ತಾರಕಕ್ಕೇರಿದ 2024ರ ಲೋಕಸಭಾ ಚುನಾವಣಾ ಹೈವೋಲ್ಟೇಜ್ ಕಣ
ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅಳಿಯ!
ಖರ್ಗೆ ಅಳಿಯ ರಾಧಾಕೃಷ್ಣ ದೊಡ್ಡಮನಿ ಬಳಿ ಇರೋ ಆಸ್ತಿ ಎಷ್ಟು?
ಕಲಬುರಗಿ: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಕಾವು ಜೋರಾಗಿದೆ. ಅದರಲ್ಲೂ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವ್ರ ಅಳಿಯ ರಾಧಾಕೃಷ್ಣ ದೊಡ್ಡಮನಿ ಕಣಕ್ಕಿಳಿದಿದ್ದಾರೆ. ಇವರ ವಿರುದ್ಧ ಕಣದಲ್ಲಿ ಬಿಜೆಪಿ ಸಂಸದ ಉಮೇಶ್ ಜಾಧವ್ ಇದ್ದಾರೆ. ಇಂದು ರಾಧಾಕೃಷ್ಣ ದೊಡ್ಡಮನಿ ನಾಮಪತ್ರ ಸಲ್ಲಿಕೆ ಮಾಡಿದ್ದು, 30 ಕೋಟಿ ಆಸ್ತಿ ಘೋಷಣೆ ಮಾಡಿದ್ದಾರೆ.
ಹೌದು, ರಾಧಾಕೃಷ್ಣ ದೊಡ್ಡಮನಿ ಮತ್ತವರ ಪತ್ನಿ ಜಯಶ್ರೀ ಕೋಟಿ ಕೋಟಿ ಆಸ್ತಿ ಘೋಷಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಬಳಿ ಒಟ್ಟು 29.48 ಕೋಟಿ ಆಸ್ತಿ ಇದೆ. ಸುಮಾರ 4.18 ಕೋಟಿ ಸಾಲ ಪಡೆದಿದ್ದಾರೆ. ಇವರ ಹೆಸರಲ್ಲಿ ಇನ್ನೋವಾ, ಬುಲೆರೋ, 250 ಗ್ರಾಮ್ ಚಿನ್ನ, 6 ಕೆಜಿ ಬೆಳ್ಳಿ ಇದೆ. ಇಷ್ಟೇ ಅಲ್ಲ ಬರೋಬ್ಬರಿ 18 ಎಕರೆ ಕೃಷಿ ಜಮೀನು ಹೊಂದಿದ್ದಾರೆ.
ಇನ್ನು, 16.32 ಕೋಟಿ ಮೌಲ್ಯದ ಕೃಷಿಯೇತರ ಜಮೀನು ಇದೆ. 2.59 ಕೋಟಿ ಮೌಲ್ಯದ ವಾಣಿಜ್ಯ ಕಟ್ಟಡ ಕೂಡ ಇದೆ. ಮತ್ತೊಂದೆಡೆ ರಾಧಾಕೃಷ್ಣ ಪತ್ನಿ ಡಾ. ಜಯಶ್ರೀ ಅವರು 13.03 ಕೋಟಿ ಆಸ್ತಿಗೆ ಒಡತಿ ಆಗಿದ್ದಾರೆ. ಇವರ ಬಳಿ 810 ಗ್ರಾಮ್ ಚಿನ್ನ, 11 ಕೆಜಿ ಬೆಳ್ಳಿ ಇದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಹೈದರಾಬಾದ್ ವಿರುದ್ಧ ಪಂದ್ಯಕ್ಕೆ ಮುನ್ನವೇ ಆರ್ಸಿಬಿಗೆ ಬಿಗ್ ಶಾಕ್; ಸ್ಟಾರ್ ಪ್ಲೇಯರ್ ಔಟ್!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್