲಾ ಪಂದ್ಯಗಳಲ್ಲೂ ಹಾರ್ದಿಕ್ ಟೀಂ ಎಡವುತ್ತಿದೆ. ಇದರಿಂದ ಅಭಿಮಾನಿಗಳು ನಾಯಕನ ಮೇಲೆ ಕಿಡಿಕಾರುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ, ಮುಂಬೈ ತಂಡದಲ್ಲಿರುವ ರೋಹಿತ್ ಶರ್ಮಾ ಮತ್ತೆ ನಾಯಕನಪಟ್ಟವೇರಬೇಕು ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಪಾಂಡ್ಯನನ್ನು ನಾಯಕತ್ವದಿಂದ ಕೆಳಗಿಳಿಸುವಂತೆ ಒತ್ತಾಯಿಸುತ್ತಿದ್ದಾರೆ.
ವಿಡಿಯೋ ಕೃಪೆ: ವೈರಲ್ ಬಾಲಿವುಡ್
Angry Mumbai Public reaction on yesterday’s match !
People are angry on hardik Pandya’s Captaincy and they want Rohit Sharma back as captain !pic.twitter.com/9llfPSZ3Gz
— ᴘʀᴀᴛʜᴍᴇsʜ⁴⁵ (@45Fan_Prathmesh) April 2, 2024
ಇದನ್ನೂ ಓದಿ: ಅರ್ಧ ಶತಕ ಬಾರಿಸಿದ ಮಗ ರಿಯಾನ್ ಪರಾಗ್.. ಓಡಿ ಹೋಗಿ ಅಪ್ಪಿಕೊಂಡು ಮುತ್ತಿಟ್ಟ ತಾಯಿ
ಒಟ್ಟಿನಲ್ಲಿ ಮುಂಬೈ ತಂಡ ಎಲ್ಲಿ ಎಡವುತ್ತಿದೆ? ಯಾವ ನಿರ್ಧಾರದಿಂದ ಸೋಲೊಪ್ಪಿಕೊಳ್ಳುತ್ತಿದೆ? ಎಂಬ ಬಗ್ಗೆ ಅಭಿಮಾನಿಗಳಿಗೆ ಒಂದು ಅಂದಾಜು ಸಿಕ್ಕಿದೆ. ಇದೇ ಕಾರಣದಿಂದ ಆಕ್ರೋಶ ಹೊರಹಾಕುತ್ತಿರುವ ಫ್ಯಾನ್ಸ್ ರೋಹಿತ್ ಶರ್ಮಾರನ್ನು ಮತ್ತೆ ನಾಯಕನನ್ನಾಗಿ ಕಾಣುವ ಆಸೆ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ