ಪ್ರತಿಯೊಬ್ಬರೂ ತಿನ್ನುವ ತಿಂಡಿಯನ್ನು ಒಮ್ಮೆಯಾದರೂ ಪರೀಕ್ಷಿಸಿ
ರೆಸ್ಟೋರೆಂಟ್ವೊಂದರಲ್ಲಿ ಆರ್ಡರ್ ಮಾಡಿದ್ದ ವ್ಯಕ್ತಿಗೆ ಫುಲ್ ಶಾಕ್
ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ಈ ವಿಡಿಯೋ
ಚಂಡೀಗಢ: ಇತ್ತೀಚಿನ ದಿನಗಳಲ್ಲಿ ಜನರು ತಿನ್ನುವ ಊಟದಲ್ಲಿ ಸತ್ತ ಜಿರಳೆ, ಹುಳುಗಳು ಪತ್ತೆಯಾಗಿದ್ದವು. ಇದೀಗ ವ್ಯಕ್ತಿಯೊಬ್ಬ ರೆಸ್ಟೋರೆಂಟ್ವೊಂದರಲ್ಲಿ ಆರ್ಡರ್ ಮಾಡಿದ್ದ ವೆಜ್ ಚೀಸ್ ಟ್ಯಾಕೋದಲ್ಲಿ ಸತ್ತ ನೊಣ ಪತ್ತೆಯಾಗಿದೆ. ಇದನ್ನು ನೋಡಿದ ಪಂಜಾಬ್ನ ಫುಡ್ ವ್ಲಾಗರ್ ಕೂಡಲೇ ವೀಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾನೆ.
View this post on Instagram
ಕಳೆದ ರಾತ್ರಿ 1:20ಕ್ಕೆ ನಾನು ವೆಜ್ ಚೀಸ್ ಟ್ಯಾಕೋವನ್ನು ಆರ್ಡರ್ ಮಾಡಿದ್ದೇನೆ. ಆರ್ಡರ್ ಬಂದ ಬಳಿಕ ಅದನ್ನು ನಾನು ತಿನ್ನುವ ಮೊದಲು ಪರೀಕ್ಷಿಸಿದೆ. ಏಕೆಂದರೆ ಅದು ತುಂಬಾ ಎಣ್ಣೆಯುಕ್ತವಾಗಿತ್ತು. ನನ್ನ ಆರ್ಡರ್ ಮಾಡಿದ್ದ ಟ್ಯಾಕೋದಲ್ಲಿ ಸತ್ತ ನೊಣ ನೋಡಿ ಒಂದು ಕ್ಷಣ ಶಾಕ್ ಆಗಿಬಿಟ್ಟೆ. ಪ್ರತಿಯೊಬ್ಬರೂ ತಮ್ಮ ಆಹಾರವನ್ನು ಎಚ್ಚರಿಕೆಯಿಂದ ಪರೀಕ್ಷಿಸಿ ತಿನ್ನಲು ಸುರಕ್ಷಿತವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ ಎಂದು ಶೇರ್ ಮಾಡಿಕೊಂಡ ಪೋಸ್ಟ್ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಮಹಿಳೆಯರೇ ಎಚ್ಚರ.. ಮಗನೊಂದಿಗೆ ಸರಗಳ್ಳತನ ಮಾಡುತ್ತಿದ್ದ ತಾಯಿ ಅರೆಸ್ಟ್
ಇನ್ನು ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ. ಓರ್ವ ನೆಟ್ಟಿಗ ನನಗೂ ಕೂಡ ಇದೇ ರೀತಿಯ ಅನುಭವ ಆಗಿದೆ. ನಾನು ತಿಂದ ಆಹಾರದಲ್ಲಿ ಕೋಳಿ ರೆಕ್ಕೆಗಳು ಪತ್ತೆಯಾಗಿದ್ದವು ಎಂದು ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬರ್ಗರ್ ಕಿಂಗ್ನ ಸಿಬ್ಬಂದಿ ಪ್ರತಿಕ್ರಿಯೆ ನೀಡಿ, ನಾವು ಅಂತಹ ಅನುಭವವನ್ನು ನೀಡಲು ಎಂದಿಗೂ ಉದ್ದೇಶಿಸಿಲ್ಲ. ದಯವಿಟ್ಟು ನಿಮ್ಮ ಫೊನ್ ನಂಬರ್ ಹಾಗೂ ಸ್ಟೋರ್ ವಿಳಾಸ ಮತ್ತು ಆರ್ಡರ್ ಐಡಿಯನ್ನು ನಮಗೆ DM ಮಾಡಬಹುದೇ? ಇದರಿಂದ ನಾವು ನಿಮ್ಮನ್ನು ಸಂಪರ್ಕಿಸಬಹುದು? ನಾವು ಇದನ್ನು ಸಂಪೂರ್ಣವಾಗಿ ತನಿಖೆ ಮಾಡುತ್ತೇವೆ ಎಂದು ಹೇಳಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ