newsfirstkannada.com

PUC Result: ಅಪ್ಪ-ಅಮ್ಮ ರೈತಾಪಿ ಕೆಲಸ.. ಬಡತನದಲ್ಲಿ ಅರಳಿದ ಪ್ರತಿಭೆ ಸೌಂದರ್ಯ..!

Share :

Published April 10, 2024 at 2:23pm

    ಮಲಘಾಣ ಗ್ರಾಮದ ಪಿಯು ಕಾಲೇಜಿನ ವಿದ್ಯಾರ್ಥಿನಿ ಸಾಧನೆ

    ಕಲಾ ವಿಭಾಗದಲ್ಲಿ ವಿದ್ಯಾರ್ಥಿನಿಯು ಎಷ್ಟನೇ ಸ್ಥಾನ ಪಡೆದಿದ್ದಾರೆ?

    ಸಂಗಮ್ಮ ಸಿನ್ನೂರು, ಬನಶಂಕರಿ, ಶ್ರೀಲತಾ ಟಾಪ್​ನಲ್ಲಿ ಪಾಸ್

ವಿಜಯಪುರ: ಇಂದು ದ್ವೀತಿಯ ಪಿಯುಸಿ ಫಲಿತಾಂಶ ಬಿಡುಗಡೆ ಮಾಡಲಾಗಿದೆ. ಕಲಾ ವಿಭಾಗದಲ್ಲಿ ಸಿಂದಗಿ ತಾಲೂಕಿನ ಮಲಘಾಣ ಗ್ರಾಮದ ಶರಣ ಬಸವೇಶ್ವರ ಪಿಯು ಕಾಲೇಜಿನ ವಿದ್ಯಾರ್ಥಿನಿ ಸೌಂದರ್ಯ ಹಚಡದ ಇಡೀ ರಾಜ್ಯಕ್ಕೆ 9ನೇ ಸ್ಥಾನ ಪಡೆದುಕೊಂಡಿದ್ದಾರೆ.

ಸೌಂದರ್ಯ ಹಚಡದ ಅವರು ಜಿಲ್ಲೆಯ ಸಿಂದಗಿ ತಾಲೂಕಿನ ಸೋಮಜಾಳ ಗ್ರಾಮದವರಾಗಿದ್ದು ತಾಲೂಕಿನ ಮಲಘಾಣ ಗ್ರಾಮದ ಶರಣ ಬಸವೇಶ್ವರ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ರಿಲೀಸ್ ಆಗಿರುವ ಪಿಯುಸಿ ಫಲಿತಾಂಶದ ಕಲಾ ವಿಭಾಗದಲ್ಲಿ ಸೌಂದರ್ಯ ಇಡೀ ರಾಜ್ಯಕ್ಕೆ 9ನೇ ಸ್ಥಾನ ಪಡೆದುಕೊಂಡಿದ್ದಾರೆ. ಇದರಿಂದ ಅವರ ಪೋಷಕರು ಖುಷಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ 18.28 ಕೋಟಿ ರೂಪಾಯಿ ಮೌಲ್ಯದ ವಸ್ತುಗಳು ಸೀಜ್.. ಎಷ್ಟು ಕೋಟಿ ಹಣ ಸೀಜ್ ಮಾಡಲಾಗಿದೆ..?

ಸೌಂದರ್ಯ ತಂದೆ ಹಾಗೂ ತಾಯಿ ರೈತಾಪಿ ಕುಟುಂಬದವರಾಗಿದ್ದು ಮಗಳು ರ್ಯಾಂಕ್​ನಲ್ಲಿ ಪಾಸ್​ ಆಗಿದ್ದಕ್ಕೆ ಮನೆಯಲ್ಲಿ ಸೌಂದರ್ಯಗೆ ಅವರ ಅಜ್ಜಿ ಸಿಹಿ ತಿನಿಸಿ ಸಂಭ್ರಮಿಸಿದ್ದಾರೆ. ಇಷ್ಟೊಂದು ಅಂಕ ಪಡೆಯಲು ಶಿಕ್ಷಕರು ಹಾಗೂ ಪೋಷಕರ ಸಹಕಾರ ಇತ್ತು. ಎಲ್ಲ ಶಿಕ್ಷಕರ ಬೆಂಬಲ ಕೂಡ ನನಗೆ ಇದ್ದಿದ್ದರಿಂದ ಉನ್ನತ ಮಟ್ಟದಲ್ಲಿ ಪಾಸ್ ಆಗಲು ಕಾರಣವಾಗಿದೆ. ಇಷ್ಟೊಂದು ಅಂಕಗಳನ್ನು ಪಡೆಯಲು ಸಹಕಾರ ಮಾಡಿದ ಶಿಕ್ಷಕರಿಗೂ, ನಮ್ಮ ಕುಟುಂಬದವರಿಗೂ ತುಂಬು ಹೃದಯ ಪೂರ್ವಕ ಧನ್ಯವಾದ ಎಂದು ವಿದ್ಯಾರ್ಥಿನಿ ಹೇಳಿದ್ದಾರೆ.

ಇದನ್ನೂ ಓದಿ: ವಾಂಖೆಡೆಯಲ್ಲಿ ವಿರಾಟ್​ V/S ರೋಹಿತ್​ ಬ್ಯಾಟಲ್.. ಹಿಟ್​ ಮ್ಯಾನ್​ ಸಾಮ್ರಾಜ್ಯದಲ್ಲಿ ಕಿಂಗ್ ಕೊಹ್ಲಿ ಆರ್ಭಟ ಹೇಗಿರುತ್ತೆ?

ಸಿಂದಗಿ ತಾಲೂಕಿನ ದೇವರ ನಾವದಗಿ ಗ್ರಾಮದ ಗುಗ್ಗರಿ ಕಾಲೇಜಿನ ವಿದ್ಯಾರ್ಥಿನಿ ಸಂಗಮ್ಮ ಸಿನ್ನೂರು ರಾಜ್ಯದಲ್ಲಿ 11ನೇ ಸ್ಥಾನ‌ ಪಡೆದುಕೊಂಡಿದ್ದಾರೆ. ಮತ್ತೆ ಇದೇ ಕಾಲೇಜಿನ ಮತ್ತೊಬ್ಬ ವಿದ್ಯಾರ್ಥಿನಿ ಬನಶಂಕರಿ ರಾಜ್ಯಕ್ಕೆ 13ನೇ ರ್ಯಾಂಕ್ ಬಂದಿದ್ದಾರೆ. ಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿ ಗ್ರಾಮದ ಬ್ಯಾಕೋಡ ಪಿಯು ಕಾಲೇಜಿನ ವಿದ್ಯಾರ್ಥಿನಿ ಶ್ರೀಲತಾ ಲಿಂಗಾರೆಡ್ಡಿ ರಾಜ್ಯಕ್ಕೆ 17ನೇ ರ್ಯಾಂಕ್ ಪಡೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

PUC Result: ಅಪ್ಪ-ಅಮ್ಮ ರೈತಾಪಿ ಕೆಲಸ.. ಬಡತನದಲ್ಲಿ ಅರಳಿದ ಪ್ರತಿಭೆ ಸೌಂದರ್ಯ..!

https://newsfirstlive.com/wp-content/uploads/2024/04/PUC_SOUNDARYA_9TH_RANK.jpg

Load More