ಒಂದಲ್ಲ.. ಎರಡಲ್ಲ.. ಬರೋಬ್ಬರಿ ಐದು ಸೋಲು..
ಬೆಂಗಳೂರಿನ ಪ್ಲೇ-ಆಫ್ ಕನಸು ಕಮರಿತಾ..?
ಹಾರ್ಡ್ ವರ್ಕ್ ಜೊತೆ ಕೈ ಹಿಡಿಯಬೇಕು ಲಕ್
ಸೀಸನ್-17ರ ಐಪಿಎಲ್ ಕಾವೇರುತ್ತಿದೆ. ಬಿಸಿಲ ದಗೆಯಂತೆ ಪಂದ್ಯಗಳ ಹೈವೋಲ್ಟೇಜ್ ಟಚ್ ಪಡೆದುಕೊಳ್ತಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರಿಸ್ಥಿತಿ ಮಾತ್ರ ಭಿನ್ನವಾಗಿದೆ. ಇದಕ್ಕೆ ಕಾರಣ ಸಾಲು ಸಾಲು ಹೀನಾಯ ಸೋಲುಗಳು.. ಈ ಹೀನಾಯ ಸೋಲುಗಳೇ, ರೆಡ್ ಆರ್ಮಿಯ ಗತಿ ಏನಾಪ್ಪಾ ಎಂಬ ಪ್ರಶ್ನೆ ಉದ್ಭವಿಸುವಂತೆ ಮಾಡಿದೆ.
ಒಂದಲ್ಲ.. ಎರಡಲ್ಲ.. ಬರೋಬ್ಬರಿ ಐದು ಸೋಲು..
ಈ ಐದು ಸೋಲುಗಳೇ ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಸಂಕಷ್ಟಕ್ಕೆ ದೂಡಿದೆ. ಮುಂಬೈ ಇಂಡಿಯನ್ಸ್ ಎದುರಿನ ದಯನೀಯ ಸೋಲಿನ ಬಳಿಕವಂತೂ ಆರ್ಸಿಬಿಯ ಪ್ಲೇ-ಆಫ್ ಕನಸನ್ನೇ ಕಮರುವಂತೆ ಮಾಡಿದೆ. ಕೋಟ್ಯಾಂತರ ಅಭಿಮಾನಿಗಳು ಆರ್ಸಿಬಿ ಮೇಲಿನ ಆಸೆಯನ್ನೇ ಕೈಬಿಟ್ಟಿದ್ದಾರೆ. ಆದ್ರೆ, ಆರ್ಸಿಬಿಯ ದಾರಿ ಮಾತ್ರ ಮುಚ್ಚಿಲ್ಲ. ಈ ವಿಚಾರಗಳನ್ನ ಚಾಚು ತಪ್ಪದೆ ಪಾಲಿಸಿದ್ರೆ ಪ್ಲೇಆಫ್ಗೇರುವುದು ಕಷ್ಟವೇನಲ್ಲ.
ಇದನ್ನೂ ಓದಿ: ಎಲೆಕ್ಷನ್ ನಂತರ ಕಾದಿದೆ ಬೆಲೆ ಏರಿಕೆ ಬಿಸಿ; ಮೊಬೈಲ್ ಬಳಕೆ ತುಂಬಾನೇ ಕಷ್ಟ ಅಂತಿದೆ ಈ ವರದಿ..!
ಪ್ರತಿ ಮ್ಯಾಚ್ನ ಗೆಲುವು ಅನಿವಾರ್ಯ..!
ಸದ್ಯ 6 ಪಂದ್ಯಗಳನ್ನಾಡಿರುವ ಆರ್ಸಿಬಿ ಕೇವಲ ಒಂದರಲ್ಲಷ್ಟೇ ಗೆದ್ದು ಬೀಗಿದೆ. ಹೀಗಾಗಿ ಮುಂದಿನ ಪ್ರತಿ ಮ್ಯಾಚ್ ಡು ಆರ್ ಡೈ ಆಗಿದೆ. ಮುಂದಿನ 8 ಪಂದ್ಯಗಳ ಪೈಕಿ ಕನಿಷ್ಠ 7ರಲ್ಲಿ ಗೆಲುವಿನ ದಡ ಸೇರಿದ್ರಷ್ಟೇ ಆರ್ಸಿಬಿಯ ಪ್ಲೇ-ಆಫ್ ಜೀವಂತ. ಇಲ್ಲ ಆರ್ಸಿಬಿಯ ಫ್ಲೇ-ಆಫ್ ಡೋರ್ ಕಂಪ್ಲೀಟ್ ಕ್ಲೋಸ್ ಆಗೋದು ಗ್ಯಾರಂಟಿ. ಹೀಗಾಗಿ ಗೆಲುವೊಂದೇ ಆರ್ಸಿಬಿಯ ಗುರಿ..
ಗೆಲುವಿನ ಜೊತೆ ರನ್ರೇಟ್ ಅತಿ ಮುಖ್ಯ..!
ಆರ್ಸಿಬಿಗೆ ಗೆಲುವೊಂದೇ ಟಾರ್ಗೆಟ್ ಅಲ್ಲ.. ಗೆಲುವಿನ ಜೊತೆಗೆ ರನ್ರೇಟ್ ಕಾಯ್ದಕೊಳ್ಳುವುದು ಮೋಸ್ಟ್ ಇಂಪಾರ್ಟೆಂಟ್. ಈಗಾಗಲೇ ಮೈನಸ್ ಹೊಂದಿರುವ ಆರ್ಸಿಬಿ, ಮುಂದಿನ ಪಂದ್ಯಗಳನ್ನ ಭಾರೀ ಅಂತರದಲ್ಲಿ ಗೆಲುವು ಕಾಣಬೇಕಿದೆ. ಯಾಕಂದ್ರೆ, 14 ಪಂದ್ಯದಲ್ಲಿ 7 ಪಂದ್ಯವನ್ನಷ್ಟೇ ಗೆದ್ದರೆ, ರನ್ರೇಟ್ ಮೇಲೆ ಆರ್ಸಿಬಿಯ ಪ್ಲೇಆಫ್ ಭವಿಷ್ಯ ನಿರ್ಧಾರವಾಗುತ್ತೆ. ಹೀಗಾಗಿ ಬಿಗ್ ಮಾರ್ಜಿನ್ ಗೆಲುವು ಬೇಕಿದೆ.
ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಕಾರು-ಟ್ರಕ್ ಮಧ್ಯೆ ಭೀಕರ ಅಪಘಾತ; ನಾಲ್ವರು ಸ್ಥಳದಲ್ಲೇ ಸಾವು
ತವರಿನಾಚೆಯೂ ಗೆಲ್ಲಬೇಕಾದ ಸವಾಲ್..!
ಆರ್ಸಿಬಿ 8 ಲೀಗ್ ಪಂದ್ಯಗಳನ್ನ ಆಡಲಿದ್ದು, ಈ ಎಲ್ಲಾ ಪಂದ್ಯಗಳ ಪೈಕಿ ತವರಿನಾಚೆಯ ಪಂದ್ಯಗಳನ್ನ ಗೆಲ್ಲಬೇಕಾದ ಸವಾಲು ಇದೆ. ತವರಿನಲ್ಲಿ ಕೇವಲ ಒಂದು ಮ್ಯಾಚ್ ಗೆದ್ದಿರುವ ಆರ್ಸಿಬಿ, ತವರಿನ ಹೊರಗೆ ಆಡಿರೋ ಮೂರು ಪಂದ್ಯಗಳನ್ನ ಕೈಚೆಲ್ಲಿದೆ. ಹೀಗಾಗಿ ಮುಂದಿನ ತವರಿನಂಗಳದಾಚೆ ಗೆಲ್ಲೋದು ಬಿಗ್ ಟಾಸ್ಕ್.
ತವರಿನ ಪಂದ್ಯಗಳೇ ಆರ್ಸಿಬಿ ಕ್ರೂಶಿಯಲ್..!
ತವರಿನಾಚೆಗೆ ಮಾತ್ರವಲ್ಲ. ತವರಿನ ಚಿನ್ನಸ್ವಾಮಿಯಲ್ಲೂ ಆರ್ಸಿಬಿ ಗೆಲ್ಲೋಕೆ ಪರದಾಡುತ್ತಿದೆ. ತವರಿನಲ್ಲಿ ಆಡಿದ 4ರಲ್ಲಿ ಕೇವಲ 1ರಲ್ಲಷ್ಟೇ ಗೆದ್ದಿದೆ. ಹೀಗಾಗಿ ತವರಿನಲ್ಲಿ ಸನ್ ರೈಸರ್ಸ್ ಹೈದ್ರಾಬಾದ್, ಗುಜರಾತ್ ಟೈಟನ್ಸ್, ಡೆಲ್ಲಿ, ಚೆನ್ನೈ ಎದುರು ಗೆಲ್ಲಬೇಕು. ಕೊನೆ 3 ಪಂದ್ಯಗಳನ್ನ ಚಿನ್ನಸ್ವಾಮಿಯಲ್ಲೇ ಆಡಲಿರುವ ಆರ್ಸಿಬಿಗೆ, ಈ ಪಂದ್ಯಗಳೇ ಕ್ರೂಶಿಯಲ್ ರೋಲ್ ಪ್ಲೇ ಮಾಡುತ್ತೆ. ಆದ್ರೆ, ಇದಕ್ಕೂ ಹಿಂದಿನ 5 ಪಂದ್ಯಗಳ ಗೆಲುವು ಇಂಪಾರ್ಟೆಟ್..
ಇದನ್ನೂ ಓದಿ: ಲಕ್ನೋ ವಿರುದ್ಧ ಗೆದ್ದು ಬೀಗಿದ ಡೆಲ್ಲಿ ಕ್ಯಾಪಿಟಲ್ಸ್; ಈ ವಿಚಾರದಲ್ಲಿ ಆರ್ಸಿಬಿಗೆ ಭಾರೀ ಮುಜುಗರ..!
ಹಾರ್ಡ್ ವರ್ಕ್ ಜೊತೆ ಕೈ ಹಿಡಿಯಬೇಕಿದೆ ಲಕ್..!
ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಗೆಲುವೊಂದೇ ಅಲ್ಲ. ಲಕ್ ಕೂಡ ಕೈಹಿಡಿಯಬೇಕಿದೆ. ಯಾಕಂದ್ರೆ, 9ನೇ ಸ್ಥಾನದಲ್ಲಿರುವ ಆರ್ಸಿಬಿ, 4ನೇ ಸ್ಥಾನಕ್ಕೇರಬೇಕಾದ್ರೆ, ಆರ್ಸಿಬಿ ಮೇಲಿನ ತಂಡಗಳ ಸೋಲು ಕೂಡ ಸಾಥ್ ನೀಡಬೇಕು. ಆ ಸೋಲುಗಳು ಆರ್ಸಿಬಿಗೆ ವರವಾಗಿ ಪರಣಮಿಸಬೇಕು. ಇದೆಲ್ಲವೂ ನಡೆದರಷ್ಟೇ ಆರ್ಸಿಬಿಗೆ ಉಳಿಗಾಲ. ಒಟ್ನಲ್ಲಿ! ಸಾಲು ಸಾಲು ವೈಫಲ್ಯ ಅನುಭವಿಸಿರೋ ಆರ್ಸಿಬಿ, ಪ್ಲೇ-ಆಫ್ಗೇರಲು ಅವಕಾಶವೇನೋ ಇದೆ. ಜೊತೆಗೆ ಪವಾಡವೂ ನಡೆಯಬೇಕಿದೆ. ಹೀಗಾಗಿ ಆರ್ಸಿಬಿ ಮುಂದಿನ ಕಥೆ ಏನು ಅನ್ನೋದಕ್ಕೆ ಕಾಲವೇ ಉತ್ತರಿಸಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್