ಪುಷ್ಪ 2 ಸೀಕ್ವೆಲ್ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿರೋ ಫ್ಯಾನ್ಸ್
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹುಟ್ಟುಹಬ್ಬದಂದೇ ಪುಷ್ಪ-2 ಟೀಸರ್ ಔಟ್
ಅಭಿಮಾನಿಗಳ ಮೈ ರೋಮಾಂಚನಗೊಳಿಸುವಂತಿದೆ ಸ್ಟೈಲೀಶ್ ಸ್ಟಾರ್ ನಟನೆ
ಟಾಲಿವುಡ್ ಡ್ಯಾಷಿಂಗ್ ಡೈರೆಕ್ಟರ್ ಸುಕುಮಾರ್ ಹಾಗೂ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತೊಮ್ಮೆ ಬಾಕ್ಸಾ ಆಫೀಸ್ ಉಡೀಸ್ ಮಾಡೋದಿಕ್ಕೆ ಭರ್ಜರಿಯಾಗಿ ಸಜ್ಜಾಗ್ತಿದ್ದಾರೆ. ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2: ದಿ ರೂಲ್ ಸಿನಿಮಾಗಾಗಿ ಎಲ್ಲಾ ಸಿನಿ ಪ್ರಿಯರು ಕಾತುರದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ: ಅಬ್ಬಾ..! ಮಹಾಕಾಳಿ ಅವತಾರದಲ್ಲಿ ಅಬ್ಬರಿಸಿದ ಅಲ್ಲು ಅರ್ಜುನ್.. ಪುಷ್ಪ-2 ಸಿನಿಮಾದ ಟೀಸರ್ ಔಟ್
ಮೊನ್ನೆಯಷ್ಟೇ ಅಲ್ಲು ಅರ್ಜುನ್ ಹುಟ್ಟುಹಬ್ಬದ ಪ್ರಯುಕ್ತ ಪುಷ್ಪ 2 ದಿ ರೂಲ್ ಸಿನಿಮಾದ ಟೀಸರ್ ರಿಲೀಸ್ ಆಗಿತ್ತು. ರಿಲೀಸ್ ಆಗಿ ಕೆಲವೇ ಗಂಟೆಗಳಲ್ಲಿ ಮಿಲಿಯನ್ ಗಟ್ಟಲೆ ವೀವ್ಸ್ ಕೂಡ ಪಡೆದುಕೊಂಡಿತ್ತು. ಹೀಗಾಗಿ ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಸುಕುಮಾರ್ ಕಾಂಬಿನೇಷನ್ ಪುಷ್ಪ 2: ದಿ ರೂಲ್ ಸಿನಿಮಾದ ಮೇಲೆ ಅಭಿಮಾನಿಗಳಲ್ಲಿ ನಿರೀಕ್ಷೆ ದುಪ್ಪಟ್ಟಾಗಿದೆ.
ಇನ್ನು, ರಿಲೀಸ್ ಆಗಿದ್ದ ಟೀಸರ್ನಲ್ಲಿ ಅಲ್ಲು ಅರ್ಜುನ್ ಗಂಗಮ್ಮ ಜಾತ್ರೆಯಲ್ಲಿ ಕಾಳಿ ಅವತಾರದಲ್ಲಿ ಸೀರೆಯುಟ್ಟು ಫೈಟಿಂಗ್ ಮಾಡಿದ್ದರು. ಆಗ ನೆಟ್ಟಿಗರ ಗಮನ ಗಂಗಮ್ಮ ಜಾತ್ರೆಯ ಸೆಟ್ ಮೇಲೆ ನೆರೆದಿತ್ತು. ಇದೀಗ ಈ ಸೆಟ್ ಬಗ್ಗೆಯೇ ಸಾಮಾಜಿಕ ಜಾಲತಾಣದಲ್ಲಿ ಜೋರು ಚರ್ಚೆ ಶುರುವಾಗಿದೆ. ಹೌದು, ಪುಷ್ಪ 2: ದಿ ರೂಲ್ ಸಿನಿಮಾದ ಗಂಗಮ್ಮ ಜಾತ್ರೆಯ ಸೀನ್ಗಾಗಿಯೇ ಡೈರೆಕ್ಟರ್ ಸುಕುಮಾರ್ ಅವರು ಬರೋಬ್ಬರಿ 60 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆಯಂತೆ.
ಇದನ್ನೂ ಓದಿ: ಚುನಾವಣೆ ಹೊತ್ತಲ್ಲಿ ಉಪಮುಖ್ಯಮಂತ್ರಿ ಶಿವಕುಮಾರ್ಗೆ ಬಿಗ್ ಶಾಕ್ ಕೊಟ್ಟ ಲೋಕಾಯುಕ್ತ..!
ಇದನ್ನೂ ಓದಿ: ರಾವಣನ ಪಾತ್ರದಲ್ಲಿ ಯಶ್ ನಟಿಸುತ್ತಿಲ್ಲ, ಆದರೆ.. ಬಾಲಿವುಡ್ನ ರಾಮಾಯಣ ಚಿತ್ರದಲ್ಲಿ ಯಶ್ ಪಾತ್ರ ಏನು..?
ಸದ್ಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪುಪ್ಪ 2 ಸಿನಿಮಾ ಆಗಸ್ಟ್ 15ರಂದು ತೆರೆಗೆ ಬರಲಿದ್ದು, ಇನ್ನು ಬಹುನೀರಿಕ್ಷಿತ ಸಿನಿಮಾದಲ್ಲಿ ಅಲ್ಲು ಅರ್ಜುನ್ಗೆ ಜೋಡಿಯಾಗಿ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಸೇರಿದಂತೆ ಧನಂಜಯ, ಫಹಾದ್ ಫಾಸಿಲ್, ಜಗದೀಶ್ ಪ್ರತಾಪ್ ಭಂಡಾರಿ, ಜಗಪತಿ ಬಾಬು, ರಾವ್ ರಮೇಶ್, ಅಜಯ್, ಮೈಮ್ ಗೋಪಿ, ಸುನಿಲ್, ಅನಸೂಯಾ ಭಾರದ್ವಾಜ್, ಶ್ರೀತೇಜ್, ಬ್ರಹ್ಮಾಜಿ ಮುಂತಾದವರು ನಟಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ