ಬಿಗ್ಬಾಸ್ ಮೂಲಕ ಸಾಕಷ್ಟು ಫ್ಯಾನ್ಸ್ಗಳನ್ನ ಗಳಿಸಿಕೊಂಡ ಬೆಂಕಿ
ಬಿಗ್ಬಾಸ್ ಸೀಸನ್ 10ಕ್ಕೆ ಎಂಟ್ರಿ ಕೊಟ್ಟಿದ್ದ ನಟಿ ತನಿಷಾ ಕುಪ್ಪಂಡ
ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ಈ ಫೋಟೋಸ್
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10ರ ಸ್ಪರ್ಧಿಗಳು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಅದರಲ್ಲೂ ತನಿಷಾ ಕುಪ್ಪಂಡ ಅವರು ತಮ್ಮ ಹೊಸ ಹೊಸ ಫೋಟೋಶೂಟ್ಗಳ ಮೂಲಕ ಅಭಿಮಾನಿಗಳ ಗಮನವನ್ನು ಸೆಳೆಯುತ್ತಾರೆ.
ಇದನ್ನೂ ಓದಿ: ಬಿಗ್ಬಾಸ್ ಮುಗಿದ ಬೆನ್ನಲ್ಲೇ ಹೊಸ ಅಧ್ಯಾಯ ಆರಂಭಿಸಿದ ಬೆಂಕಿ ತನಿಷಾ; ಏನದು ಗೊತ್ತಾ?
ಹೌದು, ಬಿಗ್ಬಾಸ್ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದ ತನಿಷಾ ಅವರು ಬೆಂಕಿ ಅಂತಲೇ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡಿದ್ದರು. ಇದೀಗ ಬಿಗ್ಬಾಸ್ ಮುಕ್ತಾಯದ ಬಳಿಕ ತಮ್ಮ ಬಹುದಿನದ ಆಸೆಯನ್ನು ಈಡೇರಿಸಿಕೊಂಡಿದ್ದರು. ಮೊನ್ನೆ ಮೊನ್ನೆಯಷ್ಟೇ ತನಿಷಾ ಕುಪ್ಪಂಡ ಅವರು ವಿಜಯನಗರ ಕ್ಲಬ್ ರೋಡ್ನಲ್ಲಿ ಹೊಸ ಸಿಲ್ವರ್ ಜ್ಯುವೆಲರಿ ಶಾಪ್ವೊಂದನ್ನು ಆರಂಭ ಮಾಡಿದ್ದರು. ಆ ಶಾಪ್ ಉದ್ಘಾಟನೆ ಸಮಾರಂಭಕ್ಕೆ ಬಿಗ್ಬಾಸ್ನ ಎಲ್ಲ ಸ್ಪರ್ಧಿಗಳು ಬಂದಿದ್ದರು.
View this post on Instagram
ಇದೀಗ ಅದೇ ಸಿಲ್ವರ್ ಜ್ಯುವೆಲರಿ ಶಾಪ್ನಲ್ಲಿ ಹೊಸ ಫೋಟೋಶೂಟ್ವೊಂದನ್ನು ಮಾಡಿಸಿಕೊಂಡಿದ್ದಾರೆ. ಆ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇನ್ನು, ಫೋಟೋಸ್ ನೋಡಿದ ಅಭಿಮಾನಿಗಳು ನಮ್ಮ ಬೆಂಕಿ ಅಂದ್ರೆ ಸುಮ್ಮೇನಾ, ಲೇಡಿ ಸೂಪರ್ ಸ್ಟಾರ್ ನಮ್ಮ ತನಿಷಾ, ಎಷ್ಟು ಚಂದ ನಮ್ಮ ಹುಡುಗಿ ಸೂಪರ್ ಅಂತಾ ಭಿನ್ನ ವಿಭಿನ್ನವಾಗಿ ಕಾಮೆಂಟ್ ಮಾಡಿದ್ದಾರೆ. ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ