NDRF, SDRF ತಂಡಗಳಿಂದ ರಕ್ಷಣಾ ಕಾರ್ಯಾಚರಣೆ
16 ಅಡಿ ಆಳದಲ್ಲಿ ಸಿಲುಕಿರುವ 2 ವರ್ಷದ ಬಾಲಕ ಸಾತ್ವಿಕ್
ಸತತ 17 ಗಂಟೆಗಳಿಂದ ನಿರಂತರ ರಕ್ಷಣಾ ಕಾರ್ಯಾಚರಣೆ
ವಿಜಯಪುರ: 2 ವರ್ಷದ ಸಾತ್ವಿಕ್ನನ್ನು ರಕ್ಷಣೆ ಮಾಡಲು ಎನ್ಡಿಆರ್ಎಫ್, ಎಸ್ಡಿಆರ್ಎಫ್ ತಂಡಗಳಿಂದ ರಕ್ಷಣಾ ಕಾರ್ಯಾಚರಣೆ ವೇಗವಾಗಿ ನಡೆಯುತ್ತಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಮಗುವನ್ನ ಹೊರ ತೆಗೆಯಲಾಗುತ್ತದೆ. ಈಗಾಗಲೇ ಕೊಳವೆ ಬಾವಿಯಲ್ಲಿ ಸಿಲುಕಿಕೊಂಡಿರುವ ಮಗು ಅಳುತ್ತಿರುವ ಧ್ವನಿಯನ್ನು ರಕ್ಷಣೆ ಪಡೆ ಸಿಬ್ಬಂದಿ ಕೇಳಿಸಿಕೊಂಡಿದ್ದಾರೆ.
ಇದನ್ನೂ ಓದಿ: ವಿಜಯಪುರದಲ್ಲಿ ಕೊಳವೆ ಬಾವಿ ದುರಂತ ಇದೇ ಮೊದಲಲ್ಲ.. ಈ ಹಿಂದಿನ ಘಟನೆಗಳು ರಾಜ್ಯವನ್ನೇ ಕಣ್ಣೀರಲ್ಲಿ ತೇಲಿಸಿದ್ವು
ಇಂಡಿ ತಾಲೂಕಿನ ಲಚ್ಯಾನ ಗ್ರಾಮದ ತೋಟದಲ್ಲಿ ಆಟವಾಡುತ್ತಿದ್ದ ಕಂದ ಕೊಳವೆ ಬಾವಿಗೆ ಬಿದ್ದಿತ್ತು. ಈ ಸಂಬಂಧ NDRF, SDRF ತಂಡಗಳು ರಕ್ಷಣಾ ಕಾರ್ಯಾಚರಣೆಯ ವೇಗ ಹೆಚ್ಚಿಸಿವೆ. ರಕ್ಷಣೆ ಕಾರ್ಯ ಅಂತಿಮ ಘಟ್ಟ ತಲುಪಿದ್ದು ಕೆಲವೇ ಗಂಟೆಗಳಲ್ಲಿ ಮಗು ಹೊರತೆಗೆಯಲಿದ್ದಾರೆ. ಸತತ 17 ಗಂಟೆಗಳಿಂದ ಈ ರಕ್ಷಣಾ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಭೂಮಿಯನ್ನು ಅಗೆಯುವ ವೇಳೆ ಕಲ್ಲು ಬಂಡೆ ಅಡ್ಡಿಯಾಗಿದ್ರಿಂದ ರಕ್ಷಣಾ ಕಾರ್ಯದಲ್ಲಿ ಕೊಂಚ ವಿಳಂಬವಾಗಿದೆ. ಇದು ಬಿಟ್ಟರೇ ಎಲ್ಲವೂ ಸುಗಮವಾಗಿ ನಡೆಯುತ್ತಿದ್ದ ಕಾರಣ ಇನ್ನೇನು ಕೆಲವೇ ಕೆಲವು ಗಂಟೆಗಳಲ್ಲಿ ಸಾತ್ವಿಕ್ ಪ್ರಪಂಚವನ್ನು ಮರಳಿ ನೋಡಲಿದ್ದಾನೆ ಎಂಬ ಭರವಸೆ ಸಿಕ್ಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ