ರೌಡಿಶೀಟರ್ ಓಪನ್ ಮಾಡಿ ಎಚ್ಚರಿಕೆ ಕೊಟ್ಟಿದ್ದಾರೆ ಡೋಂಟ್ಕೇರ್
ವಿರೋಧ ವ್ಯಕ್ತಪಡಿಸಿದ್ರೆ ನಿಮ್ಮ ಕಾರಿನ ಗ್ಲಾಸ್ ಉಡೀಸ್ ಮಾಡ್ತಾರೆ
ಸೇಫ್ ಅಂತ ಕಾರುಗಳಲ್ಲಿ ಹೋದ್ರು, ತಪ್ಪಿಲ್ಲ ಕಿಡಿಗೇಡಿಗಳ ಕಾಟ
ಬೆಂಗಳೂರು: ರೋಡ್ ರೇಜ್. ಈ ಪದ ಕೇಳಿದ್ರೆ ಸಾಕು ಸಿಲಿಕಾನ್ ಸಿಟಿ ಮಂದಿ ಬೆಚ್ಚಿ ಬೀಳುವಂತಾಗಿದೆ. ತಮ್ಮ ಪಾಡಿಗೆ ತಾವು ರಸ್ತೆಯಲ್ಲಿ ಓಡಾಡಂಗಿಲ್ಲ. ತಮ್ಮಿಷ್ಟದ ಊರಿಗೆ ತೆರಳಂಗಿಲ್ಲ. ಆ ರೀತಿಯ ವಾತಾವರಣ ನಿರ್ಮಾಣವಾಗ್ಬಿಟ್ಟಿದೆ. ಬೈಕ್ ಹೋಗಲಿ, ಕಾರ್ಗಳು ಕೂಡ ಸೇಫ್ ಇಲ್ಲ. ಕಳೆದ ಮೂರು ತಿಂಗಳಲ್ಲಿ ದಾಖಲಾದ ರೋಡ್ ರೇಜ್ ಪ್ರಕರಣ ಇಂತದ್ದೊಂದು ಭಯಾನಕ ದೃಶ್ಯ ಬಿಚ್ಚಿಟ್ಟಿದೆ.
ಇದನ್ನೂ ಓದಿ: ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡ್ತಿದ್ದಾರಾ ನಟ ಸುದೀಪ್ ಮಗಳು? ಏನಿದು ಸಾನ್ವಿ ಸ್ಟೋರಿ?
ಸಿಲಿಕಾನ್ ಸಿಟಿ, ಉದ್ಯಾನನಗರಿ, ಹೈಟೆಕ್ ಸಿಟಿ ಅಂತೆಲ್ಲಾ ಹೆಸರು ಪಡೆದಿರುವ ಬೆಂಗಳೂರು ಅದ್ಯಾಕೋ ಬರ ಬರುತ್ತಾ ಡೆಂಜರಸ್ ಸಿಟಿಯಾಗಿ ಬದಲಾಗ್ತಾಯಿದೆ. ಇದಕ್ಕೆ ಕಾರಣ ರಾಜ್ಯ ರಾಜಧಾನಿಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ರೋಡ್ ರೇಜ್ ಪ್ರಕರಣಗಳು. ಬೈಕ್ಗಳಲ್ಲಿ ಹೋಗೋರನ್ನು ನಿರ್ಜನ ಪ್ರದೇಶಗಳಲ್ಲಿ ತಡೆದು ಹಲ್ಲೆ ಮಾಡ್ತಿದ್ದ ವರದಿಗಳು ದಾಖಲಾಗ್ತಿದ್ದಾಗಲೇ ದಂಗಾಗಿದ್ದ ಜನರಿಗೆ ಇದೀಗ ಕಾರ್ ಕೂಡ ಸೇಫ್ ಅಲ್ಲ ಅನ್ನೋ ಮಟ್ಟಿಗೆ ಕಿಡಿಗೇಡಿಗಳ ಕಾಟ ಕಂಟಕವಾಗ್ಬಿಟ್ಟಿದೆ.
ಘಟನೆ: 1
ಅಪಘಾತ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ವ್ಯಕ್ತಿಯ ಹತ್ಯೆಗೆ ಯತ್ನ
ಸರ್ಕಲ್ ಮಾರಮ್ಮ ದೇವಸ್ಥಾನ ಸರ್ಕಲ್ನಲ್ಲಿ ನಡೆದ ಘಟನೆ
ಕಾರಿನಿಂದ ಇಳಿದು ಬಂದ ಚಾಲಕನಿಗೆ ಗುದ್ದಿ ಹತ್ಯೆಗೆ ಯತ್ನ
ಘಟನೆ 2
ಬೈಕ್ ಅಡ್ಡಾದಿಡ್ಡಿಯಾಗಿ ಓಡಿಸಿ ಬೈಕ್ ಸವಾರನಿಂದ ಪುಂಡಾಟ
ಸರ್ಜಾಪುರ ರಸ್ತೆ ಸಿಂಗೇನಹಳ್ಳಿಯ ಬಳಿ ನಡೆದ ಘಟನೆ
ಕಾರಿಗೆ ದಾರಿ ಬಿಡದೆ ದಂಪತಿ ಮುಂದೆ ಬೈಕ್ ಸವಾರನ ದುರ್ವರ್ತನೆ
ಘಟನೆ 3
ಕಾರ್ ಟಚ್ ಆಯ್ತು ಅಂತ ಕ್ಯಾಬ್ ಚಾಲಕನಿಂದ ಗಲಾಟೆ
ಬೆಂಗಳೂರಿನ ಹೆಬ್ಬಾಳ ಫ್ಲೈ ಓವರ್ ಮೇಲೆ ನಡೆದ ಘಟನೆ
ಗಲಾಟೆ ವೇಳೆ ಚಾಲಕ ಪ್ಯಾಂಟ್ ಜಿಪ್ ಬಿಚ್ಚಿ ಅಸಭ್ಯ ವರ್ತನೆ
ಘಟನೆ 4
ಇಂಡಿಕೇಟರ್ ಆಫ್ ಮಾಡು ಅಂದಿದಕ್ಕೆ ಕಾರು ಅಡ್ಡಗಟ್ಟಿ ಗಲಾಟೆ
ಕುಡಿದ ಮತ್ತಿನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆಟೋ ಚಾಲಕ
ಬೇಗೂರು – ಯೆಲೇನಹಳ್ಳಿ ಮುಖ್ಯ ರಸ್ತೆಯಲ್ಲಿ ನಡೆದಿರುವ ಘಟನೆ
ಘಟನೆ 5

ಜ.15ಕ್ಕೆ ಸರ್ಜಾಪುರ ರಸ್ತೆ ಸಿಂಗೇನಹಳ್ಳಿಯ ಬಳಿ ನಡೆದ ಘಟನೆ

ಘಟನೆ 6
ಕಾರು ಚೇಸ್ ಮಾಡಿ ಬಂದು ಕಿರುಕುಳ ನೀಡಿದ ಪುಂಡರು
ಕೋರಮಂಗಲದಲ್ಲಿ ದಂಪತಿ ಕಾರ್ಗೆ ಡಿಕ್ಕಿ ಹೊಡೆದು ಗಲಾಟೆ
ಟ್ರಿಬಲ್ ರೈಡಿಂಗ್ನಲ್ಲಿ ಬಂದು ಕಾರಿನ ಡೋರ್ ತೆರೆಯಲು ಯತ್ನ
ಘಟನೆ 7
ರಂಕಾ ಕಾಲೋನಿ ಬಳಿ ಇಬ್ಬರು ಯುವಕರಿಂದ ಗಲಾಟೆ
ಕಾರಿಗೆ ಬೈಕ್ ಅಡ್ಡ ತಂದು ಕಾರು ಚಾಲಕನ ಮೇಲೆ ಹಲ್ಲೆ
ಕುಡಿದು ಬಂದು ಹಲ್ಲೆ ನಡೆಸಿದ ಇಬ್ಬರು ದುಷ್ಕರ್ಮಿಗಳು
ಒಂದಲ್ಲ ಎರಡಲ್ಲ ಇಂತಹ ಹತ್ತಾರು ಘಟನೆಗಳು ನಡೆಯುತ್ತಲಿದೆ. ಅಚ್ಚರಿ ಅಂದ್ರೆ ಇದೇ ರೀತಿ ಬೆಳಕಿಗೆ ಬಾರದ ಅದೆಷ್ಟೋ ಕೇಸ್ಗಳು ಬೆಂದಕಾಳುರಲ್ಲಿ ನಿತ್ಯವೂ ಸಂಭವಿಸುತ್ತಿದೆ. ಕೆಲವೊಂದು ಕೃತ್ಯಗಳಲ್ಲಿ ಕೇಸ್ ದಾಖಲಾಗ್ತಾಯಿದ್ರೆ ಮತ್ತೆ ಹಲವು ಪೊಲೀಸ್, ಕೋರ್ಟ್ ಅನ್ನೋ ಗೋಜಿಗೆ ಹೋಗುವ ಕಿರಿ ಕಿರಿ ಬೇಡ ಅಂತ ಜನ ಸುಮ್ಮನಾಗ್ತಿದ್ದಾರೆ. ವಿಪರ್ಯಾಸ ಅಂದ್ರೆ, ಇಂತಹ ದುರುಳರ ವಿರುದ್ಧ ರೌಡಿಶೀಟ್ ಓಪನ್ ಮಾಡೋ ಎಚ್ಚರಿಕೆಯನ್ನ ಪೊಲೀಸರು ಕೊಟ್ಟಿದ್ರು ಡೋಂಟ್ ಕೇರ್ ಅಂತಿದ್ದಾರೆ ಕಿಡಿಗೇಡಿಗಳು. ರಸ್ತೆಗಳಲ್ಲಿ ಕಾರಣಗಳನೇ ಹುಡುಕುತ್ತಾ. ಚೇಸಿಂಗ್, ಬೆದರಿಕೆ, ರಾಬರಿ, ಹಲ್ಲೆ ಮಾಡೋರಿಗೆ ತಕ್ಕ ಶಾಸ್ತಿ ಯಾವಾಗ? ಜನ ನೆಮ್ಮದಿಯಾಗಿ ಓಡಾಡೋದು ಯಾವಾಗ? ಅನ್ನೋದೇ ಸದ್ಯದ ಪ್ರಶ್ನೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ