newsfirstkannada.com

×

ರಾಜಸ್ಥಾನ್ ರಾಯಲ್ಸ್​ಗೆ RCB ಚಮಕ್ ಕೊಡೋದು ಸುಲಭದ ಮಾತಲ್ಲ, ಅದಕ್ಕೆ ಕಾರಣ ಈ ನಾಲ್ವರು..!

Share :

Published April 6, 2024 at 10:48am

    ಇಂದು ರಾಯಲ್​ ಚಾಲೆಂಜರ್ಸ್​ಗೆ ರಾಜಸ್ಥಾನ್​ ಸವಾಲ್

    ಜೈಪುರಲ್ಲಿ ರಾಜಸ್ಥಾನ್​​ಗೆ ನೀಡುತ್ತಾ ಆರ್​ಸಿಬಿ ಚಮಕ್..?

    ಡಬಲ್ ಜೋಡೆತ್ತು... ಇವರಿಗೆ ಸಾಟಿನಾ ಆರ್​ಸಿಬಿ..?

ರಾಯಲ್ ಚಾಲೆಂಜರ್ಸ್ ವರ್ಸಸ್ ರಾಜಸ್ಥಾನ್ ರಾಯಲ್ಸ್​ ಫೈಟ್​​ಗೆ ಕೌಂಟ್​ಡೌನ್ ಶುರುವಾಗಿದೆ. ಸದ್ಯ 4ರಲ್ಲಿ 3 ಸೋಲುಂಡ ಆರ್​ಸಿಬಿ ಅತಂತ್ರಕ್ಕೂ ಸಿಲುಕಿದೆ. ಗೆಲುವಿನ ಆತ್ಮವಿಶ್ವಾಸದಲ್ಲಿ ಜೈಪುರಕ್ಕೆ ಬಂದಿರುವ ಆರ್​​ಸಿಬಿಯ, ಕನಸು ನನಸಾಗುವುದು ಮಾತ್ರ. ಸುಲಭವಾಗಿಲ್ಲ.

ಹೊಸ ಸವಾಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಜ್ಜಾಗಿದೆ. ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂ ರಾಯಲ್ ಚಾಲೆಂಜರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್​ ನಡುವಿನ ಮೆಗಾ ಫೈಟ್​​ಗೆ ವೇದಿಯಾಗಿದ್ದು, ಸೋಲಿಲ್ಲದ ಸರದಾರನಾಗಿ ಮುನ್ನಗ್ಗುತ್ತಿರುವ ರಾಜಸ್ಥಾನ್ ರಾಯಲ್ಸ್​, ತನ್ನ ತವರಿನ ಅಂಗಳದಲ್ಲೇ ಬ್ರೇಕ್​ ಹಾಕುವ ಲೆಕ್ಕಚಾರದಲ್ಲಿ ಆರ್​ಸಿಬಿ ರಣತಂತ್ರ ರೂಪಿಸಿದೆ. ಆದ್ರೆ, ಜೈಪುರಲ್ಲಿ ರಾಜಸ್ಥಾನ್​​ ರಾಯಲ್ಸ್​ಗೆ ಚಮಕ್ ನೀಡೋದು ಸುಲಭದ ಮಾತಲ್ಲ. ಇದಕ್ಕೆ ಕಾರಣ ನಾಲ್ವರು.

ಇದನ್ನೂ ಓದಿ:  ಫೀಲ್ಡಿಂಗ್​ಗೆ ಅಡ್ಡಿಪಡಿಸಿದ ಜಡೇಜಾ; ರನೌಟ್​​ಗೆ ಅಪೀಲ್ ಮಾಡದೇ ವಿವಾದಕ್ಕೆ ಸಿಲುಕಿಕೊಂಡ ಕಮ್ಮಿನ್ಸ್​..!

ಹೌದು! ರಾಜಸ್ತಾನ ರಾಯಲ್ಸ್​ ಎದುರು ಆರ್​ಸಿಬಿ ಗೆಲ್ಲಬೇಕಾದ್ರೆ, ರಾಜಸ್ಥಾನ್ ರಾಯಲ್ಸ್​ ತಂಡದಲ್ಲಿನ ಡಬಲ್ ಜೋಡೆತ್ತಿನ ಎದುರು ಮೇಲುಗೈ ಸಾಧಿಸಿದರಷ್ಟೇ ಸಾಧ್ಯ. ಇಲ್ಲ ಜೈಪುರದಲ್ಲೂ ರಾಯಲ್ ಚಾಲೆಂಜರ್ಸ್​ಗೆ ಸೋಲು ಕಟ್ಟಿಟ್ಟ ಬುತ್ತಿ.

ಟಾಪ್​ ಆರ್ಡರ್​​ ಬ್ಯಾಟರ್​​​ಗಳೇ ಫೈರಿ ಪೇಸರ್​ಗಳ ಟಾರ್ಗೆಟ್​
ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಮೊದಲ ಸವಾಲೇ ಲೆಫ್ಟಿ ಫೇಸರ್​ಗಳಾದ ಟ್ರೆಂಟ್ ಬೋಲ್ಟ್ ಆ್ಯಂಡ್​​ ನಾಂದ್ರೆ ಬರ್ಗರ್.. ಪವರ್​ ಪ್ಲೇನಲ್ಲಿ ಪವರ್ ಫುಲ್ ಸ್ಪೆಲ್ ನಡೆಸೋ ಈ ಜೋಡಿ, ಘಟನಾಘಟಿ ಬೌಲರ್​​​ಗಳ ನಿದ್ದೆ ಗೆಡಿಸೋದ್ರಲ್ಲಿ ಅನುಮಾನ ಇಲ್ಲ. 145ರ ವೇಗದಲ್ಲಿ ಚೆಂಡನ್ನ ಎಸೆಯಬಲ್ಲ ಇವರು, ಸ್ವಿಂಗ್, ಯಾರ್ಕರ್​​ ಎಸೆಯುವಲ್ಲಿ ನಿಸ್ಸೀಮರು.

ಅಷ್ಟೇ ಅಲ್ಲ, ರಾಜಸ್ಥಾನ್ ರಾಯಲ್ಸ್ ಪರ ವಿಕೆಟ್ ಟೇಕರ್​​ಗಳಾಗಿ ಮೆರೆದಾಡ್ತಿರುವ ಇವರು, ಮ್ಯಾಚ್ ವಿನ್ನರ್​ ಬೌಲರ್​ಗಳು ಆಗಿದ್ದಾರೆ. ಎದುರಾಳಿ ತಂಡದ ಟಾಪ್ ಆರ್ಡರ್ ಬ್ಯಾಟರ್​ಗಳನ್ನೇ ಟಾರ್ಗೆಟ್ ಮಾಡುವ ಇವರಿಗೆ, ಘಟಾನುಘಟಿ ಬ್ಯಾಟರ್​ಗಳ ವಿಕೆಟ್ ಬೇಟೆಯಾಡುವುದು ಕಷ್ಟದ ಮಾತಲ್ಲ. ಹೀಗಾಗಿ ಮೊದಲ 6 ಓವರ್​​ಗಳಲ್ಲಿ ಆರ್​ಸಿಬಿಯ ಟಾಪ್ ಆರ್ಡರ್​ ಎದೆಯೊಡ್ಡಿ ನಿಲ್ಲಬೇಕಿದೆ. ಅಕಸ್ಮಾತ್​​​​​​ ಇವರಿಬ್ಬರ ಸುಂಟರಗಾಳಿಗೆ ಸಿಕ್ಕರೆ, ಜೈಪುರದಲ್ಲೂ ಆರ್​ಸಿಬಿ ಉಡೀಸ್ ಗ್ಯಾರಂಟಿ.

ಇಬ್ಬರನ್ನ ಎದುರಿಸೋದೆ ಬಿಗ್ ಚಾಲೆಂಜ್​​..!
ಪವರ್​ ಪ್ಲೇನಲ್ಲಿ ಎಡಗೈ ವೇಗಿಗಳ ಕಾಟ ಎದುರಿಸಲಿರುವ ಆರ್​ಸಿಬಿಗೆ, ಮಿಡಲ್ ಓವರ್​ಗಳಲ್ಲಿ ಎದುರಾಗುವ ಸವಾಲೇ ಆಫ್ ಸ್ಪಿನ್ನರ್ ಆರ್​.ಅಶ್ವಿನ್ ಹಾಗೂ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್.. ಮಿಡಲ್ ಓವರ್​ಗಳಲ್ಲಿ ಜಾದು ಮಾಡೋ ಇವರು, ಆರ್​ಆರ್​ ತಂಡದ ಗೇಮ್​ ಚೇಂಜರ್​ಗಳಾಗಿದ್ದಾರೆ. ಹೀಗಾಗಿ ಮಿಡಲ್ ಓವರ್​ಗಳಲ್ಲಿ ಆರ್​ಸಿಬಿ ಪಾಲಿಗೆ ವಿಲನ್ಸ್ ಆದರೂ ಅಚ್ಚರಿ ಇಲ್ಲ.
ಈ ಡಬಲ್ ಜೋಡೆತ್ತು ಮಾತ್ರವೇ ಅಲ್ಲ.. ಮತ್ತೊಂದೆಡೆ ಐಪಿಎಲ್​ನಲ್ಲಿ ಅತಿ ಹೆಚ್ಚು ಬಾರಿ ಕಿಂಗ್ ಕೊಹ್ಲಿ, ವಿಕೆಟ್ ಬೇಟೆಯಾಡಿರೋ ಸ್ವಿಂಗ್ ಮಾಸ್ಟರ್​ ಸಂದೀಪ್ ಶರ್ಮಾ ಕಾಟವೂ ತಪ್ಪಿದ್ದಲ್ಲ. ಹೀಗಾಗಿ ಇವರಿಗೆ ಟಕ್ಕರ್ ನೀಡುವಂತ ಕ್ಲಾಸ್ ಬ್ಯಾಟಿಂಗ್ ಆರ್​ಸಿಬಿ ಬ್ಯಾಟ್ಸ್​​ಮನ್​​ಗಳಿಂದ ಬರಬೇಕಿದೆ.

ಇದನ್ನೂ ಓದಿ: ಮಂಗನ ದಾಳಿಯಿಂದ 15 ತಿಂಗಳದ ಮಗು ಕಾಪಾಡಲು Alexaಗೆ ಬೇಡಿಕೊಂಡ ಬಾಲಕಿ; ಆಮೇಲೆ ಏನಾಯ್ತು ಅಂದರೆ..

ವರ್ಲ್ಡ್​ ಕ್ಲಾಸ್ ಬೌಲರ್​ಗಳ ಎದುರು ಘರ್ಜಿಸುತ್ತಾ ಬ್ಯಾಟರ್ಸ್​..?

ಇಂದಿನ ಪಂದ್ಯದ ಬ್ಯಾಟಲ್​ ಅಂದ್ರೆ, ಅದು ಆರ್​ಸಿಬಿಯ ಬ್ಯಾಟಿಂಗ್ ವರ್ಸಸ್ ಆರ್​​ಆರ್​ ಬೌಲಿಂಗ್. ಆದ್ರೆ, ಈ ವರ್ಲ್ಡ್​ ಕ್ಲಾಸ್ ಬೌಲರ್​ಗಳ ಎದುರು ಘರ್ಜಿಸಬೇಕಾದ್ರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟಾಪ್ ಆರ್ಡರ್​ ಮೈಕೊಡವಿ ನಿಲ್ಲಬೇಕು. ಪ್ರಮುಖವಾಗಿ ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿ, ಮ್ಯಾಕ್ಸ್​ವೆಲ್, ಕ್ಯಾಮರೂನ್ ಗ್ರೀನ್ ಹೆಸರಿಗೆ ತಕ್ಕಂತ ಆಟವಾಡಬೇಕಿದೆ. ಇಲ್ಲ.! ಇಂದು ಮತ್ತೊಂದು ಸೋಲು ಅನುಭವಿಸೋದ್ರಲ್ಲಿ ಅನುಮಾನ ಇಲ್ಲ.

ವಿಶೇಷ ವರದಿ: ಸಂತೋಷ್

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ರಾಜಸ್ಥಾನ್ ರಾಯಲ್ಸ್​ಗೆ RCB ಚಮಕ್ ಕೊಡೋದು ಸುಲಭದ ಮಾತಲ್ಲ, ಅದಕ್ಕೆ ಕಾರಣ ಈ ನಾಲ್ವರು..!

https://newsfirstlive.com/wp-content/uploads/2024/04/RCB-21.jpg

Load More