newsfirstkannada.com

×

ಸೆಂಟ್ರಲ್​ ಜೈಲಿನಲ್ಲೂ ಲಂಚ.. ಲಂಚ; ದುಡ್ಡು ಪೀಕುವ ಭ್ರಷ್ಟ ಕಾನ್​ಸ್ಟೆಬಲ್

Share :

Published April 5, 2024 at 1:32pm

Update April 5, 2024 at 1:36pm

    ವಿಡಿಯೋ ವೈರಲ್​ ಆಗಿದ್ದರಿಂದ ಬೆಚ್ಚಿಬಿದ್ದ ಮೇಲಾಧಿಕಾರಿಗಳು

    ಅಧಿಕಾರಿ ಲಂಚ ಪಡೆಯುತ್ತಿರುವುದನ್ನ ಸೆರೆ ಹಿಡಿದಿರುವ ಯುವಕ

    ಈ ಘಟನೆ ಸಂಬಂಧ ಮೇಲಾಧಿಕಾರಿಗಳು ತೆಗೆದುಕೊಂಡ ಕ್ರಮ?

ಭೋಪಾಲ್: ಖೈದಿಯನ್ನು ಭೇಟಿ ಮಾಡಲು ಬಂದ ವ್ಯಕ್ತಿಯಿಂದ ಜೈಲು ಸಿಬ್ಬಂದಿ ಲಂಚ ಪಡೆದಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್​ನ ಸೆಂಟ್ರಲ್​ ಜೈಲ್​ನಲ್ಲಿ ನಡೆದಿದೆ. ಸದ್ಯ ಲಂಚ ಪಡೆಯುತ್ತಿರುವ ದೃಶ್ಯವು ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಗ್ವಾಲಿಯರ್​ನ ಸೆಂಟ್ರಲ್​ ಜೈಲಿನ ಕಾನ್​ಸ್ಟೆಬಲ್​ ಸತ್ಯೇಂದ್ರ ಹರ್ಷ ಲಂಚ ಪಡೆದವರು. ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದರಿಂದ ಮೇಲಾಧಿಖಾರಿಗಳು ಬೆಚ್ಚಿ ಬಿದ್ದಿದ್ದು ಸಿಬ್ಬಂದಿಯನ್ನ ಅಮಾನತುಗೊಳಿಸಿದ್ದಾರೆ. ಈ ಸಂಬಂಧ ಕೂಡಲೇ ತನಿಖೆ ಕೈಗೊಂಡಿರುವ ಅಧಿಕಾರಿಗಳು ಸತ್ಯಸತ್ಯೆಯನ್ನು ತಿಳಿದುಕೊಳ್ಳಲು ಮುಂದಾಗಿದ್ದಾರೆ. ಅಲ್ಲದೇ ಸಿಸಿಟಿವಿ ಕ್ಯಾಮೆರಾ, ಮೊಬೈಲ್​ನಲ್ಲಿ ಸೆರೆಯಾದ ವಿಡಿಯೋ ಆಧಾರದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ. ಇದೇ ಜೈಲಿನಲ್ಲಿ ಈ ಹಿಂದೆಯು ಮಾದಕ ವಸ್ತುಗಳು, ಮೊಬೈಲ್​ ಫೋನ್​, ಹರಿತ ವಸ್ತುಗಳು ಪತ್ತೆಯಾಗಿದ್ದವು ಎಂದು ಹೇಳಲಾಗಿದೆ.

ಖೈದಿಗಳನ್ನು ನೋಡಲು ಬರುವ ಸಂಬಂಧಿಗಳಿಂದ ಲಂಚ ಪಡೆಯುವ ಜೈಲು ಸಿಬ್ಬಂದಿಯ ವಿಡಿಯೋ ಮಾಡುವಾಗ ಯುವಕ ಮಾತನಾಡಿದ್ದು, ನಾನು ಗ್ವಾಲಿಯರ್ ಜೈಲಿನಲ್ಲಿದ್ದೇನೆ. ನನ್ನ ಸಂಬಂಧಿಕರನ್ನು ಭೇಟಿ ಮಾಡಲು ಇಲ್ಲಿಗೆ ಬಂದಿದ್ದೇನೆ. ಆದರೆ ಜೈಲಾಧಿಕಾರಿಗೆ ಹಣ ಕೊಟ್ಟರೇ ಬೇಗ ಜೈಲಲ್ಲಿದ್ದವರನ್ನ ನೋಡಬಹುದು. ಇಲ್ಲದಿದ್ದರೇ ಸಂಜೆವರೆಗೆ ಕಾಯುಸುತ್ತಾರೆ. ಖೈದಿಗಳನ್ನು ಭೇಟಿ ಆಗಲು ಯಾವುದೇ ಹಣ ನೀಡುವ ಹಾಗಿಲ್ಲ. ಆದರೆ ಇಲ್ಲಿ ಲಂಚ ಕೊಟ್ಟರೆ ಮಾತ್ರ ಒಳಗಿದ್ದವರನ್ನು ನೋಡಲು ಬಿಡುತ್ತಾರೆ ಎಂದು ಯುವಕ ಆರೋಪಿಸಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೆಂಟ್ರಲ್​ ಜೈಲಿನಲ್ಲೂ ಲಂಚ.. ಲಂಚ; ದುಡ್ಡು ಪೀಕುವ ಭ್ರಷ್ಟ ಕಾನ್​ಸ್ಟೆಬಲ್

https://newsfirstlive.com/wp-content/uploads/2024/04/MP_BRIBE_PEDE.jpg

Load More