ಮೊನ್ನೆಯಷ್ಟೇ ಸೀಮಂತ ಕಾರ್ಯಕ್ರಮ ಮಾಡಿಕೊಂಡ ನಟಿ ಸಿರಿ ರಾಜು
ಸತ್ಯ ಸೀರಿಯಲ್ ಮೂಲಕ ಅಮೂಲ್ ಬೇಬಿ ಎಂದು ಖ್ಯಾತಿ ಪಡೆದ ನಟ
ನಟ ಸಾಗರ್ ಬಿಳಿಗೌಡ ಅವರ ಕುಟುಂಬಸ್ಥರಲ್ಲಿ ಮನೆ ಮಾಡಿದ ಸಂಭ್ರಮ
ಸತ್ಯ ಸೀರಿಯಲ್ ಅಮೂಲ್ ಬೇಬಿ ಖ್ಯಾತಿಯ ಸಾಗರ್ ಬಿಳಿಗೌಡ ಅವರ ಕುಟುಂಬಸ್ಥರಲ್ಲಿ ಸಂಭ್ರಮ ಮನೆ ಮಾಡಿದೆ. ಸಾಗರ್ ಬಿಳಿಗೌಡ ಹಾಗೂ ಸಿರಿ ರಾಜು ಅವರ ಮನೆಗೆ ಮಹಾಲಕ್ಷ್ಮೀ ಆಗಮನವಾಗಿದೆ. ಸಾಗರ್ ಬಿಳಿಗೌಡ ಅವರಿಗೆ ಅಪ್ಪನ ಸ್ಥಾನ ಕರುಣಿಸಿದ್ದಾಳೆ ಪುಟ್ಟ ಕಂದಮ್ಮ.
ಇದನ್ನೂ ಓದಿ: ನಿಶ್ಚಿತಾರ್ಥ ದಿನವೇ ಕಾರು ಅಪಘಾತದಲ್ಲಿ ನಟ ಸಾವು; ಇಬ್ಬರು ಗಂಭೀರ
ಹೌದು, ಮೊನ್ನೆ ಮೊನ್ನೆಯಷ್ಟೇ ನಟಿ ಸಿರಿ ರಾಜು ಅವರು ಶಾಸ್ತ್ರೋಕ್ತವಾಗಿ ತಮ್ಮ ಸೀಮಂತ ಕಾರ್ಯಕ್ರಮ ನೆರವೇರಿಸಿಕೊಂಡಿದ್ದರು. ಇದೀಗ ಸತ್ಯ ಧಾರಾವಾಹಿಯ ಅಮೂಲ್ಯ ಬೇಬಿ ಕಾರ್ತಿಕ್ ಪಾತ್ರದ ಮೂಲಕ ಸಾಗರ್ ವೀಕ್ಷಕರ ಅಚ್ಚುಮೆಚ್ಚಿನ ನಟ. ಅಮೂಲ್ ಬೇಬೆ ಅನ್ನೋ ಹೆಸರು ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡೋಕೆ ಕಾರಣ ಇವರ ಪಾತ್ರವನ್ನ ಕಟ್ಟಿಕೊಟ್ಟ ರೀತಿ, ಹಾಗೂ ಸತ್ಯ ಪ್ರೀತಿ.
ನಿಜ ಜೀವನದಲ್ಲಿ ಸಾಗರ್ ನಟಿ ಕಮ್ ಮಾಡೆಲ್, ಫ್ಯಾಷನ್ ಡಿಸೈನರ್ ಆಗಿರೋ ಸಿರಿ ಅವರನ್ನ ಕಳೆದ ವರ್ಷ ವರಸಿದ್ದರು. ಒಂದು ವರ್ಷದಲ್ಲಿ ಅಪ್ಪ-ಅಮ್ಮ ಆಗಿ ಬಡ್ತಿ ಪಡೆದಿದೆ ಜೋಡಿ. ಸಿರಿ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಯುಗಾದಿ ಹಬ್ಬದ ದಿನ ಮಗಳನ್ನ ಬರಮಾಡಿಕೊಂಡಿದೆ ಸಾಗರ್ ಕುಟುಂಬ. ಈ ಬಗ್ಗೆ ಸಿರಿ ಅವರು, ಯುಗಾದಿ ದಿನವೇ ನಮ್ಮ ಪುಟ್ಟ ಏಂಜಲ್ ಧರಗಿಳಿದಿದ್ದಾಳೆ ಎಂದು ಸಂತಸ ಹಂಚಿಕೊಂಡಿದ್ದಾರೆ. ಸಾಗರ್-ಸಿರಿ ಮುದ್ದಾದ ಜೋಡಿ ಸಂತಸದಲ್ಲಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ ಸಾಗರ್. ಈ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ ಶುಭ ಹಾರೈಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ