ಆರ್ಸಿಬಿ ಅಭಿಮಾನಿಯ ಮೊಯೆ.. ಮೊಯೆ.. ಕಥೆ..!
ಆರ್ಸಿಬಿ ಬೆಂಬಲಿಸಲು ಸ್ಟೇಡಿಯಂಗೆ ಬಂದ ಅಭಿಮಾನಿ
ಮ್ಯಾಚ್ ನೋಡಲು ಹೋಗಿ ಫಜೀತಿಗೆ ಸಿಲುಕಿದ ಫ್ಯಾನ್
ಅದ್ಯಾವ ಜನ್ಮದ ಪುಣ್ಯವೋ ಗೊತ್ತಿಲ್ಲ. ವಿಶ್ವದಲ್ಲೇ ಯಾವ ಫ್ರಾಂಚೈಸಿಗೂ ಸಿಗದಂತಹ ಅಪರೂಪದ ಫ್ಯಾನ್ಸ್ ಆರ್ಸಿಬಿಗೆ ಸಿಕ್ಕಿದ್ದಾರೆ. 16 ಸೀಸನ್ಗಳಿಂದ ಕಪ್ ಗೆದ್ದಿಲ್ಲ. ಹಾಗಂತ ಅಭಿಮಾನಿಗಳು, ಅಭಿಮಾನ ಎರಡೂ ಕಡಿಮೆಯಾಗಿಲ್ಲ. ಈ ಸೀಸನ್ನಲ್ಲೂ ಆರ್ಸಿಬಿ ಸೋಲಿನ ಸುಳಿಗೆ ಸಿಲುಕಿ ಹೀನಾಯ ಸ್ಥಿತಿ ತಲುಪಿದೆ. ಆದ್ರೂ, ಆರ್ಸಿಬಿ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಇಲ್ಲೊಬ್ರು ಫ್ಯಾನ್ ಆರ್ಸಿಬಿಗೆ ಜೈ ಅನ್ನೋಕೆ ಹೋಗಿ ಫಜೀತಿಗೆ ಸಿಲುಕಿದ್ದಾರೆ.
ಸೋಲು.. ಸೋಲು.. ಸೋಲು.. ಹ್ಯಾಟ್ರಿಕ್ ಸೋಲಿನಿಂದ ಆರ್ಸಿಬಿ ಜರ್ಜರಿತವಾಗಿದೆ. ಕಳಪೆ ಫಾರ್ಮ್ನ ಸುಳಿಗೆ ಸಿಲುಕಿ ಆಟಗಾರರು ಕಂಗೆಟ್ಟಿದ್ದಾರೆ. ಫ್ಲೇ ಆಫ್ ಹಾದಿ ದರ್ಗಮವಾದ ಬೆನ್ನಲ್ಲೇ ಮ್ಯಾನೇಜ್ಮೆಂಟ್ ತಲೆ ಮೇಲೆ ಕೈ ಹೊತ್ತು ಕೂತಿದೆ. ಅಭಿಮಾನಿಗಳು ಆಕ್ರೋಶದ ಮಾತುಗಳನ್ನಾಡ್ತಾ, ಅಸಮಾಧಾನ ಹೊರ ಹಾಕ್ತಿದ್ದಾರೆ. ಆದ್ರ ಜೊತೆಗೆ ಪ್ರೀತಿಯನ್ನೂ ನೀಡ್ತಿದ್ದಾರೆ.
ಇದನ್ನೂ ಓದಿ: ಬಿಡದಿ ಮನೆಯ ‘ಹೊಸ ತೊಡಕು ಪಾಲಿಟಿಕ್ಸ್’ಗೆ ಹೊಸ ತಿರುವು; ಕುಮಾರಸ್ವಾಮಿಗೆ ಬಿಗ್ ಶಾಕ್ ಕೊಟ್ಟ ಎಲೆಕ್ಷನ್ ಕಮಿಷನ್
ಹೆಸರು ನೇಹಾ ದ್ವಿವೇದಿ. ಆರ್ಸಿಬಿಯ ಹಾರ್ಡ್ಕೋರ್ ಅಭಿಮಾನಿ. ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿರೋ ಇವರು, ಆರ್ಸಿಬಿ-ಲಕ್ನೋ ಮ್ಯಾಚ್ ನೋಡಲು ಹೋಗಿ ಇದೀಗ ಪಜೀತಿಗೆ ಸಿಲುಕಿದ್ದಾರೆ.
ಕೆಲಸಕ್ಕೆ ಚಕ್ಕರ್, ಮ್ಯಾಚ್ಗೆ ಹಾಜರ್, ಫಜೀತಿಗೆ ಸಿಲುಕಿದ ಫ್ಯಾನ್..!
ಏಪ್ರಿಲ್ 2 ರಂದು ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯವನ್ನ ಕಣ್ತುಂಬಿಕೊಳ್ಳಲು ಇವ್ರು ಸ್ಟೇಡಿಯಂಗೆ ಬಂದಿದ್ರು. ಮಂಗಳವಾರ..ವೀಕ್ ಡೇ ಬೇರೆ.. ಬೆಳಗ್ಗೆ ಇವ್ರು ಆಫೀಸ್ಗೆ ಕೆಲಸಕ್ಕೆ ಇವ್ರು ಹೋಗಿದ್ರು. ಸಂಜೆ ಮ್ಯಾಚ್ಗೆ ಹೋಗಬೇಕಲ್ವಾ.. ಅದಕ್ಕಾಗಿ ಮ್ಯಾನೇಜರ್ ಹತ್ರ ಒಂದು ಸುಳ್ಳು ಹೇಳಿದ್ರು. ಫ್ಯಾಮಿಲಿ ಎಮರ್ಜೆನ್ಸಿ ಅಂತಾ ಕಾರಣ ಕೊಟ್ಟು ಚಕ್ಕರ್ ಹಾಕಿ ಸ್ಟೇಡಿಯಂಗೆ ಬಂದಿದ್ರು.
ಫ್ಯಾಮಿಲಿ ಎಮರ್ಜೆನ್ಸಿ ಎಂದು ಸ್ಟೇಡಿಯಂಗೆ ಎಂಟ್ರಿ
ಎಲ್ಲಾ ಪ್ಲಾನ್ ಪ್ರಕಾರವೇ ನಡೆದಿತ್ತು.. ಆದ್ರೆ, ಪಂದ್ಯದ 16.3ನೇ ಓವರ್ನಲ್ಲಿ ಅನುಜ್ ರಾವತ್ ಪೂರನ್ ಕ್ಯಾಚ್ನ ಡ್ರಾಪ್ ಮಾಡಿದ್ರು. ಇದ್ರಿಂದ ಆರ್ಸಿಬಿ ಫ್ಯಾನ್ಸ್ಗೆ ತೀವ್ರ ನಿರಾಸೆಯಾಯ್ತು. ಸ್ಟೇಡಿಯಂನಲ್ಲಿದ್ದ ನೇಹಾ ಕೂಡ ಬೇಸರ ವ್ಯಕ್ತಪಡಿಸಿದ್ರು. ಈ ರಿಯಾಕ್ಷನ್ ಕ್ಯಾಮರಾದಲ್ಲಿ ಸೆರೆಯಾಯ್ತು. ಅಲ್ಲೇ ಆಗಿದ್ದು ನೋಡಿ ಯಡವಟ್ಟು. ರಿಯಲ್ Moye Moye Moment ಅಂದ್ರೆ ಇದೇ ಇರ್ಬೆಕು ಕಣ್ರಿ.. ಆರಂಭದಲ್ಲಿ 2 ಸೆಕೆಂಡ್, ರೀಪ್ಲೇನಲ್ಲಿ 2 ಸೆಕೆಂಡ್, ಟೂಟಲ್ ಆಗಿ 4 ಸೆಕೆಂಡ್ ಸ್ಕ್ರೀನ್ನಲ್ಲಿ ನೇಹಾ ಕಾಣಿಸಿಕೊಂಡರು. ಇವ್ರ ದುರಾದೃಷ್ಟಕ್ಕೆ ಅವ್ರ ಮ್ಯಾನೇಜರ್ ಕೂಡ ಆಗಲೇ ಮ್ಯಾಚ್ ನೋಡಿದ್ದಾರೆ.
ಇದನ್ನೂ ಓದಿ: ತವರಲ್ಲೂ, ತವರಿನಾಚೆಯೂ ಮುಖಭಂಗ.. RCBಗೆ ಇರೋ ಮುಂದಿನ ಸವಾಲುಗಳು ಏನು?
ಈ ಫುಲ್ ಕಹಾನಿಯನ್ನ ನೇಹಾ ತಮ್ಮ ಇನ್ಸ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಟಿವಿಯಲ್ಲಿ ನೋಡಿದ ಬಳಿಕ ಮ್ಯಾನೇಜರ್ ಚಾಟ್ ಮಾಡಿದ ಸ್ಕ್ರೀನ್ ಶಾಟ್ ಕೂಡ ಹಂಚಿಕೊಂಡಿದ್ದಾರೆ. ಇವರೊಬ್ಬರೇ ಅಲ್ಲ.. ಇವ್ರ ತರಾನೇ ಸುಳ್ಳು ಹೇಳಿ ಸ್ಟೇಡಿಯಂಗೆ ಮಾತ್ರವಲ್ಲ. ಟಿವಿಯಲ್ಲಿ ಮ್ಯಾಚ್ ನೋಡೋಕೆ ಕೂಡ ಚಕ್ಕರ್ ಹಾಕೋ ಆರ್ಸಿಬಿ ಅಭಿಮಾನಿಗಳಿಗೆ ಬರವಿಲ್ಲ. ಆದ್ರೆ, ಆಟಗಾರರು ಮಾತ್ರ ಇದ್ಯಾವುದನ್ನೂ ಲೆಕ್ಕಿಸದೇ ಕಳಪೆ ಪರ್ಫಾಮೆನ್ಸ್ ನೀಡ್ತಿದ್ದಾರೆ. ಅಪರಿಮಿತ ಪ್ರೀತಿ, ಅಭಿಮಾನವನ್ನ ಆಟಗಾರರು ಮುಂದಾದ್ರೂ ಅರ್ಥ ಮಾಡಿಕೊಳ್ಳಬೇಕಿದೆ.
ಇದನ್ನೂ ಓದಿ: ಮಹಿಳೆ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿ, ಆಕೆ ವಿರುದ್ಧವೇ ಕೇಸ್ ದಾಖಲಿಸಿದ BMTC ಕಂಡಕ್ಟರ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್